ಏಷ್ಯಾದ ಮೊದಲ ಹಾರುವ ಕಾರು ಪರಿಕಲ್ಪನೆ ಮಾದರಿ ಅನಾವರಣಗೊಳಿಸಿದ ಚೆನ್ನೈ ಸ್ಟಾರ್ಟಪ್…!

ಚೆನ್ನೈ: ಚೆನ್ನೈ ಮೂಲದ ಸ್ಟಾರ್ಟಪ್ ಹೈಬ್ರಿಡ್ ಫ್ಲೈಯಿಂಗ್ ಕಾರಿನ ಪರಿಕಲ್ಪನಾ ಮಾದರಿಯನ್ನು ಪರಿಚಯಿಸಿದೆ. ಹಾರುವ ಕಾರಿನ ಮಾದರಿಯನ್ನು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸೋಮವಾರ ಪರಿಶೀಲಿಸಿದ್ದಾರೆ.
“ಏಷ್ಯಾದ ಮೊದಲ ಹೈಬ್ರಿಡ್ ಫ್ಲೈಯಿಂಗ್ ಕಾರ್” ಎನಿಸಿಕೊಳ್ಳುವ ಪರಿಕಲ್ಪನೆಯ ಮಾದರಿಯನ್ನು ಪರಿಚಯಿಸಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದು ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ.
ಇದು ಆರಂಭವಾದ ನಂತರ, ಹಾರುವ ಕಾರುಗಳನ್ನು ಜನರು ಮತ್ತು ಸರಕು ಸಾಗಣೆಗೆ ಹಾಗೂ ವೈದ್ಯಕೀಯ ತುರ್ತು ಸೇವೆಗಳನ್ನು ಒದಗಿಸಲು ಬಳಸಲಾಗುತ್ತದೆ. ತಂಡಕ್ಕೆ ನನ್ನ ಶುಭಾಶಯಗಳು” ಎಂದು ಜ್ಯೋತಿರಾದಿತ್ಯ ಸಿಂಧಿಯಾ ಟ್ವೀಟ್ ಮಾಡಿದ್ದಾರೆ.
ಹೈಬ್ರಿಡ್ ಕಾರ್ ಮಾದರಿಯಾದ ವಿನಾಟವನ್ನು ವಿನತ (Vinata) ಏರೋಮೊಬಿಲಿಟಿ ಅಭಿವೃದ್ಧಿಪಡಿಸಿದೆ. ಸ್ಟಾರ್ಟಪ್ ಸಿಇಒ ಯೋಗೀಶ್ ಅಯ್ಯರ್ ಅವರು ಆಳವಾದ ಸಂಶೋಧನೆಯ ನಂತರ ಈ ಹೆಸರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ವಿನತ (Vinata) ಪುರಾಣದಿಂದ ಬಂದಿದೆ. ನಾವು ಹಾರುವ ಕಾರಿನೊಂದಿಗೆ ಕೆಲಸ ಮಾಡುತ್ತಿದ್ದೇವೆ. ನಾವು ಸಾಕಷ್ಟು ಸಂಶೋಧನೆ ಮಾಡಿದ್ದೇವೆ ಮತ್ತು ವಿನತ ಅಂದರೆ ಪಕ್ಷಿಗಳ ತಾಯಿ, ಗರುಡನ ತಾಯಿ” ಎಂದು ಯೋಗೀಶ್ ಅಯ್ಯರ್ ಹೇಳಿದರು.
ಮುಂದಿನ ಎರಡು ವರ್ಷಗಳಲ್ಲಿ ಫ್ಲೈಯಿಂಗ್ ಕಾರ್ ಪರಿಕಲ್ಪನೆಯು ಮೂಲ ಮಾದರಿಯಾಗುವ ನಿರೀಕ್ಷೆಯಿದೆ. ವಿಶೇಷಣಗಳಿಗೆ ಸಂಬಂಧಿಸಿದಂತೆ, ಹಾರುವ ಕಾರಿನಲ್ಲಿ ಎಂಟು ಏಕಾಕ್ಷ ರೋಟರ್‌ಗಳು ಮತ್ತು ಜೈವಿಕ ಇಂಧನ ಮತ್ತು ಬ್ಯಾಟರಿಯಲ್ಲಿ ಚಲಿಸುವ ಹೈಬ್ರಿಡ್ ಮೋಟಾರ್ ಇರುತ್ತದೆ. ತೂಕವು 900 ಕಿಲೋಗಳು ಎಂದು ಅಂದಾಜಿಸಲಾಗಿದೆ 250 ಕಿಲೋ ಲೋಡ್ ಸಾಮರ್ಥ್ಯ, 120 ಕಿಮೀ/ಗಂ ವೇಗದಲ್ಲಿ 60 ನಿಮಿಷಗಳ ವರೆಗೆ ಪ್ರಯಾಣಿಸುತ್ತದೆ.
ಇದು ಎರಡು ಆಸನಗಳದ್ದಾಗಲಿದೆ ಮತ್ತು VTOL (ವರ್ಟಿಕಲ್ ಟೇಕಾಫ್ ಮತ್ತು ಲ್ಯಾಂಡಿಂಗ್) ಸಾಮರ್ಥ್ಯದೊಂದಿಗೆ ಜೈವಿಕ ಇಂಧನದಲ್ಲಿ ಕಾರ್ಯನಿರ್ವಹಿಸುತ್ತದೆ. ನೀವು ಅದನ್ನು ಎಲ್ಲಿ ಬೇಕಾದರೂ ಇಳಿಸಬಹುದು ಮತ್ತು ಟೇಕ್-ಆಫ್ ಮಾಡಬಹುದು” ಎಂದು ಯೋಗೇಶ್ ಅಯ್ಯರ್ ಹೇಳಿದರು.
2021ರ ಇತ್ತೀಚಿನ ಡ್ರೋನ್ ನೀತಿಗಳು ಭಾರತವನ್ನು ಡ್ರೋನ್ ಕೇಂದ್ರವನ್ನಾಗಿಸಲು ತುಂಬಾ ಪ್ರೋತ್ಸಾಹದಾಯಕವಾಗಿದೆ ಎಂದು ಯೋಗೇಶ್ ಹೇಳಿದ್ದಾರೆ.
ನಮ್ಮ ಉತ್ಪನ್ನವು ಮೇಕ್ ಇನ್ ಇಂಡಿಯಾದ ಸಂಕೇತವಾಗಿರಬೇಕು ಎಂದು ನಾವು ಬಯಸಿದ್ದೇವೆ ಮತ್ತು ಅದಕ್ಕಾಗಿಯೇ ನಮ್ಮ ನಾಗರಿಕ ವಿಮಾನಯಾನ ಸಚಿವರು ಅದನ್ನು ಜಗತ್ತಿಗೆ ತೋರಿಸುವ ಮೊದಲು ಅದನ್ನು ಅನಾವರಣಗೊಳಿಸಬೇಕು” ಎಂದು ಯೋಗೇಶ್ ಹೇಳಿದರು.
ಹೆಲಿಟೆಕ್ ಎಕ್ಸ್‌ಪೋ ನಂತರ, ಮೂಲಮಾದರಿಯನ್ನು ತಯಾರಿಸಲು ಪ್ರಾರಂಭಿಸುತ್ತಾರೆ ಮತ್ತು 2023 ರ ವೇಳೆಗೆ ಪರೀಕ್ಷಾ ರನ್ ಆರಂಭವಾಗುತ್ತದೆ ಎಂದು ಯೋಗೀಶ್ ಅಯ್ಯರ್ ಹೇಳಿದರು.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement