ಸಿಧು ಪಂಜಾಬ್ ಸಿಎಂ ಆಗೋದು ತಪ್ಪಿಸಲು ಯಾವ ತ್ಯಾಗಕ್ಕೂ ಸಿದ್ಧ, ಅವರ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವೆ: ನವಜೋತ್‌ ವಿರುದ್ಧ ಗುಡುಗಿದ ಅಮರಿಂದರ್‌

ನವದೆಹಲಿ: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬುಧವಾರ ಪಂಜಾಬ್‌ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ವಿರುದ್ಧ ಯಾವುದೇ ಹಂತದಲ್ಲಿಯೂ ಹೋರಾಡುವುದಾಗಿ ಹೇಳಿದ್ದಾರೆ ಮತ್ತು ಅಂತಹ “ಅಪಾಯಕಾರಿ ಮನುಷ್ಯನಿಂದ ಪಂಜಾಬನ್ನು ರಕ್ಷಿಸಲು ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ.
ಸಿದ್ದು ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿಸುವ ಯಾವುದೇ ಕ್ರಮವನ್ನು ವಿರೋಧಿಸುವ ತನ್ನ ಮಾತನ್ನು ಪುನರುಚ್ಚರಿಸಿದ ಅಮರಿಂದರ್ ಅವರು, ಸಿಧು ಸೋಲನ್ನು ಖಚಿತಪಡಿಸಿಕೊಳ್ಳಲು 2022 ರ ವಿಧಾನಸಭಾ ಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿಯನ್ನು ಅವರ ವಿರುದ್ಧ ಕಣಕ್ಕಿಳಿಸುವುದಾಗಿಯೂ ಗುಡುಗಿದ್ದಾರೆ.
“ಅವರು [ಸಿದ್ದು] ರಾಜ್ಯಕ್ಕೆ ಅಪಾಯಕಾರಿ” ಎಂದು ಹೇಳಿದ ಅವರು, ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ನೀಡುವುದಾಗಿ ಹೇಳಿದ್ದೆ ಆದರೆ ಅವರು ಮುಂದುವರೆಯಲು ಕೇಳಿಕೊಂಡರು ಎಂದು ಹೇಳಿದ್ದಾರೆ.
ತಾವು ಮೂರು ವಾರಗಳ ಹಿಂದೆ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ನೀಡಿದ್ದಾಗಿ ಹೇಳಿದ ಅವರು, ಆದರೆ ಮುಂದುವರಿಯುವಂತೆ ಕೇಳಿದರು. ಅವರು ನನಗೆ ಕರೆ ಮಾಡಿ ಕೆಳಗಿಳಿಯುವಂತೆ ಕೇಳಿದ್ದರೆ, ನಾನು ಅದನ್ನು ಮಾಡುತ್ತಿದ್ದೆ,, ಒಬ್ಬ ಸೈನಿಕನಾಗಿ, ನನ್ನ ಕೆಲಸವನ್ನು ಹೇಗೆ ಮಾಡಬೇಕೆಂದು ನನಗೆ ತಿಳಿದಿದೆ ಮತ್ತು ಒಮ್ಮೆ ನನಗೆ ಕರೆ ಮಾಡಿದ ನಂತರ ನಾನು ಹೊರಡುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದರು.
ಪಂಜಾಬ್‌ನಲ್ಲಿ ಕಾಂಗ್ರೆಸ್ ಅನ್ನು ಮತ್ತೊಂದು ಭರ್ಜರಿ ಗೆಲುವಿನತ್ತ ಮುನ್ನಡೆಸಿದ ನಂತರ ಬೇರೆಯವರಿಗೆ ಮುಖ್ಯಮಂತ್ರಿಯಾಗಲು ಅವಕಾಶ ನೀಡಲು ಸಿದ್ಧ ಎಂದು ಸೋನಿಯಾ ಗಾಂಧಿ ಅವರಿಗೆ ಹೇಳಿದ್ದೆ, ಆದರೆ ಅದು ಸಂಭವಿಸಲಿಲ್ಲ ಎಂದು ಹೇಳಿದರು.
“ನಾನು ಶಾಸಕರನ್ನು ಗೋವಾ ಅಥವಾ ಕೆಲವೆಡೆ ವಿಮಾನದಲ್ಲಿ ಕರೆದೊಯ್ಯುತ್ತಿರಲಿಲ್ಲ. ನಾನು ಗಿಮಿಕ್ ಮಾಡುವುದಿಲ್ಲ, ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಿಗೆ ಅದು ನನ್ನ ಮಾರ್ಗವಲ್ಲ ಎಂದು ತಿಳಿದಿದೆ ಎಂದ ಅವರು, ಪ್ರಿಯಾಂಕಾ ಮತ್ತು ರಾಹುಲ್ ಗಾಂಧಿ ಸಾಕಷ್ಟು ಅನನುಭವಿಗಳು ಮತ್ತು ಅವರ ಸಲಹೆಗಾರರು ಸ್ಪಷ್ಟವಾಗಿ ಅವರನ್ನು ದಾರಿ ತಪ್ಪಿಸುತ್ತಿದ್ದಾರೆ, ಪ್ರಿಯಾಂಕಾ ಮತ್ತು ರಾಹುಲ್ ನನ್ನ ಮಕ್ಕಳಂತೆ, ಅವರು ಹೀಗೆ ಮಾಡಬಾರದಿತ್ತು. ನನಗೆ ನೋವಾಗಿದೆ ಎಂದು ನೋವು ತೋಡಿಕೊಂಡರು.

ಪ್ರಮುಖ ಸುದ್ದಿ :-   ವೀಡಿಯೊ...| ಬೈಕ್​ಗೆ ಡಿಕ್ಕಿ ಹೊಡೆದ ನಂತ್ರ ದೂರ ಎಳೆದೊಯ್ದ ಲಾರಿ..: ಟ್ರಕ್‌ ಹಿಡಿದುಕೊಂಡು ನೇತಾಡುತ್ತಿದ್ದ ಸವಾರ

ನನ್ನ ರಾಜಕೀಯ ಆಯ್ಕೆಗಳು ತೆರೆದಿದೆ…
ನಾನು ರಾಜಕೀಯ ಆಯ್ಕೆಗಳನ್ನು ಈಗಲೂ ತೆರೆದಿಟ್ಟಿದ್ದೇನೆ, ನನ್ನ ಭವಿಷ್ಯದ ಕ್ರಮವನ್ನು ನಿರ್ಧರಿಸುವ ಮೊದಲು ನನ್ನ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದೇನೆ ಎಂದು ಅಮರಿಂದರ್‌ ಸಿಂಗ್‌ ಹೇಳಿದರು.
ನಾನು ಏಳು ಬಾರಿ ವಿಧಾನಸಭೆಗೆ ಮತ್ತು ಎರಡು ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದೇನೆ. ಕಾಂಗ್ರೆಸ್ ನಾಯಕತ್ವವು ಸ್ಪಷ್ಟವಾಗಿ (ಪಂಜಾಬ್‌ನಲ್ಲಿ) ಬದಲಾವಣೆ ಮಾಡಲು ನಿರ್ಧರಿಸಿದೆ ಮತ್ತು ಅದಕ್ಕಾಘಿ ಪ್ರಕರಣವನ್ನು ಮಾಡಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಡ್ರಗ್ಸ್ ಪ್ರಕರಣಗಳಲ್ಲಿ ಬಾದಲ್‌ಗಳು ಮತ್ತು ಮಜಿತಿಯಾ ವಿರುದ್ಧ ನಾನು ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂಬ ದೂರುಗಳ ಬಗ್ಗೆ ಮಾತನಾಡಿದ ಅವರು, ಕಾನೂನನ್ನು ಅದರ ಹಾದಿಯಲ್ಲಿ ಸಾಗುವುದನ್ನು ನಾನು ನಂಬಿದ್ದೇನೆ ಎಂದರು.
ಆದರೆ ಈಗ ನನ್ನ ವಿರುದ್ಧ ದೂರು ನೀಡುತ್ತಿರುವ ಈ ಜನರೇ ಅಧಿಕಾರದಲ್ಲಿದ್ದಾರೆ, ಸಾಧ್ಯವಾದರೆ ಅಕಾಲಿ ನಾಯಕರನ್ನು ಕಂಬಿಗಳ ಹಿಂದೆ ಇರುವಂತೆ ಮಾಡಲಿ ಎಂದು ಸವಾಲು ಹಾಕಿದರು.
ಗಣಿಗಾರಿಕೆ ಮಾಫಿಯಾದಲ್ಲಿ ಭಾಗಿಯಾಗಿರುವ ಸಚಿವರ ವಿರುದ್ಧ ಕ್ರಮ ಕೈಗೊಳ್ಳದ ಆರೋಪ ಮಾಡಿದ್ದ ಮೇಲೆ ಸಿಧು ಮತ್ತು ಕಂಪನಿ ವಿರುದ್ಧ ಹರಿಹಾಯ್ದ ಅವರು, “ಆ ಸಚಿವರು ಈಗ ಈ ನಾಯಕರೊಂದಿಗೆ ಇದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.
ಈಗ ದೆಹಲಿಯಿಂದ ಪಂಜಾಬ್ ನಡೆಸುತ್ತಿರುವ ವಿಧಾನವನ್ನು ಲೇವಡಿ ಮಾಡಿದ ಅಮರಿಂದರ್, ಈ ಬೆಳವಣೀಗೆಗಳ ಬಗ್ಗೆ ಆಘಾತ ವ್ಯಕ್ತಪಡಿಸಿದರು.
ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ತಮಗೆ ಪ್ರತಿಯೊಬ್ಬರ ಸಾಮರ್ಥ್ಯಗಳನ್ನು ತಿಳಿದಿದ್ದರಿಂದ, ತಮ್ಮ ಸ್ವಂತ ಮಂತ್ರಿಗಳನ್ನು ನೇಮಿಸಿಕೊಂಡಿದ್ದೆ. ಈಗ ವೇಣುಗೋಪಾಲ್ ಅಥವಾ ಅಜಯ್ ಮಾಕೆನ್ ಅಥವಾ ರಣದೀಪ್ ಸುರ್ಜೆವಾಲಾ ಅವರಂತಹ ಕಾಂಗ್ರೆಸ್ ನಾಯಕರು ಯಾರು ಯಾವ ಸಚಿವಾಲಯಕ್ಕೆ ಒಳ್ಳೆಯವರು ಎಂದು ಹೇಗೆ ನಿರ್ಧರಿಸುತ್ತಾರೆ ಎಂದು ಪ್ರಶ್ನಿಸಿದರು.
ತಮ್ಮದೇ ಸಚಿವಾಲಯವನ್ನು ನಿರ್ವಹಿಸಲು ಸಾಧ್ಯವಾಗದ ಸಿದ್ದು ಕ್ಯಾಬಿನೆಟ್ ನಿರ್ವಹಿಸುತ್ತಿರುವುದು ಪಂಜಾಬ್‌ನ ವಿಷಾದಕರ ಪರಿಸ್ಥಿತಿ ಎಂದ ಅವರು, ಸಿಧು ಸೂಪರ್ ಸಿಎಂ ಆಗಿ ವರ್ತಿಸಿದರೆ, ಪಕ್ಷವು ಕಾರ್ಯನಿರ್ವಹಿಸುವುದಿಲ್ಲ, ಡ್ರಾಮಾ ಮಾಸ್ಟರ್ ನಾಯಕತ್ವದಲ್ಲಿ”, ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ ಎರಡು ಅಂಕಿಗಳನ್ನು ಮುಟ್ಟುವವುದು ದೊಡ್ಡ ವಿಷಯ ಎಂದು ಭವಿಷ್ಯ ನುಡಿದರು.
ಚನ್ನಿ ಬುದ್ಧಿವಂತ ಮತ್ತು ಸುಶಿಕ್ಷಿತನಾಗಿದ್ದರೂ, ದುರದೃಷ್ಟವಶಾತ್, ಪಾಕಿಸ್ತಾನದೊಂದಿಗೆ 600 ಕಿಮೀ ಗಡಿಯನ್ನು ಹಂಚಿಕೊಂಡಿರುವ ಪಂಜಾಬ್‌ಗೆ ನಿರ್ಣಾಯಕವಾದ ಗೃಹ ವ್ಯವಹಾರಗಳನ್ನು ನಿರ್ವಹಿಸುವ ಅನುಭವವಿಲ್ಲ, ವರ್ಷಗಳಲ್ಲಿ ವಿಷಯಗಳು ಹೆಚ್ಚು ಗಂಭೀರವಾಗುತ್ತಿವೆ ಎಂದು ಅಮರಿಂದರ್ ಸಿಂಗ್ ಹೇಳಿದರು.
ಪಾಕಿಸ್ತಾನದಿಂದ ಪಂಜಾಬ್‌ಗೆ ಬರುತ್ತಿರುವ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ಪ್ರಮಾಣವು ಆತಂಕಕಾರಿಯಾಗಿದೆ, ಪಾಕಿಸ್ತಾನದ ನಾಯಕತ್ವದೊಂದಿಗಿನ ತನ್ನ ನಿಕಟ ವೈಯಕ್ತಿಕ ಸಂಬಂಧಗಳಿಗಾಗಿ ಮತ್ತೊಮ್ಮೆ ಸಿಧು ಅವರನ್ನು ತರಾಟೆಗೆ ತೆಗೆದುಕೊಂಡರು.
ಹೊಸ ಮುಖ್ಯಮಂತ್ರಿ ಚನ್ನಿಯ ವಿದ್ಯುತ್ ಬಿಲ್‌ಗಳ ಮನ್ನಾ ಘೋಷಣೆಯ ಕುರಿತು, ಅವರು ಚನ್ನಿ ಅವರು ಮಾಜಿ ಹಣಕಾಸು ಸಚಿವರೊಂದಿಗೆ ಚರ್ಚಿಸಿರಬೇಕು. ಅವರು ರಾಜ್ಯವನ್ನು ದಿವಾಳಿಯಾಗಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ರಾಜ್‌ ಕುಂದ್ರಾಗೆ ಸೇರಿದ ₹97 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement