ರಾಷ್ಟ್ರಮಟ್ಟದ ಅತ್ಯುತ್ತಮ ಕಾರ್ಯಕ್ರಮ ಅಧಿಕಾರಿ ಪ್ರಶಸ್ತಿ: ಜೆಎಸ್ಎಸ್‌ ನಿಂದ ಸನ್ಮಾನ

ಧಾರವಾಡ: ಜೆಎಸ್‌ಎಸ್ ಬನಶಂಕರಿ ಕಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕಕ್ಕೆ ಅತ್ಯತ್ತಮ ಘಟಕ ಮತ್ತು ಸುರೇಶಪ್ಪ ಸಜ್ಜನ ಅವರಿಗೆ ೨೦೧೯-೨೦೨೦ನೇ ಸಾಲಿನ ರಾಷ್ಟ್ರಮಟ್ಟದ ಅತ್ಯುತ್ತಮ ಕಾರ್ಯಕ್ರಮ ಅಧಿಕಾರಿ ಪ್ರಶಸ್ತಿಯನ್ನು ೨೪ ಸಪ್ಟೆಂಬರ್ ೨೦೨೧ ರಂದು ದೆಹಲಿಯ ಸುಶ್ಮಾಸ್ವರಾಜ ಭವನದಲ್ಲಿ ನೀಡಿ ಗೌರವಿಸಲಾಯಿತು.
ಕಳೆದ ಆರು ವರ್ಷಗಳ ಅವಧಿಯಲ್ಲಿ ೧೦ ರಕ್ತದಾನ ಶಿಬಿರ, ೧೨ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ಶಿಬಿರ, ೮೮ ಕಣ್ಣಿನ ಶಸ್ತ್ರಚಿಕಿತ್ಸೆ, ಮಹಿಳಾ ಸಬಲೀಕರಣ, ೧೩೫ ಶೌಚಾಲಯಗಳ ನಿರ್ಮಾಣ, ಇತ್ಯಾದಿ ಕಾರ್ಯಕ್ರಮಗಳನ್ನು ಮಾಡಿದ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ಲಭಿಸಿದೆ.
ಅವರ ಈ ಸಾಧನೆಗಾಗಿ ಅವರನ್ನು ಜೆಎಸ್ಎಸ್ ಪರವಾಗಿ ಸನ್ಮಾನಿಸಲಾಯಿತು. ಜೆಎಸ್‌ಎಸ್ ಕಾರ್ಯದರ್ಶಿಗಳಾದ ಡಾ. ನ. ವಜ್ರಕುಮಾರ ಹಾಗೂ ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದರವರು ಹಾಗೂ ಡಾ. ಇಂದು ಪಂಡಿತ ಉಪಸ್ಥಿತರಿದ್ದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ