ಮಹಿಳೆಗೆ ಕಿರುಕುಳ ನೀಡಿದ ಪ್ರಕರಣ: ಆರೋಪಿಗೆ ಉಚಿತವಾಗಿ ಗ್ರಾಮದ ಎಲ್ಲ ಮಹಿಳೆಯರ ಬಟ್ಟೆ ಒಗೆದು ಇಸ್ತ್ರಿ ಮಾಡಿ ಕೊಡುವ ಶಿಕ್ಷೆ ನೀಡಿದ ಕೋರ್ಟ್‌..!

ಮಧುಬನಿ (ಬಿಹಾರ): ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಮತ್ತು ಅಸಭ್ಯವಾಗಿ ವರ್ತಿಸಿದ ಪ್ರಕರಣವೊಂದರ ಆರೋಪಿಗೆ ಬಿಹಾರದ ಮಧುಬನಿ ಜಿಲ್ಲೆಯ ಝಂಜರಪುರದ ಸ್ಥಳೀಯ ನ್ಯಾಯಾಲಯವು ಅಸಾಮಾನ್ಯ ಶಿಕ್ಷೆ ವಿಧಿಸಿದೆ.
ಗ್ರಾಮದಲ್ಲಿರುವ ಎಲ್ಲ ಮಹಿಳೆಯರ ಬಟ್ಟೆಯನ್ನು ಆರೋಪಿಯು ಉಚಿತವಾಗಿ ತೊಳೆಯುವಂತೆ ನ್ಯಾಯಾಲಯವು ಆದೇಶಿಸಿದೆ. ನ್ಯಾಯಾಲಯವು ಈ ಷರತ್ತಿನ ಮೇಲೆ ಆರೋಪಿಗಳಿಗೆ ಜಾಮೀನು ನೀಡಿದೆ ಎಂದು ಎಂದು ಇಂಗ್ಲಿಷ್‌ ಲೋಕಮತ್‌.ಕಾಮ್‌ ವರದಿ ಮಾಡಿದೆ.
ವರದಿ ಪ್ರಕಾರ, ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸುವಾಗ, ಮುಂದಿನ ಆರು ತಿಂಗಳವರೆಗೆ ಆರೋಪಿ ತನ್ನ ಮನಸ್ಸಿನಲ್ಲಿ ಮಹಿಳೆಯರ ಬಗ್ಗೆ ಗೌರವ ಬೆಳೆಸಿಕೊಳ್ಳುವ ಸಲುವಾಗಿ ಹಳ್ಳಿಯ ಎಲ್ಲ ಮಹಿಳೆಯರ ಬಟ್ಟೆಗಳನ್ನು ತೊಳೆಯಬೇಕು ಎಂದು ಸೂಚಿಸಿದೆ. ಇದಿಷ್ಟೇ ಅಲ್ಲ, ಆರೋಪಿಯು ಮಹಿಳೆಯರ ಬಟ್ಟೆಗಳನ್ನು ತೊಳೆದ ನಂತರ ಅವುಗಳನ್ನು ಇಸ್ತ್ರಿ ಮಾಡಿ ಹಿಂದಿರುಗಿಸಬೇಕು ಎಂದುಹೇಳಿದೆ. ನ್ಯಾಯಾಧೀಶ ಅವಿನಾಶ್ ಕುಮಾರ್, ಪ್ರಕರಣದ ವಿಚಾರಣೆ ವೇಳೆ 20 ವರ್ಷದ ಆರೋಪಿ ಲಾಲನ್ ಕುಮಾರ್ ಗೆ ಮಹಿಳೆಯರನ್ನು ಗೌರವಿಸುವಂತೆ ಸೂಚಿಸಿದ್ದಾರೆ.
ಪ್ರಕರಣದ ವಿಚಾರಣೆಯ ಸಮಯದಲ್ಲಿ ನ್ಯಾಯಾಧೀಶರು ಆರೋಪಿಗೆ ಯಾವ ಕೆಲಸ ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಆರೋಪಿ ಲಾಂಡ್ರಿ ಕೆಲಸ ಮಾಡುತ್ತಿದ್ದೇನೆ ಎಂದು ಉತ್ತರಿಸಿದ ನಂತರ ಆರೋಪಿಗೆ ಮಹಿಳೆಯರ ಬಟ್ಟೆ ಒಗೆಯುವಂತೆ ನ್ಯಾಯಾಲಯ ಆದೇಶಿಸಿದರು.
ಗ್ರಾಮದಲ್ಲಿ ಸುಮಾರು 2000 ಮಹಿಳೆಯರು ಇದ್ದಾರೆ. ಇದರರ್ಥ ಆರೋಪಿಯು ಮುಂದಿನ 6 ತಿಂಗಳುಗಳ ಕಾಲ 2000 ಮಹಿಳೆಯರ ಬಟ್ಟೆಗಳನ್ನು ಉಚಿತವಾಗಿ ಒಗೆಯಬೇಕಾಗುತ್ತದೆ, ಅಷ್ಟೇ ಅಲ್ಲ, ನಂತರ ಆತ ಇಸ್ತ್ರಿ ಮಾಡಿ ಹಿಂದಿರುಗಿಸಬೇಕು. ಇಷ್ಟೇ ಅಲ್ಲ, ನ್ಯಾಯಾಲಯವು ಆರೋಪಿ ಲಾಲನ್ ನ್ಯಾಯಾಲಯದ ಆದೇಶವನ್ನು ಸರಿಯಾಗಿ ಪಾಲಿಸುತ್ತಿದ್ದಾನೆಯೇ ಎಂದು ನೋಡುವುದು ಗ್ರಾಮದ ಸರ್​​ಪಂಚ್ ಅಥವಾ ಗ್ರಾಮ ಸೇವಕರ ಜವಾಬ್ದಾರಿಯಾಗಿದೆ ಎಂದು ಹೇಳಿದೆ ಎಂದು ವರದಿ ತಿಳಿಸಿದೆ.
ಆರೋಪಿ ಲಾಲನ್ ತನ್ನ ಉಚಿತವಾಗಿ ಮಹಿಳೆಯರ ಬಟ್ಟೆ ಒಗೆದು ಇಸ್ತ್ರಿ ಮಾಡಿದ್ದೇನೆಂದು ಗ್ರಾಮದ ಸರ್​​ಪಂಚ್ ಅಥವಾ ಗ್ರಾಮ ಸೇವಕರಿಂದ ಪ್ರಮಾಣಪತ್ರವನ್ನು ತಂದು ನ್ಯಾಯಾಲಯಕ್ಕೆ ಸಲ್ಲಿಸಬೇಕು. ನ್ಯಾಯಾಲಯವು ಜಾಮೀನು ಅರ್ಜಿಯ ಪ್ರತಿಯನ್ನು ನಿಯಮಗಳು ಮತ್ತು ಷರತ್ತುಗಳೊಂದಿಗೆ ಸರಪಂಚ ಮತ್ತು ಹಳ್ಳಿಯ ಮುಖ್ಯಸ್ಥರಿಗೆ ಕಳುಹಿಸಿದೆ. ಮಹಿಳೆಯ ಮೇಲೆ ಕಿರುಕುಳ ಮತ್ತು ದೌರ್ಜನ್ಯದ ಆರೋಪದ ಮೇಲೆ ಲಾಲನ್ ಕುಮಾರ್ ವಿರುದ್ಧ ಏಪ್ರಿಲ್ 19 ರಂದು ಲೋಖಾ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ನಂತರ ಆತನನ್ನು ಪೊಲೀಸರು ಬಂಧಿಸಿದರು.
ಲೋಖಾ ಪೊಲೀಸ್ ಠಾಣೆಯ ಸಂತೋಷ್ ಕುಮಾರ್ ಮಂಡಲ್, ಆರೋಪಿ ಲಾಲನ್ ಕುಮಾರ್ ಏಪ್ರಿಲ್ 17 ರ ರಾತ್ರಿ ಗ್ರಾಮದಲ್ಲಿ ಮಹಿಳೆಗೆ ಕಿರುಕುಳ ನೀಡಿ ನಿಂದನೆ ಮಾಡಲು ಯತ್ನಿಸಿದ್ದಾನೆ ಆರೋಪಿಸಲಾಗಿದೆ, ಏಪ್ರಿಲ್ 18 ರಂದು ಸಂತ್ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರ ಎಂದು ವರದಿ ತಿಳಿಸಿದೆ.

ಪ್ರಮುಖ ಸುದ್ದಿ :-   50 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ : ಮಕ್ಕಳನ್ನು ಮನೆಗೆ ಕಳುಹಿಸಿದ ಶಾಲೆಗಳು, ಪರೀಕ್ಷೆಗಳು ಸ್ಥಗಿತ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement