ಧಾರವಾಡ: ಕವಲಗೇರಿಯಲ್ಲಿ ತಪ್ಪಿಸಿಕೊಂಡ ಚಿರತೆ ಗೋವನಕೊಪ್ಪದ ಬಳಿ ಪ್ರತ್ಯಕ್ಷ..ಸೆರೆಗೆ ಕಾರ್ಯಾಚರಣೆ

posted in: ರಾಜ್ಯ | 0

ಧಾರವಾಡ: ನಿನ್ನೆ ರಾತ್ರಿ ಧಾರವಾಡದ ಕವಲಗೇರಿ ಗ್ರಾಮದ ಬಳಿ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡು ಓಡಿ ಹೋಗಿದ್ದ ಚಿರತೆಯು ಇಂದು (ಶುಕ್ರವಾರ) ಬೆಳಿಗ್ಗೆ ಕವಲಗೇರಿ ಗ್ರಾಮಕ್ಕೆ ಗಡಿ ಹೊಂದಿಕೊಂಡಿರುವ ಗೋವನಕೊಪ್ಪದ ಬಳಿ ಪತ್ತೆಯಾಗಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಅವಿತು ಕುಳಿತಿರುವ ಚಿರತೆ ತಪ್ಪಿಸಿಕೊಂಡು ಓಡಾಡುತ್ತಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ. ಗುರುವಾರ ರಾತ್ರಿ ೯:೩೦ರ ಸುಮಾರಿಗೆ ಕವಲಕೇರಿ ಗ್ರಾಮದ ಬಳಿ ಕಂಡಬಂದಿದ್ದ ಚಿರತೆ ನಂತರ ಅಲ್ಲಿಂದ ತಪ್ಪಿಸಿಕೊಂಡಿದೆ.ನಿನ್ನೆ ರಾತ್ರಿಯಿಡೀ ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿದ್ದು, ಒಂದು ಕಬ್ಬಿನ ಗದ್ದೆಯಿಂದ ಮತ್ತೊಂದು ಕಬ್ಬಿನ ಗದ್ದೆಗೆ ಚಿರತೆ ಓಡಾಡಿದ್ದು ಕಂಡು ಬಂದಿದೆ. ಆದರೆ ಕೈಗೆ ಸಿಗದೆ ತಪ್ಪಿಸಿಕೊಂಡಿದೆ.
ಆದರೆ ಇಂದು (ಶುಕ್ರವಾರ) ಬೆಳಿಗ್ಗೆ ಗೋವನಕೊಪ್ಪದ ಗ್ರಾಮ ಪಕ್ಕದ ಸರ್ವೆ ಜಮೀನಿನಲ್ಲಿರುವ ಬಾಳೆ ತೋಟ, ಮಾವೀನ ತೋಟ ಮತ್ತು ಕಬ್ಬಿನ ಗದ್ದೆ ಮಧ್ಯದಲ್ಲಿ ಗೋವನಕೋಪ್ಪ ಗ್ರಾಮಸ್ಥರಿಗೆ ಚಿರತೆ ಕಂಡು ಬಂದಿದೆ ಎಂದು ಅವರು ತಿಳಿಸಿದ್ದಾರೆ. ಹೀಗಾಗಿ ತಕ್ಷಣವೇ ಅಲ್ಲಿಗೆ ಅರಣ್ಯ ಸಇಲಾಖೆ ಸಿಬ್ಬಂದಿ ಆಗಮಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಈ ಪ್ರದೇಶ ಸುತ್ತುವರಿದು ಚಿರತೆ ಬೇರೆಡೆ ಹೋಗದಂತೆ ಕಾವಲು ಕಾಯುತ್ತಿದ್ದಾರೆ. ಅರಣ್ಯ ಅಧಿಕಾರಿಗಳು, ಅರವಳಿಕೆ ತಜ್ಞರು ಚಿರತೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ತಿಳಿಸಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ