ಜೆಇಇ ಮೇನ್ಸ್‌ -ಸಿಇಟಿ ಪರೀಕ್ಷೆಯಲ್ಲಿ ಜೆಎಸ್ಎಸ್ ಆರ್.ಎಸ್.ಹುಕ್ಕೇರಿಕರ ಪಿಯು ಕಾಲೇಜಿನ ಉತ್ತಮ ಸಾಧನೆ

ಧಾರವಾಡ: ನಗರದ ವಿದ್ಯಾಗಿರಿಯ ಜೆ.ಎಸ್.ಎಸ್.ಆರ್.ಎಸ್. ಹುಕ್ಕೇರಿಕರ ಪದವಿಪೂರ್ವ ಮಹಾವಿದ್ಯಾಲಯದ ೨೦೨೦-೨೦೨೧ರ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸಿ.ಇ.ಟಿ ಹಾಗೂ ಜೆ.ಇ.ಇ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಜೆ.ಇ.ಇ ಮೇನ್ಸ್ ಪರೀಕ್ಷೆಯಲ್ಲಿ ಮೂವರು ವಿದ್ಯಾರ್ಥಿಗಳು ನಾಲ್ಕು ಹಂತಗಳ ಪರೀಕ್ಷೆಗಳಲ್ಲೂ ಉತ್ತಮ ಸಾಧನೆಗೈದು ಬಿ.ಇ/ಬಿ.ಟೆಕ್ ವಿಭಾಗದಲ್ಲಿ ಜೆ.ಇ.ಇ. ಅಡ್ವಾನ್ಸ್ಡ್ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ.

ಜೆ.ಇ.ಇ ಮೇನ್ಸ್‌ನಲ್ಲಿ ವಿದ್ಯಾರ್ಥಿಗಳಾದ
ಖುಷಿ ಪಾಟೀಲ
ಭುವನ್‌ ಮಳಗಿ
ಕುಸುಮಾ ಲಮಾಣಿ
ಇವರು ಉತ್ತಮ ಸಾಧನೆ ಮಾಡಿ ಜೆ.ಇ.ಇ. ಅಡ್ವಾನ್ಸ್ಡ್ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ.
ಅದೇರಿತಿ ಸಿ.ಇ.ಟಿಯಲ್ಲಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಾದ
ಆದರ್ಶ ಸಿದ್ನಾಳ
ಶ್ರೇಯಸ್‌ ಐರಣಿ
ಸೌಮ್ಯ ನೀಲಕರಿ
ಇವರು ಉತ್ತಮ ಸಾಧನೆ ಮಾಡಿದ್ದಾರೆ.
ಈ ವಿದ್ಯಾರ್ಥಿಗಳ ಸಾಧನೆಗೆ ಜನತಾ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಉಡುಪಿಯ ಪೇಜಾವರ ಮಠದ ಪೂಜ್ಯ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ, ಕಾರ್ಯಾಧ್ಯಕ್ಷರಾದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಶುಭ ಹಾರೈಸಿದ್ದಾರೆ. ಸಮಿತಿಯ ಕಾರ್ಯದರ್ಶಿಗಳಾದ ಡಾ. ನ.ವಜ್ರಕುಮಾರ ಮತ್ತು ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದ ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯರಾದ ಭಾರತಿ ಶಾನಭಾಗ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement