ಮತ್ತೊಂದು ದಿಢೀರ್‌ ಬೆಳವಣಿಗೆಯಲ್ಲಿ ಪಂಜಾಬ್ ಸಚಿವೆ ರಜಿಯಾ ಸುಲ್ತಾನಾ ರಾಜೀನಾಮೆ

ಮತ್ತೊಂದು ದಿಢೀರ್‌ ಬೆಳವಣಿಗೆಯಲ್ಲಿ ಪಂಜಾಬ್ ಸಚಿವೆ ರಜಿಯಾ ಸುಲ್ತಾನಾ ಮಂಗಳವಾರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ನವಜೋತ್ ಸಿಂಗ್ ಸಿಧು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ.
ರಜಿಯಾ ಸುಲ್ತಾನಾ ತಮ್ಮ ರಾಜೀನಾಮೆ ಪತ್ರದಲ್ಲಿ “ನವಜೋತ್ ಸಿಂಗ್ ಸಿಧುಗೆ ಬೆಂಬಲಿಸಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ನೇತೃತ್ವದ ಪಂಜಾಬ್ ಕ್ಯಾಬಿನೆಟ್‌ನಲ್ಲಿ ನೀರು ಸರಬರಾಜು ಮತ್ತು ನೈರ್ಮಲ್ಯ, ಸಾಮಾಜಿಕ ಭದ್ರತೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮುದ್ರಣ ಮತ್ತು ಸ್ಟೇಷನರಿ ವಿಭಾಗಗಳನ್ನು ನೀಡಿದ ಕೆಲವು ಗಂಟೆಗಳ ನಂತರ ಆಕೆಯ ರಾಜೀನಾಮೆ ಹೊರಬಿದ್ದಿದೆ.
ಜುಲೈನಲ್ಲಿ ನವಜೋತ್‌ ಸಿಂಗ್‌ ಸಿಧು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದಾಗ ಪ್ರಾಸಂಗಿಕವಾಗಿ, ಸುಲ್ತಾನಾ ಅವರ ಪತಿ ಮೊಹಮ್ಮದ್ ಮುಸ್ತಫಾ ಸಿಧು ಅವರ ಮುಖ್ಯ ಕಾರ್ಯತಂತ್ರದ ಸಲಹೆಗಾರರಾಗಿ ನೇಮಕವಾಗಿದ್ದರು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸಿಧು ರಾಜೀನಾಮೆ ಪತ್ರದಲ್ಲಿ ಪಂಜಾಬ್ ಭವಿಷ್ಯದ ಬಗ್ಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಆದರೂ ಅವರ ಪತ್ರವು ಇದಕ್ಕಿಂತ ಮುಂದೆ ೇನನ್ನೂ ಹೇಳಿಲ್ಲ. ಸಿಧು ರಾಜೀನಾಮೆ ನೀಡಿದ ಕೆಲವೇ ಗಂಡೆಗಳ ನಂತರ ಈ ಬೆಳವಣಿಗೆ ನಡೆದಿದ್ದು, ರಜಿಯಾ ಸುಲ್ತಾನಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮೂಲಗಳ ಪ್ರಕಾರ, ಸಿಧು ಅವರು, ರಾಜಕೀಯ ಪ್ರತಿಸ್ಪರ್ಧಿ ಹಿಂದಿನ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರೊಂದಿಗಿನ ಸುದೀರ್ಘ ಅಧಿಕಾರ ಹೋರಾಟದ ನಂತರ ಜುಲೈನಲ್ಲಿ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧಿಕಾರವನ್ನು ವಹಿಸಿಕೊಂಡರು, ಕೆಲವು ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಸಿಧು ಅಸಮಾಧಾನಗೊಂಡಿದ್ದರು – ಹೊಸದಾಗಿ ಪಂಜಾಬ್ ಕ್ಯಾಬಿನೆಟ್‌ನಲ್ಲಿ ಕೆಲವು ಶಾಸಕರ ಸೇರ್ಪಡೆ ವಿಧಾನಸಭೆ ಮತ್ತು ರಾಜ್ಯದ ಅಡ್ವೋಕೇಟ್ ಜನರಲ್ ಹುದ್ದೆಗೆ ಎಪಿಎಸ್ ಡಿಯೋಲ್ ಅವರ ಇತ್ತೀಚಿನ ನೇಮಕಾತಿಯೂ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement