ನಿಮ್ಮನ್ನು ಅವಮಾನಿಸಿದ ಪಕ್ಷದಲ್ಲಿ ಇರಬೇಡಿ, ಎನ್‌ಡಿಎಗೆ ಬನ್ನಿ ಎಂದು ಅಮರಿಂದ್‌ ಗೆ ಬಹಿರಂಗ ಆಹ್ವಾನ ನೀಡಿದ ಅಠಾವಳೆ

ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ನಾಯಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಿಗೆ ಎನ್‌ಡಿಎ ಸೇರುವಂತೆ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರು ಬಹಿರಂಗ ಆಹ್ವಾನ ನೀಡಿದ್ದಾರೆ.
ಭಾನುವಾರ ಮಾಧ್ಯಮದವರ ಜೊತೆ ಮಾತನಾಡಿರುವ ಅವರು, ನಿಮ್ಮನ್ನು ಅವಮಾನಿಸಿದ ಪಕ್ಷವನ್ನು ತೈಜಿಸುವಂತೆ ಅಮರಿಂದರ್‌ ಅವರಿಗೆ ಹೇಳಿದ ಅವರು, ನಿಮ್ಮನ್ನು ಅಪಮಾನ ಮಾಡಿದ ಪಕ್ಷದಲ್ಲಿ ಮುಂದುವರೆಯುವುದರಿಂದ ಏನು ಉಪಯೋಗ ಎಂದು ನಾನು ಅವರನ್ನು ಕೇಳಲು ಇಚ್ಛಿಸುತ್ತೇನೆ. ಕಾಂಗ್ರೆಸ್ ತೊರೆದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎಗೆ  ಬರುವಂತೆ ನಾನು ಅವರಲ್ಲಿ ಮನವಿ ಮಾಡುತ್ತೇನೆ ಎಂದು ರಾಮದಾಸ್ ಅಠಾವಳೆ ಹೇಳಿದರು.
ಅವರು ಎನ್‌ಡಿಎಗೆ ಬಂದರೆ ಮುಂಬರುವ ಚುನಾವಣೆಯಲ್ಲಿ ಪಂಜಾಬ್‍ನಲ್ಲಿ ಎನ್‍ಡಿಎ ಅಧಿಕಾರಕ್ಕೆ ತರುವಲ್ಲಿ ಅಮರಿಂದರ್ ಅವರು ಬಹುಮುಖ್ಯ ಪಾತ್ರ ವಹಿಸಬಹುದು ಎಂದು ಹೇಳಿದ್ದಾರೆ.
ನವಜೋತ್ ಸಿಂಗ್ ಸಿಧು ಅವರು ದೇಶ ವಿರೋಧಿ ಎಂದು ಕ್ಯಾಪ್ಟನ್‌ ಅಮರಿಂದರ್ ಸಿಂಗ್ ಕರೆದಿರುವುದರಲ್ಲಿ ಯಾವುದೇ ತಪ್ಪಿಲ್ಲ. ಅವರು ಹೇಳಿರುವುದು ಸರಿ ಇದೆ ಎಂದು ಅಠಾವಳೆ ಇದೇ ಸಂದರ್ಭದಲ್ಲಿ ಅಮರಿಂದರ್‌ ಹೇಳಿಕೆ ಬೆಂಬಲಿಸಿದರು.
ಶನಿವಾರ ಅಮರಿಂದರ್ ಸಿಂಗ್ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅಸಮಾಧಾನ ಹೊರಹಾಕಿದ ಅವರು, ಪಕ್ಷದಿಂದ ನಾನು ಅವಮಾನಿತನಾದೆ ಎಂದರು. ಜೊತೆಗೆ ತಮ್ಮ ರಾಜಕೀಯ ವಿರೋಧಿ ನವಜೋತ್ ಸಿಂಗ್ ಅವರ ಮೇಲೆ ಹರಿಹಾಯ್ದು, ಆತ ‘ದೇಶ ವಿರೋಧಿ’ ಎಂದು ಗಂಭೀರ ಆರೋಪ ಮಾಡಿದರು.

ಪ್ರಮುಖ ಸುದ್ದಿ :-   ಉದ್ಯಮಿ ಗೋಪಾಲ ಖೇಮ್ಕಾ ಕೊಲೆ ಪ್ರಕರಣದ ಆರೋಪಿ ಎನ್‌ಕೌಂಟರಿನಲ್ಲಿ ಹತ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement