ಕೌಟುಂಬಿಕ ಕಲಹ; ಒಂದೇ ಮನೆಯ ಮೂವರ ದಾರುಣ ಕೊಲೆ‌‌

ರಾಯಚೂರು: ಸಮೀಪದ ಯರಮರಸ್ ಕ್ಯಾಂಪ್ ನಲ್ಲಿ ಕೌಟುಂಬಿಕ ಕಲಹದಿಂದ ಮೂವರ ದಾರುಣವಾಗಿ ಕೊಲೆಯಾದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ಒಂದೇ ಕುಟುಂಬದ ಸಂತೋಷಿ(45) ವೈಷ್ಣವಿ (25) ಮತ್ತು ಆರತಿ(16)ಎಂಬುವವರ ಕೊಲೆಯಾದವರು ಎಂದು ಗುರುತಿಸಲಾಗಿದೆ. ಸಾವಿಗೆ ಕುಟುಂಬ ಕಲಹವೇ ಕಾರಣ ಎಂದು ಶಂಕಿಸಲಾಗಿದೆ.
ಕಳೆದ ಆರು ತಿಂಗಳ ಹಿಂದೆಯಷ್ಟೇ ಮಗಳು ವೈಷ್ಣವಿ ಮದುವೆಯಾಗಿತ್ತು. ಆದರೆ, ಅಳಿಯ ಮಗಳ ನಡುವೆ ಹೊಂದಾಣಿಕೆ ಇರಲಿಲ್ಲ. ಪದೇಪದೆ ಜಗಳ ಆಡುತ್ತಿದ್ದರು. ಕಳೆದ ಒಂದು ತಿಂಗಳ ಹಿಂದೆ ಮಗಳು ತವರು ಮನೆಗೆ ಬಂದಿದ್ದಳು ಎಂದು ನೆರೆ ಮನೆಯವರು ತಿಳಿಸಿದ್ದಾರೆ. ನಿನ್ನೆ ರಾತ್ರಿ ಮೃತರು ಕೊಲೆಯಾಗುವ ಮುನ್ನ ನೆರೆಮನೆಯವರಿಗೆ ಫೋನ್ ಮಾಡಿದ್ದಾರೆ. ಆದರೆ, ರಾತ್ರಿಯಾಗಿದ್ದರಿಂದ ಅವರು ಕರೆ ಸ್ವೀಕರಿಸಿರಲಿಲ್ಲ. ಬೆಳಗ್ಗೆ ಮರಳಿ ಕರೆ ಮಾಡಿದರೆ ಯಾರು ಕರೆ ಸ್ವೀಕರಿಸಿಲ್ಲ. ಅನುಮಾನ ಬಂದು ಹೋಗಿ ಪರಿಶೀಲಿಸಿದಾಗ ಕೊಲೆಯಾದ ಘಟನೆ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಎಸ್ ಪಿ ಪ್ರಕಾಶ ನಿಕ್ಕಂ, ಹೆಚ್ಚುವರಿ ಎಸ್ ಪಿ ಶ್ರೀಹರಿಬಾಬು ಸೇರಿದಂತೆ ಗ್ರಾಮೀ‌ಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಳಿಯ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್‌ನಿಂದ ನಾಲ್ವರಿಗೆ ಟಿಕೆಟ್‌ ಘೋಷಣೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement