ಭಾರತೀಯ ಜೈನ್ ಸಂಘಟನೆಯಿಂದ ಸೆ. 23ರಂದು ಕೋವಿಡ್ ಫ್ರೀ ವಿಲೇಜ್ ಕಾರ್ಯಕ್ರಮಕ್ಕೆ ಚಾಲನೆ: ಕರ್ನಾಟಕದಲ್ಲಿ 30 ಸಾವಿರ ಗ್ರಾಮಗಳ ಆಯ್ಕೆ

ಯಾದಗಿರಿ : ದೇಶದಲ್ಲಿ ವ್ಯಾಪಿಸಿರುವ ಮಹಾಮಾರಿ ಕೊರೊನಾ ರೋಗವನ್ನು ಸಂಪೂರ್ಣವಾಗಿ ಮುಕ್ತಗೊಳಿಸುವ ಉದ್ದೇಶದಿಂದ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ‘ಕೋವಿಡ್ ಫ್ರೀ ವಿಲೇಜ್’ ಕಾರ್ಯಕ್ರಮವನ್ನು ಭಾರತೀಯ ಜೈನ್ ಸಂಘವು ಸಂಘಟಿಸಿದೆ ಎಂದು ಜಿಲ್ಲಾ ಸಂಚಾಲಕ ರಾಜೇಶ್ ಜೈನ್ ತಿಳಿಸಿದರು.
ಅವರು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್ ಕುರಿತಾಗಿ ಜಾಗೃತಿ ಮತ್ತು ಪರಿಣಾಮಕಾರಿ ಕಾರ್ಯಾಚರಣೆ ಸಂಕಲ್ಪದಿಂದ ರಾಜ್ಯಾದ್ಯಂತ 30 ಜಿಲ್ಲೆಗಳ ಸುಮಾರು 30 ಸಾವಿರ ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಅದರಲ್ಲಿ ಪ್ರಪ್ರಥಮವಾಗಿ ಯಾದಗಿರಿ ಜಿಲ್ಲೆಯ ನಾಲ್ಕು ಮತಕ್ಷೇತ್ರಗಳ ಎಂಟು ಗ್ರಾಮಗಳಲ್ಲಿ ಇದೇ ತಿಂಗಳ 23 ರಂದು ಭಾರತೀಯ ಜೈನ್ ಸಂಘಟನೆಯ ಸಂಸ್ಥಾಪಕ ಶಾಂತಿಲಾಲ್ ಮುಥ್ಥಾ ಅವರು ಚಾಲನೆ ನೀಡುವರು, ಅಂದು ಅವರು ಜಿಲ್ಲಾಡಳಿತದ ಸಹಯೋಗದೊಂದಿಗೆ ಜಿಲ್ಲಾಢಳಿತ ಭವನದಲ್ಲಿ ಸಭೆ ನಡೆಸುವರು. ಈ ಕಾರ್ಯಕ್ರಮದಲ್ಲಿ ಎಲ್ಲರ ಸಹಭಾಗಿತ್ವ ಅತ್ಯವಶ್ಯಕ ಎಂದು ಮನವಿ ಮಾಡಿದರು.
ಈ ಹಿಂದೆ ನಮ್ಮ ಸಂಘಟನೆಯು ಜಿಲ್ಲೆಯಲ್ಲಿ ಕೆರೆಗಳ ಹೂಳೆತ್ತುವ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದದ್ದು ದೇಶದಲ್ಲಿಯೇ ಪ್ರಥಮ ಜಿಲ್ಲೆಯಾಗಿದೆ, ಅದಕ್ಕಾಗಿ ರಾಷ್ಟ್ರೀಯ ಅಧ್ಯಕ್ಷರು ಯಾದಗಿರಿ ಜಿಲ್ಲೆಯಲ್ಲಿಯೇ ಕೋವಿಡ್ ಫ್ರೀ ವಿಲೇಜ್ ಕಾರ್ಯಕ್ರಮ ಹಮ್ಮಿಕೊಳ್ಳಲು ಚಾಲನೆ ನೀಡಲಿದ್ದಾರೆ ಗ್ರಾಮೀಣ ಭಾಗದ ಜನತೆಯಲ್ಲಿ ಕೋವಿಡ್ ರೋಗದ ಬಗ್ಗೆ ಜಾಗೃತಿ ಮೂಡಿಸಲು ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಕೋವಿಡ್ ಮುಕ್ತ ಗ್ರಾಮ ಸ್ಪರ್ಧೆಯನ್ನು ಸಹ ರಾಜ್ಯ ಸರ್ಕಾರ ಹಾಗೂ ನಮ್ಮ ಸಂಘಟನೆಯು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ವಿಜೇತ ಗ್ರಾಮಗಳಿಗೆ ಆರೋಗ್ಯ ಗ್ರಾಮ ಪುರಸ್ಕಾರವನ್ನು ನೀಡಲು ತೀರ್ಮಾನಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ದಿನೇಶ್ ದೋಕಾ, ವಿನೋದ್ ಜೈನ್ ಮತ್ತಿತರರು ಇದ್ದರು.

ಪ್ರಮುಖ ಸುದ್ದಿ :-   ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ ಇನ್ನಿಲ್ಲ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement