ಸ್ಫೂರ್ತಿದಾಯಕ..: ಕೈಗಳಿಂದಲೇ ವೇಗವಾಗಿ ಓಡಿ ಗಿನ್ನಿಸ್ ದಾಖಲೆ ಬರೆದ ಕಾಲುಗಳೇ ಇಲ್ಲದ ವ್ಯಕ್ತಿ..!..ವಿಡಿಯೋ ನೋಡಿ

ಜಿಯಾನ್ ಕ್ಲಾರ್ಕ್ ಎಂಬ 23 ವರ್ಷದ ವ್ಯಕ್ತಿ ಒಂದು ವಿಶಿಷ್ಟವಾದ ಸ್ಫೂರ್ತಿದಾಯಕ ವಿಶ್ವ ದಾಖಲೆ ಮುರಿದಿದ್ದಾರೆ. ಈ ದಾಖಲೆ ಇಡೀ ಪ್ರಪಂಚವನ್ನು ಮಾತನಾಡುವಂತೆ ಮಾಡಿದೆ. ಜಿಯಾನ್‌ ಕ್ಲಾರ್ಕ್‌ (Zion Clark ) ಓಹಿಯೋದ 23 ವರ್ಷದ ಕ್ರೀಡಾಪಟು ತನ್ನ ಕೈಯಗಳಿಂದ 20 ಮೀಟರ್ ದೂರವನ್ನು 4.76 ಸೆಕೆಂಡುಗಳಲ್ಲಿ ಓಡಿ ಕೈಗಳಿಂದ ಅತ್ಯಂತ ವೇಗವಾಗಿ ಓಡಿದ ವ್ಯಕ್ತಿಯೆಂದು ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾರೆ.

ಈ ಸಾಧನೆಯನ್ನು ಹೆಚ್ಚು ಸ್ಫೂರ್ತಿದಾಯಕ ಮತ್ತು ಮನಮುಟ್ಟುವಂತೆ ಮಾಡುವುದಕ್ಕೆ ಕಾರಣ ಜಿಯಾನ್‌ ಕ್ಲಾರ್ಕ್ ವಿಭಿನ್ನ ಸಾಮರ್ಥ್ಯವುಳ್ಳವರು. ಓಹಿಯೋದ ಇವರು ಕಾಲುಗಳಿಲ್ಲದೆ ಜನಿಸಿದವರು. ಕ್ಲಾರ್ಕ್ ಅವರು ಕಾಡಲ್ ರಿಗ್ರೆಷನ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದರು, ಇದು ಕೆಳ ದೇಹದ ಅಸಹಜ ಬೆಳವಣಿಗೆಯಿಂದ ನಿರೂಪಿಸಲ್ಪಟ್ಟಿದೆ. ಆದಾಗ್ಯೂ, ಅವರ ಅಂಗವೈಕಲ್ಯವು ಅವರು ಕನಸನ್ನು ನನಸು ಮಾಡುವುದನ್ನು ಎಂದಿಗೂ ತಡೆಯಲಿಲ್ಲ.

ಅವರು ಶಾಲೆಯಲ್ಲಿ ಕುಸ್ತಿಪಟುವಾಗಿದ್ದರು ಮತ್ತು ಯಾವಾಗಲೂ ಕ್ರೀಡೆಗಳಲ್ಲಿ ಆಸಕ್ತಿ ಹೊಂದಿದ್ದರು.
ಫೆಬ್ರವರಿ 2021 ರಲ್ಲಿ, ತನ್ನ ಕೈಯಲ್ಲಿ ಓಡಬಲ್ಲ ಅತ್ಯಂತ ವೇಗದ ವ್ಯಕ್ತಿ ಎಂಬ ದಾಖಲೆಯನ್ನು ಮುರಿಯಲು ಅವರು ತನ್ನ ಮೊದಲ ಪ್ರಯತ್ನವನ್ನು ಮಾಡಿದರು.. ಅವರು ಓಹಿಯೋದ ಮಾಸಿಲನ್‌ನಲ್ಲಿರುವ ತಮ್ಮ ಪ್ರೌಢಶಾಲಾ ಜಿಮ್‌ನಲ್ಲಿ 4.78 ಸೆಕೆಂಡುಗಳಲ್ಲಿ ದಾಖಲೆ ಮುರಿದು ಕೈಯಿಂದ ಅತ್ಯಂತ ವೇಗವಾಗಿ ಓಡಿದ ವ್ಯಕ್ತಿ ಎಂದು ದಾಖಲೆ ಎಣಿಕೆ ಸಂಸ್ಥೆಯ ವೆಬ್‌ಸೈಟ್ ( record-counting organization’s website) ಹೇಳಿದೆ.
ನಾನು ಅಂತಿಮವಾಗಿ ಅಧಿಕೃತವಾಗಿ ಗಿನ್ನೆಸ್ ವಿಶ್ವದಾಖಲೆದಾರನೆಂದು ಘೋಷಿಸಬಲ್ಲೆ ! 20 ಮೀ.ಗೆ ಎರಡು ಕೈಗಳಲ್ಲಿ ಓಡಿದ ಅತಿ ವೇಗದ ಮನುಷ್ಯ. ಇದು ನನಗೆ ದೊಡ್ಡ ಸಾಧನೆ ಎಂದು ಜಿಯಾನ್ ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಸಾಧನೆಯನ್ನು ಹಂಚಿಕೊಂಡಿದ್ದಾರೆ.
ಗಿನ್ನೆಸ್ ವಿಶ್ವ ದಾಖಲೆಯೊಂದಿಗೆ ಮಾತನಾಡಿದ ಅವರು, “ನಾನು ವಿಕಲಾಂಗ ಮಕ್ಕಳಿಗೆ ಅಥವಾ ಅಂಗವೈಕಲ್ಯ ಹೊಂದಿರುವ ಯಾರಿಗಾದರೂ ಸಂದೇಶವನ್ನು ನೀಡಲು ಬಯಸುತ್ತೇನೆ- ಇದು ಕಷ್ಟಕರವಾಗಿರುತ್ತದೆ, ಆದರೆ ನೀವು ದೃಢ ನಿರ್ಧಾರವನ್ನು ಹೊಂದಿದ್ದರೆ, ನೀವು ಅದನ್ನು ಮಾಡಬಹುದು ಎಂದು ಹೇಳುತ್ತಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ರಾಷ್ಟ್ರದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಆದ್ಯತೆ ; ಮನಮೋಹನ ಸಿಂಗ್ ಹಳೆಯ ವೀಡಿಯೊ ಮೂಲಕ ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ ಬಿಜೆಪಿ

 

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement