ಭಯೋತ್ಪಾದನೆಯನ್ನು ರಾಜಕೀಯ ದಾಳವಾಗಿ ಬಳಕೆ; ವಿಶ್ವಸಂಸ್ಥೆ ಸಭೆಯಲ್ಲಿ ಪಾಕ್​ಗೆ ತಿರುಗೇಟು ನೀಡಿದ ಮೋದಿ

ವಿಶ್ವಸಂಸ್ಥೆ (ನ್ಯೂಯಾರ್ಕ್‌): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 76 ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ((Prime Minister Narendra modi speech in UNGC) ) ಶನಿವಾರ ಮಾಡಿದ ಭಾಷಣದಲ್ಲಿ ಭಯೋತ್ಪಾದನೆಯನ್ನು “ರಾಜಕೀಯ ಸಾಧನ” ವಾಗಿ ಬಳಸುತ್ತಿರುವ ರಾಷ್ಟ್ರಗಳು ಅದು ತಮಗೂ ಇರುವ ಬೆದರಿಕೆಯನ್ನು ಅರಿತುಕೊಳ್ಳಬೇಕು ಎಂದು ಪಾಕಿಸ್ತಾನ ಹಾಗೂ ಚೀನಾ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಪ್ರತಿಗಾಮಿ ಚಿಂತನೆಯೊಂದಿಗೆ, ಭಯೋತ್ಪಾದನೆಯನ್ನು ರಾಜಕೀಯ ಸಾಧನವಾಗಿ ಬಳಸುವ ದೇಶಗಳು ಭಯೋತ್ಪಾದನೆಯು ತಮಗೂ ಅಪಾಯವನ್ನುಂಟುಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು” ಎಂದು ಮಾರ್ಮಿಕವಾಗಿ ಪಾಕಿಸ್ತಾನಕ್ಕೆ ತಿವಿದರು.
ಇದೇ ವೇಳೆ ಅಫ್ಘಾನ್ ನೂತನ ಸರ್ಕಾರದ ಕುರಿತು ಮಾತನಾಡಿದ ಅವರು, ಅಫ್ಘಾನಿಸ್ತಾನವೂ ಭಯೋತ್ಪಾದನೆಯನ್ನು ಪ್ರಚೋದಿಸಬಾರರು. ಕೆಲವರು ಅಫ್ಘಾನಿಸ್ತಾನದ ಪರಿಸ್ತಿತಿ ಲಾಭ ಪಡೆಯಲು ಮುಂದಾಗಿದ್ದಾರೆ. ಪ್ರಾಕ್ಸಿ ಯುದ್ಧ, ಭಯೋತ್ಪಾದನೆ ಮತ್ತು ಅಫ್ಘಾನಿಸ್ತಾನದ ಪರಿಸ್ಥಿತಿ ನಮಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಿದೆ. ವಿಶ್ವಸಂಸ್ಥೆ ಕೂಡ ಅದರ ಪ್ರಸ್ತುತತೆಗೆ ತಕ್ಕಂತೆ ವರ್ತಿಸಬೇಕು ಎಂದರು
ಅಫ್ಘಾನಿಸ್ತಾನದ ಪರಿಸ್ಥಿತಿ ಮತ್ತು ಅಲ್ಲಿ ತಾಲಿಬಾನ್ ಸ್ವಾಧೀನಪಡಿಸಿಕೊಂಡಿದ್ದನ್ನು ಎತ್ತಿ ತೋರಿಸಿದ ಮೋದಿ, “ಅಫ್ಘಾನಿಸ್ತಾನ ಭೂಮಿಯನ್ನು ಭಯೋತ್ಪಾದನೆ ಮತ್ತು ಭಯೋತ್ಪಾದನೆ ಹರಡಲು ಬಳಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು” ಎಂದು ಹೇಳಿದರು.
ಪ್ರತಿಗಾಮಿ ಚಿಂತನೆ ಮತ್ತು ಉಗ್ರವಾದದ ಬೆಳೆಯುತ್ತಿರುವ ಸವಾಲುಗಳನ್ನು ಎದುರಿಸಲು ವಿಜ್ಞಾನ ಮತ್ತು ತರ್ಕಬದ್ಧ ಚಿಂತನೆಯ ಆಧಾರದ ಮೇಲೆ ಅಭಿವೃದ್ಧಿಯು ಇಂದಿನ ಅಗತ್ಯವಾಗಿದೆ. ಇಂದು ಪ್ರತಿಗಾಮಿ ಚಿಂತನೆ ಮತ್ತು ಉಗ್ರವಾದದ ಅಪಾಯವು ಪ್ರಪಂಚದಾದ್ಯಂತ ಹೆಚ್ಚುತ್ತಿದೆ. ಈ ಸನ್ನಿವೇಶಗಳಲ್ಲಿ, ಪ್ರಪಂಚವು ವಿಜ್ಞಾನದ ತರ್ಕಬದ್ಧ ಮತ್ತು ಪ್ರಗತಿಪರ ಚಿಂತನೆಯನ್ನು ಅಭಿವೃದ್ಧಿಯ ಮುಖ್ಯ ಆಧಾರವನ್ನಾಗಿ ಮಾಡಬೇಕಾಗಿದೆ ಎಂದು ಎಂದು ಪ್ರತಿಪಾದಿಸದರು.
ನಮ್ಮ ಸಾಗರಗಳು ಅಂತರಾಷ್ಟ್ರೀಯ ವ್ಯಾಪಾರದ ಜೀವನಾಡಿಯಾಗಿದೆ. ನಾವು ಅವುಗಳನ್ನು ವಿಸ್ತರಣೆಯ ಓಟದಿಂದ ರಕ್ಷಿಸಬೇಕು. ಅಂತಾರಾಷ್ಟ್ರೀಯ ಸಮುದಾಯವು ಒಂದೇ ಧ್ವನಿಯಲ್ಲಿ ನಿಯಮ ಆಧಾರಿತ ವಿಶ್ವ ಕ್ರಮವನ್ನು ಬಲಪಡಿಸಲು ಮಾತನಾಡಬೇಕು” ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮತದಾನಕ್ಕೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ...!

 

 

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement