ಓಲಾ ಇಲೆಕ್ಟ್ರಿಕ್‌ ಸ್ಕೂಟರ್‌ : ಮಾರಾಟ ಆರಂಭವಾದ 2 ದಿನದಲ್ಲಿ 1100 ಕೋಟಿ ವ್ಯವಹಾರ..!

ನವದೆಹಲಿ : ಓಲಾ ಎಲೆಕ್ಟ್ರಿಕ್ ಸ್ಕೂಟರ್ (OLA Electric Scooter Booking) ಎಸ್ 1 ಮತ್ತು ಓಲಾ ಎಸ್ 1 ಪ್ರೊ ಮಾರಾಟದ ಬುಕ್ಕಿಂಗ್‌ ಸೆಪ್ಟೆಂಬರ್ 15 ರಂದು ಆರಂಭವಾಗಿದ್ದು, ಎರಡು ದಿನಗಳಲ್ಲಿ ಮಾರಾಟದಲ್ಲಿ 1100 ಕೋಟಿ ರೂಪಾಯಿಗಳ ವ್ಯವಹಾರ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.
ಮೊದಲ ದಿನ, ಓಲಾ 600 ರೂ.ಗಳಷ್ಟು ಮಾರಾಟ ವಹಿವಾಟು ಹೊಂದಿದ್ದು, ಭಾರತದಲ್ಲಿ ಸಂಪೂರ್ಣ ದ್ವಿಚಕ್ರ ವಾಹನ ವಿಭಾಗದ ಒಂದು ದಿನದ ಮಾರಾಟಕ್ಕಿಂತ ಇದು ಹೆಚ್ಚಾಗಿದೆ ಎಂದು ಕಂಪನಿಯು ಹೇಳಿಕೊಂಡಿದೆ.
ಓಲಾ ಎಲೆಕ್ಟ್ರಿಕ್​ ಸ್ಕೂಟರ್​ನ ಆನ್​​ಲೈನ್​ ಖರೀದಿಗಾಗಿ ಒದಗಿಸಿದ್ದ ಮೊದಲ ಅವಕಾಶದಲ್ಲೇ 1,100 ಕೋಟಿ ರೂಪಾಯಿಗೂ ಹೆಚ್ಚು ದಾಖಲೆ ಮೊತ್ತದ ವಾಹನಗಳ ಮಾರಾಟ ನಡೆದಿದೆ ಎಂದು ಓಲಾ ಕಂಪೆನಿ ಸಿಇಒ ಭವಿಶ್​ ಅಗರ್​ವಾಲ್​ ತಿಳಿಸಿದ್ದಾರೆ.
ಓಲಾದ ಎಸ್​1 ಮತ್ತು ಎಸ್​1 ಪ್ರೋ ಸ್ಕೂಟರ್​ಗಳ ಖರೀದಿಗಾಗಿ ಗ್ರಾಹಕರಿಗೆ ಸೆಪ್ಟೆಂಬರ್​ 15 ಮತ್ತು 16 ರಂದು ಒಟ್ಟು 48 ಗಂಟೆಗಳ ಕಾಲ ಪರ್ಚೇಸ್​ ವಿಂಡೋ ತೆರೆಯಲಾಗಿತ್ತು.
ಇದು ಭಾರತೀಯ ಈ-ಕಾಮರ್ಸ್​ ಇತಿಹಾಸದಲ್ಲಿ ಒಂದೇ ಉತ್ಪನ್ನಕ್ಕೆ ಒಂದು ದಿನದಲ್ಲಿ ನಡೆದಿರುವ ಅತಿ ಹೆಚ್ಚಿನ ಮಾರಾಟ ವಹಿವಾಟಾಗಿದೆ. ನಾವು ನಿಜವಾದ ಡಿಜಿಟಲ್​ ಇಂಡಿಯಾದಲ್ಲಿ ಬದುಕುತ್ತಿದ್ದೇವೆ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದು ಭಾರತೀಯ ಈ-ಕಾಮರ್ಸ್​ ಇತಿಹಾಸದಲ್ಲಿ ಒಂದೇ ಉತ್ಪನ್ನಕ್ಕೆ ಒಂದು ದಿನದಲ್ಲಿ ಮೊತ್ತ ದೃಷ್ಟಿಯಿಂದ ನಡೆದಿರುವ ಅತಿ ಹೆಚ್ಚಿನ ಮಾರಾಟ ವಹಿವಾಟಾಗಿದೆ. ನಾವು ನಿಜವಾದ ಡಿಜಿಟಲ್​ ಇಂಡಿಯಾದಲ್ಲಿ ಬದುಕುತ್ತಿದ್ದೇವೆ’ ಎಂದು ಭವಿಶ್​ ಅಗರ್​ವಾಲ್​ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪರ್ಚೇಸ್​ ವಿಂಡೋ ತೆರೆದಾಗ ಕನಿಷ್ಠ 20,000 ರೂ.ಗಳ ಮೊತ್ತ ಪಾವತಿಸಿ, ಗ್ರಾಹಕರು ಓಲಾ ಸ್ಕೂಟರನ್ನು ಬುಕ್​ ಮಾಡಲು ಅವಕಾಶ ನೀಡಲಾಯಿತು. ಸದ್ಯಕ್ಕೆ ಪರ್ಚೇಸ್​​ ವಿಂಡೋವನ್ನು ಮುಚ್ಚಲಾಗಿದ್ದು, ಮತ್ತೆ ನವೆಂಬರ್ 1ಕ್ಕೆ ದೀಪಾವಳಿಯ ಸಮಯಕ್ಕೆ ತೆರೆಯಲಾಗುತ್ತದೆ. ಈ ಎರಡು ದಿನಗಳಲ್ಲಿ ಖರೀದಿಸಲಾಗದೇ ಇರುವವರು, ಸದ್ಯಕ್ಕೆ, ಈ ಸ್ಕೂಟರನ್ನು ಕಂಪೆನಿಯ ವೆಬ್​ಸೈಟ್​ olaelectric.comಗೆ ಹೋಗಿ 499 ರೂ. ಪಾವತಿಸಿ ಆನ್​ಲೈನ್​ ಸ್ಲಾಟ್​ಅನ್ನು ಬುಕ್​ ಮಾಡಬಹುದು ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

ಇ-ಸ್ಕೂಟರ್ ಮಾರಾಟವು ಸೆಪ್ಟೆಂಬರ್ 8 ರಿಂದ ಆರಂಭವಾಗಬೇಕಿತ್ತು, ಆದರೆ ವೆಬ್‌ಸೈಟ್ ಖರೀದಿಗೆ ಲೈವ್ ಆಗಲು ಕಂಪನಿಯು ಎದುರಿಸಿದ ತಾಂತ್ರಿಕ ತೊಂದರೆಗಳಿಗಾಗಿ ಒಂದು ವಾರವನ್ನು ಸೆಪ್ಟೆಂಬರ್ 15 ಕ್ಕೆ ಮುಂದೂಡಲಾಯಿತು. ಇ-ಸ್ಕೂಟರ್ ಪ್ರಸ್ತುತ ಓಲಾ ಆಪ್‌ನಲ್ಲಿ ಮಾತ್ರ ಖರೀದಿಸಲು ಲಭ್ಯವಿದೆ ಮತ್ತು ವೆಬ್‌ಸೈಟ್‌ನಲ್ಲಿ ಅಲ್ಲ. ಇ-ಸ್ಕೂಟರ್‌ಗಳ ವಿತರಣೆಯು ಮುಂದಿನ ತಿಂಗಳಿನಿಂದ ಪ್ರಾರಂಭವಾಗುತ್ತದೆ ಮತ್ತು ಖರೀದಿಸಿದ 72 ಗಂಟೆಗಳಲ್ಲಿ ಗ್ರಾಹಕರಿಗೆ ಅಂದಾಜು ತಾತ್ಕಾಲಿಕ ವಿತರಣಾ ದಿನಾಂಕಗಳನ್ನು ತಿಳಿಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ.
ಓಲಾ ಎಲೆಕ್ಟ್ರಿಕ್ ಆಗಸ್ಟ್ 15 ರಂದು ತನ್ನ ಓಲಾ ಎಸ್ 1 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಎಸ್ 1 ಮತ್ತು ಎಸ್ 1 ಪ್ರೊ ಎಂಬ ಎರಡು ವೆರಿಯಂಟ್ ಗಳಲ್ಲಿ ಕ್ರಮವಾಗಿ 99,999 ಮತ್ತು 1,29,999 ರೂ.ಬೆಲೆಯಲ್ಲಿ ಬಿಡುಗಡೆ ಮಾಡಿದೆ.
ಕಂಪನಿಯು ಮತ್ತೊಂದು ಪ್ರಕಟಣೆಯಲ್ಲಿ ಓಲಾ ಕಾರ್ಖಾನೆಯನ್ನು ಎಲ್ಲಾ ಮಹಿಳಾ ಕಾರ್ಮಿಕರಿಂದ ನಡೆಸಲಾಗುವುದು ಎಂದು ಹೇಳಿದೆ. ಓಲಾ ಪ್ರತಿ ವರ್ಷ 10 ಲಕ್ಷ ಇ-ವಾಹನಗಳನ್ನು ತಯಾರಿಸಲು 10,000 ಕ್ಕೂ ಹೆಚ್ಚು ಮಹಿಳೆಯರನ್ನು ನೇಮಿಸಿಕೊಂಡಿದೆ, ವಾರ್ಷಿಕ 1 ಕೋಟಿ ಉತ್ಪಾದನೆಯ ನಿರೀಕ್ಷೆಯಲ್ಲಿದೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

,

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement