ದಲಿತ ದಾಳ ಉರುಳಿಸಿದ ಕಾಂಗ್ರೆಸ್‌: ಚರಣಜಿತ್ ಸಿಂಗ್ ಚನ್ನಿ ಪಂಜಾಬಿನ ಮೊದಲ ದಲಿತ ಸಿಎಂ

ನವದೆಹಲಿ: ಅಚ್ಚರಿಯ ಹಾಗೂ ಲೆಕ್ಕಾಚಾರದ ಬೆಳವಣಿಗೆಯಲ್ಲಿ ಪಂಜಾಬಿನ ಮುಂದಿನ ಮುಖ್ಯಮಂತ್ರಿಯಾಗಿ ಚಮ್ಕೌರ್ ಸಾಹಿಬ್ ಶಾಸಕ ಚರಣಜಿತ್ ಸಿಂಗ್ ಚನ್ನಿಯನ್ನು ಕಾಂಗ್ರೆಸ್ ಹೆಸರಿಸಿದೆ.

ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ತಾಂತ್ರಿಕ ಶಿಕ್ಷಣ ಸಚಿವ ಚರಣ್ಜಿತ್ ಸಿಂಗ್ ಚನ್ನಿ ಅವರ ಹೆಸರನ್ನು ಪಂಜಾಬ್‌ನ ಮುಂದಿನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಭಾನುವಾರ ಘೋಷಿಸಿದೆ.

ಚನ್ನಿ ಪ್ರಮಾಣವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಸೆಪ್ಟೆಂಬರ್ 20ರ ಸೋಮವಾರ ಬೆಳಗ್ಗೆ 11 ಗಂಟೆಗೆ ಚಂಡೀಗಢದ ರಾಜಭವನದಲ್ಲಿ ನೂತನ ಸಿಎಂ ಆಗಿ ಚರಂಜಿತ್ ಸಿಂಗ್ ಚನ್ನಿ ಪದಗ್ರಹಣ ಮಾಡಲಿದ್ದಾರೆ.
ಮುಂಬರುವ 2022 ರ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್‌ನ 32 ಪ್ರತಿಶತ ದಲಿತ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಪಂಜಾಬ್‌ನಲ್ಲಿ ಮೊದಲ ದಲಿತ ಮುಖ್ಯಮಂತ್ರಿಯನ್ನು ನೇಮಕ ಮಾಡಿದೆ. 47 ವರ್ಷದ ಚನ್ನಿ ಚಮಕೌರ್ ಸಾಹಿಬ್ ನಿಂದ ಮೂರನೇ ಬಾರಿ ಶಾಸಕರಾಗಿದ್ದಾರೆ.
ಪಂಜಾಬಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮತ್ತು ಅದರ ಸರ್ಕಾರದ ಮುಖ್ಯಸ್ಥರಾಗಿ ಚರಣಜಿತ್ ಸಿಂಗ್ ಚನ್ನಿಯವರ ಆಯ್ಕೆಯನ್ನು ರಾಜ್ಯ ಉಸ್ತುವಾರಿ ಹರೀಶ್ ರಾವತ್ ದೃಢಪಡಿಸಿದ್ದಾರೆ.
ಏತನ್ಮಧ್ಯೆ, ಮೂಲಗಳು ಅರುಣಾ ಚೌಧರಿ ಮತ್ತು ಭರತ್ ಭೂಷಣ್ ಅಶು ಅವರು ಪಂಜಾಬ್‌ನ ಮುಂದಿನ ಉಪಮುಖ್ಯಮಂತ್ರಿಗಳಾಗಲಿದ್ದಾರೆ ಎಂದು ತಿಳಿಸಿದೆ. ಅರುಣಾ ಚೌಧರಿ ದಲಿತ ಸಮುದಾಯವನ್ನು ಪ್ರತಿನಿಧಿಸುತ್ತಾರೆ.
ಹಿಂದಿನ ದಿನ, ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯು ಮುಂದಿನ ಮುಖ್ಯಮಂತ್ರಿಯಾಗಿ ಸುಖಜಿಂದರ್ ಸಿಂಗ್ ರಾಂಧವಾ ಅವರ ಹೆಸರನ್ನು ಅಂತಿಮಗೊಳಿಸಿದೆ ಎಂದು ಮೂಲಗಳು ತಿಳಿಸಿತ್ತು. ಶನಿವಾರ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ ನಂತರ ಅಗ್ರ ಸ್ಥಾನಕ್ಕೆ ಇತರ ಮುಂಚೂಣಿಯಲ್ಲಿರುವವರಲ್ಲಿ ನವಜೋತ್ ಸಿಂಗ್ ಸಿಧು, ಸುನೀಲ್ ಜಾಖರ್, ಪಿಸಿಸಿ ಮುಖ್ಯಸ್ಥ ಪ್ರತಾಪ್ ಬಾಜ್ವಾ, ಕಾಂಗ್ರೆಸ್ ರಾಜ್ಯಸಭಾ ಸಂಸದ ಅಂಬಿಕಾ ಸೋನಿ ಮತ್ತು ರಾಜ್ಯ ಸಚಿವರಾದ ಸುಖಬಿಂದರ್ ಸಿಂಗ್ ಸರ್ಕಾರಿಯಾ ಮತ್ತು ರಾಜಿಂದರ್ ಬಜ್ವಾ ಹೆಸರಿತ್ತು.
ಅಮರಿಂದರ್ ಸಿಂಗ್ ನೇತೃತ್ವದ ಸರ್ಕಾರದ ಅವಧಿಯಲ್ಲಿ, ಚರಣಜಿತ್ ಸಿಂಗ್ ಚನ್ನಿ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವ್ಯವಹಾರಗಳು, ತಾಂತ್ರಿಕ ಶಿಕ್ಷಣ ಮತ್ತು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಎಂಬ ಮೂರು ವಿಭಾಗಗಳ ನೇತೃತ್ವ ವಹಿಸಿದ್ದರು. ಅವರು ಚಮಕೌರ್ ಸಾಹಿಬ್ ಕ್ಷೇತ್ರದಿಂದ ಮೂರನೇ ಬಾರಿ ಶಾಸಕರಾಗಿದ್ದಾರೆ.
ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆಗೆ ನಾಲ್ಕು ತಿಂಗಳು ಮಾತ್ರ ಬಾಕಿ ಇರುವಾಗ, ಕಾಂಗ್ರೆಸ್‌ನ ಹಿರಿಯ ನಾಯಕ ಅಮರೀಂದರ್ ಸಿಂಗ್ ಶನಿವಾರ ರಾಜ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರು, “ಇತ್ತೀಚಿನ ತಿಂಗಳುಗಳಲ್ಲಿ ಮೂರನೇ ಬಾರಿಗೆ” ಶಾಸಕರ ಒಂದು ವಿಭಾಗವು ರಾಜ್ಯ ನಾಯಕತ್ವವನ್ನು ಬದಲಾಯಿಸಲು ಬಯಸಿದ ನಂತರ ಅಮರಿಂದರ್‌ ಸಿಂಗ್‌ ಅವರು ಇದನ್ನು “ಅವಮಾನ” ಎಂದು ಉಲ್ಲೇಖಿಸಿದರು.
ಪಂಜಾಬ್‌ನ ಕಾಂಗ್ರೆಸ್ ಘಟಕದಲ್ಲಿ ಗುಂಪುಗಾರಿಕೆಗೆ ಕಾರಣವಾದ ಹೊಸದಾಗಿ ನೇಮಕಗೊಂಡ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರೊಂದಿಗಿನ ದೀರ್ಘಕಾಲದ ಜಗಳದ ನಂತರ ಸಿಎಂ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದರು.
ಏತನ್ಮಧ್ಯೆ, ಚರಣ್ಜಿತ್ ಸಿಂಗ್ ಚನ್ನಿ ಹೊಸ ಮುಖ್ಯಮಂತ್ರಿಯಾಗಿ ನೇಮಕಗೊಂಡ ಘೋಷಣೆಯ ನಂತರ, ಸುಖಜಿಂದರ್ ಸಿಂಗ್ ರಾಂಧವಾ, “ಇದು ಹೈಕಮಾಂಡ್ ನಿರ್ಧಾರ, ನಾನು ಅದನ್ನು ಸ್ವಾಗತಿಸುತ್ತೇನೆ. ಚನ್ನಿ ನನ್ನ ಕಿರಿಯ ಸಹೋದರನಂತೆ. ನನಗೆ ಯಾವುದೇ ನಿರಾಶೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| 'ತೃಣಮೂಲ ಕಾಂಗ್ರೆಸ್ಸಿಗಿಂತ ಬಿಜೆಪಿಗೆ ಮತ ಹಾಕುವುದು ಉತ್ತಮ' ಎಂದ ಕಾಂಗ್ರೆಸ್‌ ಹಿರಿಯ ನಾಯಕ...! ಟಿಎಂಸಿ ಕೆಂಡ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement