ಕಾರವಾರ ಕಡಲತೀರದಲ್ಲಿ ವಿನಾಶದ ಅಂಚಿನಲ್ಲಿರುವ ‘ಟೈಗರ್ ಶಾರ್ಕ್’ ಕಳೇಬರ ಪತ್ತೆ..!

ಕಾರವಾರ:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇರುವ ಟೈಗರ್ ಶಾರ್ಕ್ (tiger shark) ಕಳೇಬರ ಮಾಜಾಳಿ (karwar majali beach) ಸಮುದ್ರದ ತೀರದಲ್ಲಿ ಮಂಗಳವಾರ ಪತ್ತೆಯಾಗಿದೆ. ಸುಮಾರು ಹತ್ತಿರ ಹತ್ತಿರ ಎರಡು ಮೀಟರ್‌ ಉದ್ದವಿರಬಹುದು ಎಂದು ಅಂದಾಜಿಸಲಾಸಗಿದೆ.
ಟೈಗರ್ ಶಾರ್ಕ್ ಸದ್ಯದ ಪರಿಸ್ಥಿತಿಯಲ್ಲಿ ವಿನಾಶದ ಅಂಚಿನಲ್ಲಿರುವ ಮೀನು ಎಂದು ಹೇಳಲಾಗಿದೆ. ಶಾರ್ಕ್ ಮೀನಿನ ಬೇರೆ ಪ್ರಭೇದದ ಮೀನನನ್ನು ಸ್ಥಳೀಯವಾಗಿ ಆಹಾರಕ್ಕಾಗಿ ಬಳಕೆ ಮಾಡಲಾಗುತ್ತದೆ. ಆದರೆ ಟೈಗರ್ ಶಾರ್ಕ್ ತಿನ್ನಲು ರುಚಿ ಇರುವುದಿಲ್ಲ ಎನ್ನುವ ಕಾರಣಕ್ಕೆ ಸ್ಥಳೀಯರು, ಹಾಗೂ ಮೀನುಗಾರರು ಇದನ್ನು ತಿನ್ನಲು ಇಷ್ಟ ಪಡುವುದಿಲ್ಲ.

ಮಾಜಾಳಿ ಕಡಲ ತೀರದಲ್ಲಿ ಮಂಗಳವಾರ ಪತ್ತೆಯಾಗಿರುವ ಹೆಣ್ಣು ಟೈಗರ್ ಶಾರ್ಕ್ ಸುಮಾರು 2 ಮೀಟರ್ ಉದ್ದವಿದ್ದು ಸುಮಾರು 30 ಕೆ.ಜಿ. ತೂಕ ಹೊಂದಿದೆ. ಈ ಮೀನನ್ನು ಇಲ್ಲಿನ ಜನರು ಇಷ್ಟಪಡದ ಕಾರಣ ಕಡಲತೀರದಲ್ಲಿ ಹಾಗೆಯೇ ಬಿಡಲಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಟೈಗರ್ ಶಾರ್ಕ್ ಗೆ ಭಾರೀ ಬೇಡಿಕೆ ಇದ್ದು ಇದರ ಸೂಪ್ ಮಾಡಿ ಅಲ್ಲಿನ ಜನರು ಸೇವನೆ ಮಾಡುತ್ತಾರೆ ಎಂದು ಕಾರವಾರದ ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರ ಸಹಾಯಕ ಪ್ರಾಧ್ಯಾಪಕ ಡಾ. ಶಿವಕುಮಾರ್ ಹರಗಿ ಮಾಹಿತಿ ನೀಡಿದ್ದಾರೆ. ಸಾಮಾನ್ಯವಾಗಿ ಟೈಗರ್ ಶಾರ್ಕ್ 600 ಕೆ.ಜಿ ತೂಕ. ಹಾಗೂ ಆರು ಮೀಟರ್ ವರೆಗೂ ಬೆಳೆಯುತ್ತದೆ. ಇವುಗಳು 30 ರಿಂದ 40 ವರ್ಷದ ವರೆಗೆ ಜೀವಿಸುವ ಇವು, ಸಮುದ್ರದ ಬಲಿಷ್ಠ ಮೀನುಗಳಲ್ಲಿ ಒಂದಾಗಿದೆ. ಇದು ತಿಮಿಂಗಿಲಗಳು, ಇತರ ಶಾರ್ಕ್‌ಗಳು, ಮಣಕಿ, ಬೊಂಡಾಸ್ ಮೀನುಗಳು, ಆಮೆಗಳು, ಮನುಷ್ಯರ ಮೇಲೂ ದಾಳಿ ಮಾಡುತ್ತವೆ. ನಮ್ಮ ದೇಶದಲ್ಲಿ ಇವುಗಳನ್ನು ಆಹಾರಕ್ಕಾಗಿ ಬಳಸುವುದಿಲ್ಲ’. ಟೈಗರ್ ಶಾರ್ಕ್ ಈಗ ಅಳಿವಿನ ಅಂಚಿನಲ್ಲಿರುವ ಮೀನು ಎಂದು ದಾಖಲಿಸಲಾಗಿದೆ ಎಂದು ಡಾ. ಹರಗಿ ಅವರು ಮಾಹಿತಿ ನೀಡಿದರು.

ಪ್ರಮುಖ ಸುದ್ದಿ :-   ಸಚಿವ ದಿನೇಶ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ' ಹೇಳಿಕೆ : ಬಿಜೆಪಿ ಶಾಸಕ ಯತ್ನಾಳ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement