
ಹುಬ್ಬಳ್ಳಿ: ಈಗ ಹುಬ್ಬಳ್ಳಿ ಹಾಗೂ ಕಲಘಟಗಿ ತಾಲೂಕಿನಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಕಲಘಟಗಿಯ ದೇವರ ಗುಡಿಹಾಳ ಮತ್ತು ಬೂದನಗುಡ್ಡದ ಸಮೀಪ ದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂದು ವರದಿಯಾಗಿದೆ.
ಹುಬ್ಬಳ್ಳಿ ತಾಲೂಕಿನ ದೇವರಗುಡುಹಾಳ, ಕಲಘಟಗಿ ತಾಲೂಕಿನ ಬೂದನಗುಡ್ಡದಲ್ಲಿ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಸುತ್ತಾಡಿದೆ ಎಂದು ವರದಿಯಾಗಿದೆ. ಅರಣ್ಯ ಇಲಾಖೆ ಇದನ್ನು ಖಚಿತಪಡಿಸಿದೆ ಎಂದು ವಿಜಯವಾಣಿ ವರದಿ ಮಾಡಿದೆ.
ಇದು ಈ ಮೊದಲು ಕಾಣಿಸಿಕೊಂಡಿದ್ದ ಚಿರತೆಯೋ ಅಥವಾ ಬೇರೆಯದೋ ಎಂಬುದು ಸ್ಪಷ್ಟವಾಗಿಲ್ಲ.
ಯಾಕೆಂದರೆ ಸುಮಾರು ಒಂದು ತಿಂಗಳ ಹಿಂದೆ ಅಂಚಟಗೇರಿ ಬಳಿ ಕಾಣಿಸಿಕೊಂಡಿತ್ತು. ಕೆಲ ದಿನಗಳ ನಂತರ ನೃತಪತುಂಬ ಬೆಟ್ಟದಲ್ಲಿ ಕಾಣಿಸಿಕೊಂಡಿತ್ತು. ಅನಂತರ ಚಿರತೆ ಅಲ್ಲಿ ಮತ್ತೆ ಕಂಡಿಲ್ಲ. ಹೀಗಾಗಿ ಇದೇ ಚಿರತೆ ಬೂದನಗುಡ್ಡ ಹಾಗೂ ಹೋಗಿದೆಯಾ ಎಂಬ ಬಗ್ಗೆಯೂ ಅರಣ್ಯ ಇಲಾಖೆ ಪರಿಶೀಲಿಸುತ್ತಿದ್ದು, ಚಿರತೆ ಸೆರೆಗೆ ಅರಣ್ಯ ಇಲಾಖೆಯಿಂದ ಬೋನು ಇಡಲಾಗಿದೆ. ಸಾರ್ವಜನಿಕರು ಮನೆಯಿಂದ ಹೊರ ಬಾರದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಚಿರತೆಯ ಸೆರೆಗೆ ಅರಣ್ಯ ಇಲಾಖೆಯವರು ಐದಾರು ಬೋನುಗಳನ್ನು ಇಟ್ಟು ಚಿರತೆ ಹಿಡಿಯಲು ಮುಂದಾಗಿದ್ದಾರೆ. ಕಳೆದ ಭಾನುವಾರ ಧಾರವಾಡ ಬಳಿಯ ಕವಲಗೇರಿಯ ಹೊಲದಲ್ಲಿ ಸೆರೆಯಾಗಿದ್ದ ಚಿರತೆಯನ್ನು ದೂರದ ಅರಣ್ಯ ಪ್ರದೇಶದಲ್ಲಿ ಈಗಾಗಲೇ ಬಿಡಲಾಗಿದೆ. ಈ ಮಧ್ಯೆ ಹುಬ್ಬಳ್ಳಿ ಹಾಗೂ ಕವಲಗೇರಿಯಲ್ಲಿ ಕಂಡಿದ್ದ ಚಿರತೆ ಒಂದೋ ಅಥವಾ ಬೇರೆಯದ್ದೋ ಎಂಬುದನ್ನು ತಿಳಿಯಲು ಹೈದರಾಬಾದ್ನ ಪ್ರಯೋಗಾಲಯಕ್ಕೆ ಅದರ ಲದ್ದಿಯನ್ನು ಕಳುಹಿಸಲಾಗಿದೆ.
ಈ ಮಧ್ಯೆ ಬಿಡ್ನಾಳ ಹಾಗೂ ಅಂಚಟಗೇರಿ ಪ್ರದೇಶದಲ್ಲಿ ಯಾರೂ ಹೊರಗೆ ಬರಬಾರು ಹಾಗೂ ಜಾನುವಾರುಗಳನ್ನು ಹೊರಗೆ ಬಿಡಬಾರದು ಎಂದು ಆ ಪ್ರದೇಶಗಳಲ್ಲಿ ಡಂಗುರ ಹೊಡೆಸಬೇಕು ಎಂದು ತಾಲೂಕು ಪಂಚಾಯತಕ್ಕೆ ಅರಣ್ಯ ಇಲಾಖೆ ಮನವಿ ಮಾಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ