ಭಾರತದ ಅಗ್ರ 10 ಶ್ರೀಮಂತರಲ್ಲಿ ಮುಕೇಶ ಅಂಬಾನಿ ನಂ.1, ಗೌತಮ ಅದಾನಿ ನಂ.2 : ದೇಶದ 10 ಶ್ರೀಮಂತರ ಒಂದು ದಿನದ ಆದಾಯ ಎಷ್ಟು ಗೊತ್ತೆ..?

ಐಐಎಫ್ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2021 ರ ಪ್ರಕಾರ ಮುಕೇಶ್ ಅಂಬಾನಿ ಸತತ 10 ನೇ ವರ್ಷವೂ 7,18,000 ಕೋಟಿ ಸಂಪತ್ತಿನೊಂದಿಗೆ ಸತತ 10 ನೇ ವರ್ಷವೂ ಮುಖೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮುಂದುವರಿದಿದ್ದಾರೆ.
ಮುಖೇಶ್ ಅಂಬಾನಿಯ 2020-21 ರಲ್ಲಿ ಶೇ.9 ರಷ್ಟು ಏರಿಕೆಯಾಗಿದ್ದು, 7,18,000 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಮುಖೇಶ್ ಅಂಬಾನಿ ಪ್ರತಿನಿತ್ಯ 169 ಕೋಟಿ ರೂಪಾಯಿ ಗಳಿಸುತ್ತಿದ್ದಾರೆ.
.ಅದಾನಿ ಗ್ರೂಪ್​ನ ಗೌತಮ್ ಅದಾನಿ ಹಾಗೂ ಕುಟುಂಬದ ಸಂಪತ್ತು 5.06 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದರ ಹಿಂದಿನ ವರ್ಷ ಅದಾನಿ ಗ್ರೂಪ್ ಸಂಪತ್ತು 1.4 ಲಕ್ಷ ಕೋಟಿ ರೂಪಾಯಿ ಇತ್ತು. ಅದಾನಿ ಗ್ರೂಪ್ ಪ್ರತಿ ನಿತ್ಯದ ಆದಾಯ ಬರೋಬ್ಬರಿ 1,002 ಕೋಟಿ ರೂಪಾಯಿ ಸಂಪತ್ತುನ್ನು ಗಳಿಸುತ್ತಿದ್ದಾರೆ. ಗೌತಮ್ ಅದಾನಿ ಒಂದಲ್ಲ, ಐದು ಐಎನ್ಆರ್ 1 ಲಕ್ಷ ಕೋಟಿ ಕಂಪನಿಗಳನ್ನು ನಿರ್ಮಿಸಿದ ಏಕೈಕ ಭಾರತೀಯ ಎಂದು ಹುರುನ್ ಇಂಡಿಯಾದ ಎಂಡಿ ಮತ್ತು ಮುಖ್ಯ ಸಂಶೋಧಕ ಅನಸ್ ರೆಹಮಾನ್ ಜುನೈದ್ ಹೇಳಿದ್ದಾರೆ. ಗೌತಮ್ ಅದಾನಿ ಸಂಪತ್ತಿನ ಖಾತೆಗೆ ಪ್ರತಿನಿತ್ಯ 1,002 ಕೋಟಿ ರೂಪಾಯಿ ಸೇರ್ಪಡೆಯಾಗುತ್ತಿದೆ. ಇದರಿಂದಾಗಿ ಅದಾನಿ ಕುಟುಂಬ ಭಾರತದಲ್ಲಿ ಎರಡನೇ ಅತಿ ದೊಡ್ಡ ಶ್ರೀಮಂತ ಕುಟುಂಬವಾಗಿದೆ.
ಗೌತಮ್ ಅದಾನಿ ಚೀನಾದ ಬಾಟಲ್ ವಾಟರ್ ಉತ್ಪಾದಿಸುವ ಜುವಾಂಗ್ ಶಾನಶಾನ್​ ಅವರನ್ನು ಹಿಂದಕ್ಕಿ ಏಷ್ಯಾದ ಎರಡನೇ ಅತಿ ದೊಡ್ಡ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಗೌತಮ ಅದಾನಿ ಎರಡು ಸ್ಥಾನ ಮೇಲೆಕ್ಕೇರಿದ್ದು, ಎರಡನೇ ಸ್ಥಾನದಲ್ಲಿದ್ದಾರೆ.
ಎಚ್‌ಸಿಎಲ್ ಕಂಪನಿಯ ಶಿವನಾಡರ್ ಸಂಪತ್ತು ಶೇ.67 ರಷ್ಟು ಏರಿಕೆಯಾಗಿದೆ. ಶಿವನಾಡರ್ 2,36,600 ಕೋಟಿ ರೂಪಾಯಿ ಸಂಪತ್ತು ಹೊಂದಿದ್ದಾರೆ. ಶಿವನಾಡರ್ ಸ್ಥಾನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಶಿವನಾಡರ್ 2020-21 ರಲ್ಲಿ ಪ್ರತಿ ನಿತ್ಯ 260 ಕೋಟಿ ರೂಪಾಯಿ ಗಳಿಸಿದ್ದಾರೆ.
ಎಸ್‌ಪಿ ಹಿಂದುಜಾ ಮತ್ತು ಕುಟುಂಬವು ನಾಲ್ಕನೇ ಸ್ಥಾನಕ್ಕೆ ಏರಿದೆ. ಹಿಂದುಜಾ ಸಹೋದರರು ತಮ್ಮ ಅಶೋಕ್ ಲೇಲ್ಯಾಂಡ್ ಮತ್ತು ಇಂಡಸ್ಇಂಡ್ ಬ್ಯಾಂಕ್ ನಂತಹ ಪ್ರಮುಖ ಕಂಪನಿಗಳ ಕಾರ್ಯಕ್ಷಮತೆಯಿಂದ 53% ರಷ್ಟು ಮೌಲ್ಯಮಾಪನವನ್ನು ಕಂಡರು, ಅವರ ಷೇರಿನ ಬೆಲೆ ಕ್ರಮವಾಗಿ 74% ಮತ್ತು 61%ರಷ್ಟು ಹೆಚ್ಚಾಗಿದೆ. ಅವರ ಒಟ್ಟು ಆಸ್ತಿ ಮೌಲ್ಯ 2,20,00 ಕೋಟಿ ರೂಪಾಯಿಗಳಾಗಿದೆ. ಅವರ ಪ್ರತಿದಿನದ ಆದಾಯ 209 ಕೋಟಿ ರೂ.ಗಳಾಗಿವೆ.
ಅರ್ಸೇಲರ್ ಮಿತ್ತಲ್ ಕಂಪನಿಯ ಮಿತ್ತಲ್ ಗಳ ಸಂಪತ್ತು ಶೇ.187 ರಷ್ಟು ಏರಿಕೆಯಾಗಿದ್ದು, 1,74,400 ಕೋಟಿ ರೂಪಾಯಿಗೆ ಏರಿಕೆಯಾಗಿ ಐದನೇ ಸ್ಥಾನದಲ್ಲಿದ್ದಾರೆ. ಲಕ್ಷ್ಮಿ ಎನ್ ಮಿತ್ತಲ್ ಕುಟುಂಬವು ಪ್ರತಿ ನಿತ್ಯ 312 ಕೋಟಿ ರೂಪಾಯಿಯಂತೆ 2020-21 ರಲ್ಲಿ ಗಳಿಸಿದ್ದಾರೆ.
ಪುಣೆಯ ಕೊರೊನಾ ಲಸಿಕೆಯನ್ನು ಉತ್ಪಾದಿಸುವ ಸೈರಸ್ ಪೂನಾವಾಲಾ ಕುಟುಂಬವು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯನ್ನು ಹೊಂದಿದೆ. ಈ ಕುಟುಂಬವು ಪ್ರತಿ ನಿತ್ಯ 190 ಕೋಟಿ ರೂಪಾಯಿ ಗಳಿಸಿದೆ. ಈ ಕುಟುಂಬದ ಸಂಪತ್ತು ಶೇ.74 ರಷ್ಟು ಏರಿಕೆಯಾಗಿದ್ದು, 1,63,700 ಕೋಟಿ ರೂಪಾಯಿಗೆ ಏರಿಕೆಯಾಗಿ ಆರನೇ ಸ್ಥಾನಕ್ಕೆ ಏರಿದ್ದಾರೆ.
ಇನ್ನೂ ಸೂಪರ್ ಮಾರ್ಟ್ ಬ್ಯುಸಿನೆಸ್ ಹೊಂದಿರುವ ರಾಧಾಕೃಷ್ಣನ್ ಧಾಮನಿ ಕುಟುಂಬವು ಭಾರತದ ಏಳನೇ ಅತಿ ದೊಡ್ಡ ಶ್ರೀಮಂತ ಕುಟುಂಬವಾಗಿದೆ. ಇವರ ಸಂಪತ್ತಿನ ಮೌಲ್ಯ 1,54,300 ಕೋಟಿ ರೂಪಾಯಿ ಆಗಿದೆ. ರಾಧಾಕೃಷ್ಣನ್ ಧಾಮನಿ ಕುಟುಂಬ ಪ್ರತಿ ನಿತ್ಯ 184 ಕೋಟಿ ರೂಪಾಯಿ ಗಳಿಸಿದೆ.
ಗೌತಮ ಅದಾನಿ ಸಹೋದರ ವಿನೋದ್ ಮತ್ತು ಕುಟುಂಬವು ಶ್ರೀಮಂತಿಕೆಯಲ್ಲಿ 12 ಅಂಕ ಜಿಗಿತವಾಗಿದ್ದು, 8ನೇ ಸ್ಥಾನದಲ್ಲಿದ್ದಾರೆ. ವಿನೋದ್ ಅದಾನಿ ಕುಟುಂಬದ ಸಂಪತ್ತು 1,31,600 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಒಂದು ದಿನದ ಗಳಿಕೆ 245 ಕೋಟಿ ರೂ.ಗಳಾಗಿದೆ.
ಕುಮಾರ ಮಂಗಳಂ ಬಿರ್ಲಾ ಮತ್ತು ಆದಿತ್ಯ ಬಿರ್ಲಾ ಗ್ರೂಪ್ ಐಐಎಫ್ಎಲ್ ಹೂರನ್ ಶ್ರೀಮಂತರ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಪಡೆದಿದ್ದಾರೆ. ಇವರ ನಿವ್ವಳ ಸಂಪತ್ತು 1,22,200 ಕೋಟಿ ರೂಪಾಯಿ ಆಗಿದೆ. ಆದಿತ್ಯ ಬಿರ್ಲಾ ಗ್ರೂಪ್ ಸಂಪತ್ತು ಕಳೆದ ವರ್ಷ ಶೇ.84 ರಷ್ಟು ಏರಿಕೆಯಾಗಿದೆ. ಬಿರ್ಲಾ ಗ್ರೂಪ್ ಸಂಪತ್ತುನಲ್ಲಿ ವರ್ಷದಿಂದ ವರ್ಷಕ್ಕೆ ಶೇ.230 ರಷ್ಟು ಏರಿಕೆಯಾಗಿದೆ. ಬಿರ್ಲಾ ಗ್ರೂಪ್ ಪ್ರತಿ ನಿತ್ಯ 230 ಕೋಟಿ ರೂಪಾಯಿ ಗಳಿಸಿದೆ.
10ನೇ ಸ್ಥಾನದಲ್ಲಿ ಜಯ ಚೌಧರಿ ಇದ್ದಾರೆ. ಅವರ ಆಸ್ತಿಯು ಶೇ.85ರಷ್ಟು ಹೆಚ್ಚಳವಾಗಿದೆ. ಅವರ ಆಸ್ತಿ ಮೌಲ್ಯ 1,21,000 ಕೋಟಿ ರೂ.ಗಳಾಗಿದೆ.
ವರದಿಯ ಪ್ರಕಾರ, ಭಾರತವು 237 ಬಿಲಿಯನೇರ್‌ಗಳನ್ನು ಹೊಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 58 ಹೆಚ್ಚಾಗಿದೆ. ಅವರ ಒಂದು ದಿನದ 153 ಕೋಟಿ ರೂ.ಗಳಾಗಿದೆ.

ಪ್ರಮುಖ ಸುದ್ದಿ :-   ಅತ್ಯಧಿಕ ಅಪಾಯದ ಮಟ್ಟ 6ರ ವಿರುದ್ಧ ರಕ್ಷಣೆಗಾಗಿ ದೇಶದ ಅತ್ಯಂತ ಹಗುರ ಬುಲೆಟ್ ಪ್ರೂಫ್ ಜಾಕೆಟ್‌ ಅಭಿವೃದ್ಧಿಪಡಿಸಿದ ಡಿ ಆರ್‌ ಡಿ ಒ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement