ಮಕ್ಕಳಲ್ಲಿ ಏಕತಾ ಮನೋಭಾವ ಬೆಳೆಯಲಿ: ಡಾ.ಅಜಿತ ಪ್ರಸಾದ

ಧಾರವಾಡ: ಮಕ್ಕಳ ಮನಸ್ಸು ದ್ವೇಷ, ಅಸೂಯೆ, ಕೀಳರಿಮೆ ಇಲ್ಲದೆ ಮೃದುವಾದದ್ದು. ಅದಕ್ಕೆ ನಾವು ಯಾವ ರೀತಿಯ ಪೋಷಣೆ ನೀಡುತ್ತೇವೆಯೋ ಆ ರೀತಿ ಮಕ್ಕಳು ಬೆಳೆಯುತ್ತಾರೆ. ಸಮಾಜದಲ್ಲಿ ಮೇಲು ಕೀಳು ಎನ್ನದೆ ಸಮವಾಗಿ ಬದುಕಿದಾಗ ಮಾತ್ರ ಬದುಕಿಗೊಂದು ಅರ್ಥ ಬರುತ್ತದೆ ಎಂದು ಜನತಾ ಶಿಕ್ಷಣ ಸಮಿತಿಯ ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದ ಹೇಳಿದರು.
ಅವರು ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸಿ.ಬಿ.ಎಸ್.ಇ ಶಾಲೆಯಲ್ಲಿ ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನದ ಪೂರ್ವಭಾವಿಯಾಗಿ ಕೊಳಚೆ ಪ್ರದೇಶದ ಮಕ್ಕಳಿಗೆ ಪುಸ್ತಕ, ತಿನಿಸು, ಹಣ್ಣು, ಆಟಿಕೆ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ಈ ರೀತಿ ಮಕ್ಕಳು ನಮ್ಮ ಶಾಲೆಗೆ ಆಗಮಿಸಿ ನಮ್ಮ ವಿದ್ಯಾರ್ಥಿ ವಿದ್ಯಾರ್ಥಿಗಳೊಡನೆ ಆಟವಾಡಿ ಸಮಯ ಕಳೆಯುವುದರಿಂದ ಅವರು ಪರಸ್ಪರ ತಮ್ಮ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಸಹಾಯವಾಗುತ್ತದೆ. ಇಲ್ಲಿನ ಮತ್ತೊಂದು ವಿಶೇಷವೆಂದರೆ, ನಮ್ಮ ಶಾಲೆಯ ಮಕ್ಕಳೇ ತಮ್ಮ ತಮ್ಮ ಮನೆಗಳಿಂದ ಪುಸ್ತಕ ಹಣ್ಣು ತಿನಿಸುಗಳನ್ನು ತಂದು ಬಡ ಮಕ್ಕಳಿಗೆ ಹಂಚಿದ್ದಾರೆ. ಈ ಮನೋಭಾವನೆ ದೊಡ್ಡವರಲ್ಲೂ ಬರಬೇಕು ಎಂದು ಅವರು ಹೇಳಿದರು.
ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯೂ ಒಬ್ಬ ಬಡ ವಿದ್ಯಾರ್ಥಿಗೆ ಸಹಾಯ ಮಾಡಿ ಅದರ ಭಾವಚಿತ್ರವನ್ನು ಶಾಲೆಗೆ ಕಳುಹಿಸಲು ತಿಳಿಸಲಾಗಿತ್ತು. ಸಾವಿರಾರು ವಿದ್ಯಾರ್ಥಿಗಳು ಈ ಮೂಲಕ ಬಡ ವಿದ್ಯಾರ್ಥಿಗಳನ್ನು ತಲುಪಿದ್ದಾರೆ ಎಂದು ಪ್ರಾಚಾರ್ಯೆ ಸಾಧನಾ. ಎಸ್. ಹೇಳಿದರು.
ಈ ಸಂದರ್ಭದಲ್ಲಿ ನಾಗರಾಜ ಹೂಗಾರ, ಮಹಾವೀರ ಉಪಾಧ್ಯೆ ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ನವನಗರದ ಸ್ನೇಹಾ ತಂಗುದಾಣದಲ್ಲೂ ತಿನಿಸು ಮತ್ತು ಹಣ್ಣುಗಳನ್ನು ವಿತರಿಸಲಾಯಿತು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement