ಬೆಂಗಳೂರು: ಬೀಗ ಜಡಿದ ನಂತರ ೫ ಕೋಟಿ ರೂ. ತೆರಿಗೆ ಪಾವತಿಸಿದ ಮಂತ್ರಿ ಮಾಲ್‌

posted in: ರಾಜ್ಯ | 0

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ತೆರಿಗೆ ವಂಚಕರ ವಿರುದ್ಧ ಬಿಬಿಎಂಪಿ ಸಮರ ಮುಂದುವರಿದಿದ್ದು, ಪ್ರತಿಷ್ಠಿತ ಮಂತ್ರಿ ಮಾಲ್ ಮುಖ್ಯದ್ವಾರಕ್ಕೆ ಬೀಗ ಜಡಿದ ನಂತರ ತೆರಿಗೆ ಹಣ ಪಾವತಿಸಲಾಗಿದೆ.
ಮಂತ್ರಿ ಮಾಲ್ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಬಗ್ಗೆ ಹಲವು ಬಾರಿ ನೋಟಿಸ್ ನೀಡಿ ಕಟ್ಟುವಂತೆ ಬಿಬಿಎಂಪಿ ಮಲ್ಲೇಶ್ವರಂನಲ್ಲಿರುವಂತ ಮಂತ್ರಿ ಮಾಲ್ ಗೆ ಸೂಚಿಸಲಾಗಿತ್ತು. ಆದರೇ ನೋಟಿಸ್‌ಗೂ ಉತ್ತರಿಸಿರಲಿಲ್ಲ ಹಾಗೂ ಆಸ್ತಿ ತೆರಿಗೆಯನ್ನು ಕಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಗುರುವಾರ ಪಾಲಿಕೆ ಅಧಿಕಾರಿಗಳು ಬೀಗ ಹಾಕಿ ಬಿಸಿ ಮುಟ್ಟಿಸಿದ್ದರು. ಇದಾದ ಬಳಿಕ, ಇದರಿಂದ ಎಚ್ಚೆತ್ತುಕೊಂಡಂತ ಮಂತ್ರಿ ಮಾಲ್ ಆಸ್ತಿ ತೆರಿಗೆ ಬಾಕಿಯ ಪಾವತಿಗಾಗಿ ೫ ಕೋಟಿ ಡಿಡಿ ನೀಡಿದೆ. ಬಾಕಿ ಹಣವನ್ನು ಸಹ ಪಾವತಿಸುವುದಾಗಿ ತಿಳಿಸಿದೆ.
೨೦೧೭ರ ಬಳಿಕ ಮಂತ್ರಿ ಮಾಲ್ ಇಲ್ಲಿಯವರೆಗೆ ಆಸ್ತಿ ತೆರಿಗೆಯನ್ನು ಪಾವತಿಸಿರಲಿಲ್ಲ. ಇದರಿಂದಾಗಿ ಬಡ್ಡಿ ಸಹಿತ ೩೭ ಕೋಟಿಯಷ್ಟು ಆಸ್ತಿ ತೆರಿಗೆ ಬಾಕಿ ಉಳಿದಿತ್ತು. ಹೀಗಾಗಿ ಬಾಕಿ ಆಸ್ತಿ ತೆರಿಗೆ ಪಾವತಿಸುವಂತೆ ಇಂದು ಬಿಬಿಎಂಪಿ ಅಧಿಕಾರಿಗಳು ಮಂತ್ರಿಮಾಲ್ ಗೆ ಬೀಗ ಹಾಕಿದ ಬಳಿಕ ಅಭಿಷೇಕ್ ಡೆವಲಪರ್ಸ್ ಹೆಸರಿನಲ್ಲಿ ೫ ಕೋಟಿ ಆಸ್ತಿ ತೆರಿಗೆ ಪಾವತಿಸಿದೆ.

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ