ಪತ್ನಿ ಕೋವಿಡ್‌ ಲಸಿಕೆ ತೆಗೆದುಕೊಂಡಿದ್ದಕ್ಕೆ ಹುಡುಕಿಕೊಂಡು ಹೋಗಿ ನರ್ಸ್​ಗೆ ಥಳಿಸಿದ ಗಂಡ..!

ಕ್ವಿಬೆಕ್: ತನ್ನ ಒಪ್ಪಿಗೆಯಿಲ್ಲದೆ ತನ್ನ ಪತ್ನಿಗೆ ಕೋವಿಡ್ -19 ಲಸಿಕೆ ನೀಡಿದ್ದಕ್ಕಾಗಿ ಕೆನಡಾದ ಕ್ವಿಬೆಕ್​​ ಪ್ರಾಂತ್ಯದಲ್ಲಿ ವ್ಯಕ್ತಿಯೊಬ್ಬ ಸೀದಾ ಆಸ್ಪತ್ರೆಗೆ ಹೋಗಿ ನರ್ಸ್ ಮುಖಕ್ಕೆ ಹೊಡೆದಿದ್ದಾನೆ.   ಪತ್ನಿಗೆ ಕೊವಿಡ್​ 19 ಲಸಿಕೆ (Covid 19 Vaccine) ನೀಡಿದ್ದಾರೆ ಎಂಬ ಒಂದೇ ಕಾರಣಕ್ಕೆ ಹೀಗೆ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಂಟ್ರಿಯಲ್‌ನ ಆಗ್ನೇಯದಲ್ಲಿ 155 ಕಿಲೋಮೀಟರ್ (96 ಮೈಲಿ) ದೂರದಲ್ಲಿರುವ ಶೆರ್‌ಬ್ರೂಕ್ ನಗರದ ಔಷಧಾಲಯದ ಕಚೇರಿಯಲ್ಲಿ ಸೋಮವಾರ ಬೆಳಿಗ್ಗೆ ಮಹಿಳೆಯೊಬ್ಬಳಿಗೆ ನರ್ಸ್‌ ಲಸಿಕೆ ನೀಡಿದ್ದಾರೆ. ಆದರೆ ಪತ್ನಿ ಲಸಿಕೆ ತೆಗೆದುಕೊಳ್ಳುವುದು ಗಂಡನಿಗೆ ಇದು ಗೊತ್ತಿರಲಿಲ್ಲ.
ಇದು ಗೊತ್ತಾದಾಗ ಪತ್ನಿ ತನ್ನ ಕೇಳದೆ ಕೊವಿಡ್​ 19 ಲಸಿಕೆ ತೆಗೆದುಕೊಂಡಳು ಎಂದು ಆಘಾತಕ್ಕೆ ಒಳಗಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದದ್ದು ಸೋಮವಾರವಾದರೂ ಇದೀಗ ಬೆಳಕಿಗೆ ಬಂದಿದೆ. ತನ್ನ ಪತ್ನಿ ಕೊರೊನಾ ಲಸಿಕೆ ಪಡೆಯುತ್ತಿದ್ದಂತೆ ಆಕೆಯ ಬಳಿ ಎಲ್ಲಿ ಪಡೆದೆ? ಕೊಟ್ಟವರು ಯಾರು ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾನೆ. ನಂತರ ಆಕೆ ಲಸಿಕೆ ಪಡೆದ ಫಾರ್ಮಸಿಗೆ ತೆರಳಿ ಅಲ್ಲಿನ ನರ್ಸ್​​ ಮುಖಕ್ಕೆ ಹೊಡೆದಿದ್ದಾನೆ ಎಂದು ರಾಯಿಟರ್ಸ್​ ವರದಿ ಮಾಡಿದೆ.
ಆದರೆ ಆ ವ್ಯಕ್ತಿ ಯಾರೆಂದು ಇನ್ನೂ ಗೊತ್ತಾಗಲಿಲ್ಲ. ವ್ಯಕ್ತಿಯನ್ನು ಪತ್ತೆ ಹಚ್ಚಲು ಸಹಾಯ ಮಾಡುವಂತೆ ಪೊಲೀಸರು ಅಲ್ಲಿದ್ದ ಜನರ ಬಳಿ ಕೇಳಿದ್ದಾರೆ. ಪೊಲೀಸರು ಆತನನ್ನು ಹುಡುಕುತ್ತಿದ್ದಾರೆ.
ವಿಚಿತ್ರವೆಂದರೆ ಕೆನಡಾದ ಹಲವು ಕಡೆಗಳಲ್ಲಿ ಕೊರೊನಾ ಲಸಿಕೆ ವಿರೋಧಿ ಪ್ರತಿಭಟನೆಗಳು ನಡೆಯುತ್ತಿವೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement