ಹಿಂದುಳಿದ ವರ್ಗಗಳ ಜಾತಿ ಗಣತಿ ಆಡಳಿತಾತ್ಮಕವಾಗಿ ಕಷ್ಟ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ

ನವದೆಹಲಿ: ಜಾತಿಗಳ ಕುರಿತಾದ ವಿವರಗಳನ್ನು ಸಂಗ್ರಹಿಸಲು ಜನಗಣತಿಯು ಮಾದರಿ ವಿಧಾನವಲ್ಲವೆಂದು ಕೇಂದ್ರ ಸರಕಾರವು ಗುರುವಾರ ಸುಪ್ರೀಂಕೋರ್ಟಿಗೆ ತಿಳಿಸಿದೆ.
ನೂತನ ಜನಗಣತಿ ಪ್ರಕ್ರಿಯೆಯ ಮೂಲಕ ಜಾತಿ ಆಧಾರಿತ ಗಣತಿಯನ್ನು ನಡೆಸುವ ಸಾಧ್ಯತೆಯನ್ನು ಅದು ತಳ್ಳಿಹಾಕಿದೆ. 2011ರ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಯ ಸಮೀಕ್ಷೆಯ ಭಾಗವಾಗಿ ನಡೆಸಲಾದ ಜಾತಿಗಣತಿಯು ಲೋಪದಿಂದ ಕೂಡಿತ್ತೆಂದು ಅದು ಹೇಳಿದೆ.
ಮುಂಬರುವ ಜನಗಣತಿಯಲ್ಲಿ ಹಿಂದುಳಿದ ವರ್ಗಗಳ ಪೌರರ ಕುರಿತ ಮಾಹಿತಿಯನ್ನು ಸಂಗ್ರಹಿಸುವುದು ಕಾರ್ಯಸಾಧ್ಯವಲ್ಲವೆಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯು ಸೆಪ್ಚೆಂಬರ್ 21ರಂದು ಸುಪ್ರೀಂಕೋರ್ಟಿಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ತಿಳಿಸಿದೆ.
ಒಬಿಸಿ/ಬಿಬಿಸಿಗಳ ಗಣತಿಯು ಯಾವಾತ್ತೂ, ಆಡಳಿತಾತ್ಮಕವಾಗಿ ಅತ್ಯಂತ ಸಂಕೀರ್ಣವಾದ ಪ್ರಕ್ರಿಯೆಯಾಗಿದೆಯೆಂದು ಅಫಿಡವಿಟ್ ತಿಳಿಸಿದ್ದು, ಹಿಂದುಳಿದ ವರ್ಗಗಳನ್ನು ಗುರುತಿಸುವ ಮಾನದಂಡಗಳನ್ನು ದೃಢಪಡಿಸುವಲ್ಲಿ ಇರುವ ಪ್ರಾಯೋಗಿಕ ತೊಂದರೆಗಳನ್ನು ತಿಳಿಸಿದೆ.
2011ರ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಯ ಸಮೀಕ್ಷೆಯ ಭಾಗವಾಗಿ ನಡೆಸಲಾದ ಜಾತಿಗಣತಿಯಲ್ಲಿ ಲೋಪವಿದ್ದುದನ್ನೂ ಕೇಂದ್ರ ಸರ್ಕಾರ ಎತ್ತಿ ತೋರಿಸಿದ್ದು, ಸಮೀಕ್ಷೆಯಲ್ಲಿ ಗಣತಿದಾರರಿಂದಾದ ತಪ್ಪುಗಳು ಹಾಗೂ ಮಾಹಿತಿ ಸಂಗ್ರಹ ಪ್ರಕ್ರಿಯೆಯಲ್ಲಿನ ಲೋಪದೋಷಗಳಿಂದಾಗಿ, ಆ ದತ್ತಾಂಶಗಳು ಉಪಯೋಗಕ್ಕೆ ಬಾರದೆ ಹೋಗಿವೆ. ಹಾಗೂ ಪ್ರವೇಶಾತಿ, ಬಡ್ತಿ ಅಥವಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಯಾವುದೇ ಶಾಸನಾತ್ಮಕ ಪ್ರಕ್ರಿಯೆಗೆ ಅದನ್ನು ಆಧಾರವಾಗಿಟ್ಟುಕೊಳ್ಳಲು ಸಾಧ್ಯವಿಲ್ಲವೆಂದು ಸುಪ್ರೀಂಕೋರ್ಟ್ ಗೆ ತಿಳಿಸಿದೆ.
2011ರಲ್ಲಿ ನಡೆಸಲಾದ ಎಸ್‌ಇಸಿಸಿ ಸಮೀಕ್ಷೆಯು ಒಬಿಸಿ ಸಮೀಕ್ಷೆಯಾಗಿರಲಿಲ್ಲ . ಬದಲಿಗೆ ಅದೊಂದು ದೇಶದ ಎಲ್ಲಾ ಕುಟುಂಬಗಳ ಜಾತಿ ಸ್ಥಿತಿಗತಿಯನ್ನು ಲೆಕ್ಕಹಾಕುವ ಸಮಗ್ರ ಪ್ರಕ್ರಿಯೆಯಾಗಿತ್ತು ಎಂದು ತಿಳಿಸಿದೆ.

ಪ್ರಮುಖ ಸುದ್ದಿ :-   127 ವರ್ಷಗಳಷ್ಟು ಹಳೆಯ ಗೋದ್ರೇಜ್ ಗ್ರುಪ್‌ ಇಬ್ಭಾಗ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement