ಪಾಕ್ ಗೆ ಮುಖಭಂಗ..:ಭದ್ರತಾ ಕಾರಣದಿಂದ ಪಂದ್ಯ ಆರಂಭಕ್ಕೆ ಕೆಲವು ನಿಮಿಷಗಳಿರುವಾಗ ಕ್ರಿಕೆಟ್ ಸರಣಿಯನ್ನೇ ರದ್ದು ಮಾಡಿದ ಕಿವೀಸ್..!

ರಾವಲ್ಪಿಂಡಿ: ಪಾಕಿಸ್ತಾನ ಕ್ರಿಕೆಟ್​ ಪ್ರಪಂಚದ ಮುಂದೆ ತಲೆ ಬಾಗಬೇಕಾದ ಪ್ರಸಂಗ ಎದುರಾಗಿದೆ. 18 ವರ್ಷಗಳ ಬಳಿಕ ಮೊದಲ ಬಾರಿಗೆ ಪಾಕಿಸ್ಥಾನ ಪ್ರವಾಸ ಕೈಗೊಂಡಿದ್ದ ನ್ಯೂಜಿಲ್ಯಾಂಡ್ ತಂಡ ಪಂದ್ಯಾರಂಭಕ್ಕೂ ಮೊದಲೇ ಸರಣಿಯನ್ನೇ ರದ್ದು ಮಾಡಿದೆ. ಭದ್ರತಾ ಕಾರಣಗಳಿಗಾಗಿ ಸರಣಿ ರದ್ದಾಗಿದೆ ಎಂದು ವರದಿಗಳು ತಿಳಿಸಿವೆ.
ರಾವಲ್ಪಿಂಡಿಯಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ನಡುವಿನ ಮೊದಲ ಏಕದಿನ ಪಂದ್ಯ ಆರಂಭಕ್ಕೆ ಕೆಲವು ನಿಮಿಷಗಳು ಬಾಕಿ ಇರುವಾಗ, ಭದ್ರತಾ ಕಾಳಜಿಯಿಂದಾಗಿ ಬ್ಲ್ಯಾಕ್ ಕ್ಯಾಪ್ಸ್ ನ ಸಂಪೂರ್ಣ ವೈಟ್ ಬಾಲ್ ಪ್ರವಾಸವನ್ನು ರದ್ದುಗೊಳಿಸಲಾಗಿದೆ. ನ್ಯೂಜಿಲ್ಯಾಂಡ್ ಕ್ರಿಕೆಟ್ (NZC) ಈಗ ಆಟಗಾರರ ನಿರ್ಗಮನದ ವ್ಯವಸ್ಥೆಯನ್ನು ಮಾಡುತ್ತಿದೆ ಎಂದು ತಿಳಿಸಲಾಗಿದೆ.
. ನ್ಯೂಜಿಲ್ಯಾಂಡ್ ಕ್ರಿಕೆಟ್ (NZC) ತನ್ನ ಹೇಳಿಕೆಯಲ್ಲಿ ಭದ್ರತಾ ಕಾಳಜಿಯನ್ನು ಬೃಹತ್ ನಿರ್ಧಾರಕ್ಕೆ ಕಾರಣವೆಂದು ಉಲ್ಲೇಖಿಸಿದೆ ಮತ್ತು ಆಟಗಾರರ ನಿರ್ಗಮನದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.
ಶುಕ್ರವಾರ ರಾವಲ್ಪಿಂಡಿಯಲ್ಲಿ ಮೊದಲ ಏಕದಿನ ಪಂದ್ಯ ನಿಗದಿಯಾಗಿತ್ತು. ಆದರೆ ಭದ್ರತಾ ಭೀತಿಯ ಕಾರಣದಿಂದ ನ್ಯೂಜಿಲ್ಯಾಂಡ್ ಆಟಗಾರರು ಮೈದಾನಕ್ಕೆ ಆಗಮಿಸದೆ ಹೋಟೆಲ್ ರೂಮ್ ನಲ್ಲೇ ಉಳಿದುಕೊಂಡಿದ್ದಾರೆ. ಆಟಗಾರರು ಮೈದಾನಕ್ಕೆ ಕಾಲಿಡಬಾರದು ಎಂದು ನ್ಯೂಜಿಲ್ಯಾಂಡ್ ತಂಡದ ಭದ್ರತಾ ಸಲಹೆಗಾರರು ವರದಿ ನೀಡಿದ ಕಾರಣ ಆಟಗಾರರು ಹೋಟೆಲ್ ನಿಂದ ಹೊರಬಂದಿಲ್ಲ ಎಂದು ವರದಿ ತಿಳಸಿದೆ.
ಕೆಲವು ಭದ್ರತಾ ತುರ್ತಿನ ಬಗ್ಗೆ ಅವರಿಗೆ ಎಚ್ಚರಿಕೆ ನೀಡಲಾದ ಕಾರಣ ಏಕಪಕ್ಷೀಯವಾಗಿ ಸರಣಿಯನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್‌ ಮಂಡಳಿ ತಿಳಿಸಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿಕೆ ನೀಡಿದೆ.
18 ವರ್ಷಗಳ ಬಳಿಕ ನ್ಯೂಜಿಲೆಂಡ್‌ ತಂಡ ಪಾಕ್‌ ನೆಲದಲ್ಲಿ ಅಂತಾರಾಷ್ಟ್ರೀಯ ಪಂದ್ಯವಾಡಲು ಪ್ರವಾಸ ಕೈಗೊಂಡಿತ್ತು. 2003ರಲ್ಲಿ ಇತ್ತಂಡಗಳ ನಡುವೆ ಇಲ್ಲಿ ಕೊನೆಯ ಪಂದ್ಯ ನಡೆದಿತ್ತು. ಆದರೆ ಈ ಪ್ರವಾಸ ಯಾವುದೇ ಪಂದ್ಯಗಳಿಲ್ಲದೆ ಆರಂಭವಾಗುವ ಮೊದಲೇ ಈ ರೀತಿ ಅಂತ್ಯವಾಗಿದೆ.
ಈ ಪ್ರವಾಸದಲ್ಲಿ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳು ನಿಗದಿಯಾಗಿತ್ತು. ಸೆ.17ರಿಂದ ಅ.3ರವರೆಗೆ ರಾವಲ್ಪಿಂಡಿ ಮತ್ತು ಲಾಹೋರ್ ನಲ್ಲಿ ಈ ಸರಣಿ ನಡೆಯಲಿತ್ತು.

ಪ್ರಮುಖ ಸುದ್ದಿ :-   ದಾಖಲೆಯ 613 ದಿನಗಳ ಕಾಲ ಕೋವಿಡ್‌ ಜೊತೆ ಜೀವಿಸಿದ್ದ 72 ವರ್ಷದ ವ್ಯಕ್ತಿ ; ಸಾಯುವ ಮೊದಲು ಆತನ ದೇಹದಲ್ಲಿ ಕೊರೊನಾ ವೈರಸ್‌ 50ಕ್ಕೂ ಹೆಚ್ಚು ಬಾರಿ ರೂಪಾಂತರಗೊಂಡಿತ್ತು..!

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement