ಅಮೆಜಾನ್‌ ಕಂಪನಿ ಈಸ್ಟ್​ ಈಸ್ಟ್​ ಇಂಡಿಯಾ ಕಂಪನಿ 2.0 ಎಂದು ಹೋಲಿಕೆ ಮಾಡಿ ಟೀಕಿಸಿದ ಆರ್​ಎಸ್​ಎಸ್​ ಮುಖವಾಣಿ ಪಾಂಚಜನ್ಯ

ನವದೆಹಲಿ: ಅಮೆಜಾನ್ (Amazon) ವಿಶ್ವದ ಅತಿದೊಡ್ಡ ಆನ್​ಲೈನ್ ಮಾರುಕಟ್ಟೆ. ಇ-ಕಾಮರ್ಸ್​ನ (E-Commerce) ಪ್ರಮುಖ ಕಂಪೆನಿ ಬಗ್ಗೆ ಆರ್​ಎಸ್​​ಎಸ್​ ಸಂಘಟನೆಯ ಮುಖವಾಣಿ ಪಾಂಚಜನ್ಯ (PanchaJanya) ಈ ಕಂಪನಿ “ಈಸ್ಟ್​ ಇಂಡಿಯಾ ಕಂಪೆನಿ 2.0” (East India 2.0) ಹೋಲಿಕೆ ಮಾಡಿದೆ ಎಂದು ವರದಿಗಳು ತಿಳಿಸಿವೆ.
ಈ ಕಂಪನಿ ಸರ್ಕಾರದಿಂದ ಅನುಕೂಲಕರ ನೀತಿಗಳನ್ನು ಪಡೆಯುವ ಸಲುವಾಗಿ ಕೋಟ್ಯಂತರ ರೂಪಾಯಿ ಲಂಚ ನೀಡಿದೆ ಎಂದು ಆರೋಪಿಸಿದೆ. ಪತ್ರಿಕೆಯ ಇತ್ತೀಚಿನ ಆವೃತ್ತಿಯಲ್ಲಿ, ಅಮೆಜಾನ್ ಅನ್ನು ಟೀಕಿಸಿ ಕವರ್ ಸ್ಟೋರಿಯನ್ನು ಬರೆದಿದೆ ಎಂದು ವರದಿಗಳು ತಿಳಿಸಿವೆ.
ಪತ್ರಿಕೆಯಲ್ಲಿ ಪ್ರಕಟವಾಗಿರುವ ಬರಹದಲ್ಲಿ, “18 ನೇ ಶತಮಾನದಲ್ಲಿ ಭಾರತವನ್ನು ವಶಪಡಿಸಿಕೊಳ್ಳಲು ಈಸ್ಟ್ ಇಂಡಿಯಾ ಕಂಪನಿ ಏನು ಮಾಡುತ್ತಿತ್ತೋ? ಅಮೆಜಾನ್ ಚಟುವಟಿಕೆಗಳಲ್ಲಿ ಇಂದು ಅಂತಹದ್ದೇ ಕೆಲಸಗಳು ಗೋಚರಿಸುತ್ತಿದೆ. ಇದು “ಈಸ್ಟ್ ಇಂಡಿಯಾ ಕಂಪನಿ 2.0” ಎಂದು ಟೀಕಿಸಿದೆ. ಅಲ್ಲದೆ “ಈಸ್ಟ್​ ಇಂಡಿಯಾ 2.0” ಎಂಬ ಶೀರ್ಷಿಕೆಯ ಅಡಿಯಲ್ಲೇ ಈ ಲೇಖನವನ್ನೂ ಬರೆಯಲಾಗಿದೆ.
ಅಮೆಜಾನ್ ತನ್ನ ಏಕಸ್ವಾಮ್ಯವನ್ನು ಭಾರತೀಯ ಮಾರುಕಟ್ಟೆಯಲ್ಲಿ ಸ್ಥಾಪಿಸಲು ಬಯಸುತ್ತದೆ ಎಂದು ಹೇಳುರುವ ಲೇಖನ “ಹಾಗೆ ಮಾಡುವುದಕ್ಕಾಗಿ, ಇದು ಭಾರತೀಯ ನಾಗರಿಕರ ಆರ್ಥಿಕ, ರಾಜಕೀಯ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ವಶಪಡಿಸಿಕೊಳ್ಳಲು ಉಪಕ್ರಮಗಳನ್ನು ತೆಗೆದುಕೊಳ್ಳಲು ಆರಂಭಿಸಿದೆ. ಅಮೆಜಾನ್‌ನ ವಿಡಿಯೋ ಪ್ಲಾಟ್‌ಫಾರ್ಮ್, ಪ್ರೈಮ್ ವೀಡಿಯೋವನ್ನು ದೊಡ್ಡ ಮಾರುಕಟ್ಟೆಯಾಗಿ ಸೃಷ್ಟಿಸಲಾಗಿದೆ. ಅಲ್ಲದೆ, ಇದರ ಮೂಲಕ ಭಾರತೀಯ ಸಂಸ್ಕೃತಿಗೆ ವಿರುದ್ಧವಾದ ಚಲನಚಿತ್ರಗಳು ಮತ್ತು ವೆಬ್ ಸರಣಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಅಲ್ಲದೆ, ಇಂದು ಅಮೆಜಾನ್ ಅನೇಕ ಪ್ರಾಕ್ಸಿ ಘಟಕಗಳನ್ನು ಸ್ಥಾಪಿಸಿದೆ. ಮತ್ತು ತನ್ನ ಪರವಾಗಿರುವ ಪಾಲಿಸಿಗಳಿಗಾಗಿ ಕೋಟಿಗಟ್ಟಲೆ ಲಂಚವನ್ನು ನೀಡಿದ ವರದಿಗಳೂ ಇವೆ” ಎಂದು ಲೇಖನದಲ್ಲಿ ಆರೋಪಿಸಲಾಗಿದೆ.
ಫ್ಯೂಚರ್ ಗ್ರೂಪ್ ಸ್ವಾಧೀನಕ್ಕೆ ಸಂಬಂಧಿಸಿದಂತೆ ಅಮೆಜಾನ್ ಕಾನೂನು ಸಮರದಲ್ಲಿ ಸಿಲುಕಿಕೊಂಡಿದೆ ಮತ್ತು ಭಾರತದ ಸ್ಪರ್ಧಾ ಆಯೋಗದ (ಸಿಸಿಐ) ತನಿಖೆಯನ್ನು ಎದುರಿಸುತ್ತಿದೆ. ಅಮೆರಿಕ ಇ-ಕಾಮರ್ಸ್ ದೈತ್ಯ ಭಾರತದಲ್ಲಿ ತನ್ನ ಕಾನೂನು ಪ್ರತಿನಿಧಿಗಳು ನೀಡಿದ ಆಪಾದಿತ ಲಂಚದ ಬಗ್ಗೆ ತನಿಖೆ ನಡೆಸುತ್ತಿದೆ ಮತ್ತು 2018-20ರ ಅವಧಿಯಲ್ಲಿ ದೇಶದಲ್ಲಿ ಅಸ್ತಿತ್ವವನ್ನು ಕಾಯ್ದುಕೊಳ್ಳಲು ಇದು ₹ 8,546 ಕೋಟಿ ಅಥವಾ 1.2 ಬಿಲಿಯನ್ ಕಾನೂನು ವೆಚ್ಚಗಳನ್ನು ಖರ್ಚು ಮಾಡಿದೆ ಎಂದು ವರದಿಗಳು ಬಂದಿವೆ. ಇದರ ಮಧ್ಯಯೇ ಪಾಂಚಜನ್ಯ ಪತ್ರಿಕೆಯಲ್ಲಿ ಅಮೆಜಾನ್‌ ಟೀಕಿಸಿ ಈ ಲೇಖನ ಬಂದಿದೆ.
ದೇಶದ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್, ಅಮೆಜಾನ್ ಒಳಗೊಂಡ ಆಪಾದಿತ ಲಂಚ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಗೆ ಒತ್ತಾಯಿಸಿದೆ. ಈ ಹಿಂದೆ, ಆರ್‌ಎಸ್‌ಎಸ್-ಅಂಗಸಂಸ್ಥೆ ಸ್ವದೇಶಿ ಜಾಗರಣ್ ಮಂಚ್ ಸಹ ಅಮೆಜಾನ್‌ನಂತಹ ಇ-ಕಾಮರ್ಸ್ ಮಾರುಕಟ್ಟೆ ವಿರುದ್ಧ ವರ್ತಕರ ಹಿತಾಸಕ್ತಿಗೆ ಹಾನಿಕಾರಕ ಕಾನೂನುಗಳನ್ನು ತಪ್ಪಿಸಿದ್ದಕ್ಕಾಗಿ ಮತ್ತು ಅನೈತಿಕ ವ್ಯಾಪಾರ ಪದ್ಧತಿಗಳಲ್ಲಿ ತೊಡಗಿದ್ದರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿತ್ತು.

ಪ್ರಮುಖ ಸುದ್ದಿ :-   ವೀಡಿಯೊ | ಜನವರಿಯಲ್ಲಿ ಉದ್ಘಾಟನೆಯಾದ ನಂತರ ಅಯೋಧ್ಯೆ ರಾಮಮಂದಿರದಲ್ಲಿ ಇದೇ ಮೊದಲ ಬಾರಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement