ಫಲಿಸದ ಪ್ರಾರ್ಥನೆ :ಕೊಳವೆ ಬಾವಿಗೆ ಬಿದ್ದ ಎರಡು ವರ್ಷದ ಮಗು ಶವವಾಗಿ ಪತ್ತೆ

ಬೆಳಗಾವಿ : ಎರಡು ವರ್ಷದ  ಮಗುವೊಂದು ತೆರೆದ ಬೋರ್ ವೆಲ್ ಗೆ ಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಅಲಖನೂರು ಗ್ರಾಮದಲ್ಲಿ ನಡೆದಿದ್ದು, ಆದರೆ ಮಗು ಶವವಾಗಿ ಪತ್ತೆಯಾಗಿದೆ.
ಕೊಳವೆ ಬಾವಿಗೆ ಬಿದ್ದ ಬಾಲಕ ಶರತ್ ಮೃತದೇಹ ಪತ್ತಯಾಗಿದ್ದು, ಎರಡು ವರ್ಷದ ಬಾಲಕ ಶರತ್ ಹಸಿವೆ 15 ಅಡಿ ಆಳದ ಬೋರ್ ವೆಲ್ ನಲ್ಲಿ ಬಿದ್ದಿದ್ದು, ಬಾಲಕನನ್ನು ಸುರಕ್ಷಿತವಾಗಿ ಹೊರಕ್ಕೆ ತೆಗೆಯಲು ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಮಗು ಶವವಾಗಿ ಪತ್ತೆಯಾಗಿದೆ.
ಅಲಖನೂರ ಗ್ರಾಮದಲ್ಲಿ ನಿನ್ನೆಯ ದಿನ ಎರಡು ವರ್ಷದ ಮಗು ಶರತ್ ಕಾಣೆಯಾಗಿದ್ದ. ಹಾಲಪ್ಪ ಎಂಬುವವರ ತೋಟದ ನಿವಾಸದಲ್ಲಿ ಆಡುತ್ತಿದ್ದಾಗ ಬಾಲಕ ಕಾಣೆಯಾಗಿದ್ದ. ಈ ಕುರಿತು ಹಾರೂಗೇರಿ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದರು. ನಂತರ ಹೊಲದಲ್ಲಿ ಬೋರ್ ವೆಲ್ ಒಳಗೆ ಬಾಲಕ ಬಿದ್ದಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ನಂತರ ರಕ್ಷಣಾ ಕಾರ್ಯ ಆರಂಭವಾಗಿ 15 ಅಡಿ ಆಳದಲ್ಲಿ ಸಿಲುಕಿರುವ ಕಂದಮ್ಮನ ರಕ್ಷಣೆಗೆ ಅಗ್ನಿಶಾಮಕ ದಳ, ಎನ್ ಡಿ ಆರ್ ಎಫ್ ಸಿಬ್ಬಂದಿ ಧಾವಿಸಿತ್ತು,ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಅಧಿಕಾರಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದರು. ಪೊಲೀಸರು ಅಗ್ನಿಶಾಮಕ ಮತ್ತು ತುರ್ತು ಸೇವೆ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದರು. ಆದರೆ, ಕತ್ತಲಾಗಿರುವುದರಿಂದ ಕಾರ್ಯಾಚರಣೆಗೆ ಹಿನ್ನಡೆಯಾಗಿದೆ. ಬೆಳಕಿನ ವ್ಯವಸ್ಥೆ ಸೇರಿದಂತೆ ಅಗತ್ಯ ವ್ಯವಸ್ಥೆಗಳೊಂದಿಗೆ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಆದರೆ ಮಗು ಶವವಾಗಿ ಪತ್ತೆಯಾಗಿದ್ದು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಆರು ತಿಂಗಳ ಹಿಂದೆಯಷ್ಟೇ ಜಮೀನಿನಲ್ಲಿ ಬೋರ್ವೆಲ್ ಕೊರೆಸಲಾಗಿದ್ದು, ಆದರೆ ನೀರು ಸಿಗದ ಕಾರಣ ಬೋರ್ವೆಲ್ ಮುಚ್ಚದೆ ಹಾಗೆ ಬಿಡಲಾಗಿತ್ತು. ಬೋರ್ವೆಲ್ ಮುಚ್ಚದೆ ಹಾಗೆ ಬಿಟ್ಟಿದ್ದ ಹಿನ್ನೆಲೆಯಲ್ಲಿ ದುರ್ಘಟನೆ ಸಂಭವಿಸಿದೆ.

ಪ್ರಮುಖ ಸುದ್ದಿ :-   ಬೆಂಗಳೂರಲ್ಲಿ 'ಸಿಮ್ ಬಾಕ್ಸ್' ಜಾಲ ಪತ್ತೆ ; ನಾಲ್ವರ ಬಂಧನ, 320 ಸಿಮ್‌ ಕನೆಕ್ಷನ್‌ ಸಾಮರ್ಥ್ಯದ 10 ಸಾಧನ ವಶ

 

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement