ಶಾಲೆಯಲ್ಲಿಯೇ ಮಹಿಳೆಯಿಂದ ಮಸಾಜ್ ಮಾಡಿಸಿಕೊಂಡ ಹೆಡ್ ಮಾಸ್ಟರ್…!: ಈಗ ಸೇವೆಯಿಂದ ಅಮಾ‌ನತು

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಶಾಲೆಯೊಂದರಲ್ಲಿ ಮಹಿಳೆಯಿಂದ ಮಸಾಜ್ ಮಾಡಿಸಿಕೊಂಡ ಮುಖ್ಯಾಧ್ಯಾಪಕರನ್ನು ಅಮಾನತು ಮಾಡಲಾಗಿದೆ.
ಬೆಂಗಳೂರಿನ ಕೋದಂಡರಾಮಪುರ ಪ್ರೌಢಶಾಲೆಯಲ್ಲಿ ಪ್ರಭಾರಿ ಮುಖ್ಯಾಧಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಲೋಕೇಶಪ್ಪ ಅಮಾನತುಗೊಂಡವರು ಎಂದು ತಿಳಿದುಬಂದಿದೆ.
ಪಾಲಿಕೆಯ ಕೋದಂಡರಾಮಪುರ ಪ್ರೌಢಶಾಲೆಯಲ್ಲಿ ಮಗುವಿನ ದಾಖಲಾತಿಗೆಂದು ಮಹಿಳೆಯೊಬ್ಬರು ಶಾಲೆಗೆ ಬಂದಿದ್ದರು. ಈ ವೇಳೆ ಅವರು ಬ್ಯೂಟಿ ಪಾರ್ಲರ್ ನಡೆಸುತ್ತಿರುವುದು ಗೊತ್ತಾಗಿದೆ. ನನಗೂ ಮಸಾಜ್​ ಮಾಡಿ ಎಂದು ಮುಖ್ಯಶಿಕ್ಷಕ ಲೋಕೇಶಪ್ಪ ಕೇಳಿಕೊಂಡಿದ್ದಾರೆ. ಮಹಿಳೆ ನಿರಾಕರಿಸಿದ್ದಾರೆ. ಆದರೂ ಒತ್ತಾಯ ಮಾಡಿದ ಮುಖ್ಯಶಿಕ್ಷಕ ಕೋಣೆಯೊಂದರಲ್ಲಿ ಶರ್ಟ್​ ಬಿಚ್ಚಿ ಮಲಗಿ ಮಸಾಜ್ ಮಾಡಿಸಿಕೊಂಡಿದ್ದಾರೆ. ಮಹಿಳೆಯಿಂದ ಕೋದಂಡರಾಮಪುರ ಪ್ರೌಢಶಾಲೆಯ ಕಟ್ಟಡದಲ್ಲಿಯೇ ಮಸಾಜ್ ಮಾಡಿಕೊಂಡಿರುವ ದೃಶ್ಯಾವಳಿಗಳು ಬೆಳಕಿಗೆ ಬಂದಿದ್ದವು‌. ಈ ಸಂಬಂಧ ಲೋಕೇಶಪ್ಪ ಅವರನ್ನು ಖುದ್ದು ವಿಚಾರಿಸಿದ್ದು, ಮಸಾಜ್ ಮಾಡಿಸಿಕೊಂಡಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ಕೆಲಸದ ಸಮಯದಲ್ಲಿ ಕರ್ತವ್ಯ ಲೋಪ ಎಸಗಿರುವುದರಿಂದ ಕರ್ನಾಟಕ ನಾಗರೀಕ ನಿಯಮಾವಳಿಗಳನ್ವಯ ಈ ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ನಿರೀಕ್ಷಿಸಿ, ಸೇವೆಯಿಂದ ಅಮಾನತು ಮಾಡಲಾಗಿದೆ.

 

ನಿಮ್ಮ ಕಾಮೆಂಟ್ ಬರೆಯಿರಿ

advertisement