ಭಾರತವು ಹೆಚ್ಚುವರಿ ಕೋವಿಡ್‌-19 ಲಸಿಕೆಗಳ ರಫ್ತು ಅಕ್ಟೋಬರ್‌ನಿಂದ ಪುನರಾರಂಭ

ನವದೆಹಲಿ: ಭಾರತವು ಮುಂದಿನ ತಿಂಗಳು ‘ಲಸಿಕೆ ಮೈತ್ರಿ ‘(Vaccine Maitri’) ಕಾರ್ಯಕ್ರಮದ ಅಡಿಯಲ್ಲಿ ಹೆಚ್ಚುವರಿ ಕೋವಿಡ್ -19 ಲಸಿಕೆಗಳ ರಫ್ತನ್ನು ಪುನರಾರಂಭಿಸಲಿದೆ ಮತ್ತು ಕೋವಾಕ್ಸ್ ಜಾಗತಿಕ ಪೂಲ್‌ಗೆ (COVAX global pool) ತನ್ನ ಬದ್ಧತೆಯನ್ನು ಪೂರೈಸಲಿದೆ, ಆದರೆ ತನ್ನದೇ ನಾಗರಿಕರಿಗೆ ಲಸಿಕೆ ಹಾಕುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸೋಮವಾರ ಹೇಳಿದ್ದಾರೆ.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಅಕ್ಟೋಬರ್‌ನಲ್ಲಿ ಸರ್ಕಾರವು 30 ಕೋಟಿ ಡೋಸ್ ಕೋವಿಡ್ -19 ಲಸಿಕೆಗಳನ್ನು ಮತ್ತು ಮುಂದಿನ ಮೂರು ತಿಂಗಳಲ್ಲಿ 100 ಕೋಟಿ ಡೋಸ್‌ಗಳನ್ನು ಪಡೆಯಲಿದೆ ಎಂದು ಹೇಳಿದರು.
ದೇಶದಾದ್ಯಂತ ಇದುವರೆಗೆ ನೀಡಲಾದ ಸಂಚಿತ ಡೋಸೇಜ್‌ಗಳು 81 ಕೋಟಿ ದಾಟಿದೆ ಮತ್ತು ಕೊನೆಯ 10 ಕೋಟಿ ಡೋಸ್‌ಗಳನ್ನು ಕೇವಲ 11 ದಿನಗಳಲ್ಲಿ ನೀಡಲಾಗಿದೆ ಎಂದು ಅವರು ಹೇಳಿದರು.
ನಮ್ಮದೇ ನಾಗರಿಕರಿಗೆ ಲಸಿಕೆ ಹಾಕುವುದು ಸರ್ಕಾರದ ಆದ್ಯತೆಯಾಗಿ ಉಳಿದಿದೆ ಎಂದು ಪ್ರತಿಪಾದಿಸಿದ ಮಾಂಡವಿ ಅವರು, ಮುಂದಿನ ತ್ರೈಮಾಸಿಕದಲ್ಲಿ (ಅಕ್ಟೋಬರ್-ಡಿಸೆಂಬರ್) ‘ಲಸಿಕೆ ಮೈತ್ರಿ’ (Vaccine Maitri’) ಕಾರ್ಯಕ್ರಮದ ಅಡಿಯಲ್ಲಿ ಮತ್ತು COVAX ಬಗೆಗಿನ ಭಾರತದ ಬದ್ಧತೆಯನ್ನು ಪೂರೈಸಲು ಹೆಚ್ಚುವರಿ ಲಸಿಕೆಗಳ ರಫ್ತು ಆರಂಭವಾಗಲಿದೆ. ಇದು ನಮ್ಮ ‘ವಸುದೈವ ಕುಟುಂಬಕಂ’ ಧ್ಯೇಯ ವಾಕ್ಯಕ್ಕೆ ಅನುಗುಣವಾಗಿದೆ ಎಂದು ಅವರು ಹೇಳಿದರು.
ಲಸಿಕೆಗಳ ಹೆಚ್ಚುವರಿ ಪೂರೈಕೆಯನ್ನು ಕೋವಿಡ್ -19 ವಿರುದ್ಧದ ಸಾಮೂಹಿಕ ಹೋರಾಟಕ್ಕಾಗಿ ವಿಶ್ವಕ್ಕೆ ಭಾರತದ ಬದ್ಧತೆಯನ್ನು ಪೂರೈಸಲು ಬಳಸಲಾಗುತ್ತದೆ ಎಂದು ಅವರು ಹೇಳಿದರು.
ಭಾರತದಲ್ಲಿ ಕೋವಿಡ್ ಲಸಿಕೆಗಳ ಸ್ಥಳೀಯ ಸಂಶೋಧನೆ ಮತ್ತು ಉತ್ಪಾದನೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅವಿರತ ಪ್ರಯತ್ನ ಮತ್ತು ಮಾರ್ಗದರ್ಶನದಿಂದಾಗಿ ಭಾರತವು ಏಕಕಾಲದಲ್ಲಿ ಕೋವಿಡ್ ಲಸಿಕೆಗಳ ಸಂಶೋಧನೆ ಮತ್ತು ಉತ್ಪಾದನೆಯನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಕೈಗೊಳ್ಳುತ್ತಿದೆ ಎಂದು ಹೇಳಿದರು.
ಭಾರತದ ಲಸಿಕೆ ಅಭಿಯಾನವು ವಿಶ್ವಕ್ಕೆ ಮಾದರಿಯಾಗಿದೆ ಮತ್ತು ಇದು ಅತ್ಯಂತ ವೇಗದಲ್ಲಿ ಮುನ್ನಡೆಯುತ್ತಿದೆ ಎಂದ ಅವರು, ಅಕ್ಟೋಬರ್‌ನಲ್ಲಿ 30 ಕೋಟಿ ಡೋಸ್‌ಗಳನ್ನು ಮತ್ತು ಮುಂಬರುವ ತ್ರೈಮಾಸಿಕದಲ್ಲಿ 100 ಕೋಟಿಗಳಿಗಿಂತ ಹೆಚ್ಚಿನ ಪ್ರಮಾಣವನ್ನು ಉತ್ಪಾದಿಸಲಾಗುವುದು ಎಂದು ಹೇಳಿದರು.

ಪ್ರಮುಖ ಸುದ್ದಿ :-   ʼಗೋವಾದ ಮೇಲೆ ಬಲವಂತವಾಗಿ ಭಾರತದ ಸಂವಿಧಾನದ ಹೇರಿಕೆ ; ಕಾಂಗ್ರೆಸ್ ಅಭ್ಯರ್ಥಿ ಹೇಳಿಕೆಯಿಂದ ಭುಗಿಲೆದ್ದ ವಿವಾದ : ದೇಶ ಒಡೆಯುವ ಹುನ್ನಾರ ಎಂದ ಪ್ರಧಾನಿ ಮೋದಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement