ಬಿ.ಇಡಿ. ೩ನೇ ಸೆಮಿಸ್ಟರ್: ಧಾರವಾಡ ಜೆಎಎಸ್‌ಎಸ್ ವಿದ್ಯಾರ್ಥಿಗಳ ಉತ್ತಮ ಸಾಧನೆ

ಧಾರವಾಡ : ನಗರದ ವಿದ್ಯಾಗಿರಿಯ ಜೆ.ಎಸ್.ಎಸ್.ನ ಶ್ರೀ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯದ ೨೦೨೧-೨೨ ನೇ ಸಾಲಿನ ಬಿ.ಇಡಿ. ೩ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ರಾಣಿ ಪಾಟೀಲ (೯೧.೮೩%), ಇಂಚರಾ ಚುಂಚೂರ ಮತ್ತು ಲತಾ ತೋರಣಗಟ್ಟಿ (೯೦.೮೩%), ಶಾಹೀನ್‌ತಾಜ್ ಗುಡದೂರ ಮತ್ತು ವಿವೇಕ ಖಾನಾಪುರ (೯೦.೫೦%) ಹಾಗೂ ನೇತ್ರಾವತಿ ಚಾಪಿ (೯೦%) ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. … Continued

ಧಾರವಾಡ: ಸಿಬಿಎಸ್‌ಇ ೧೦ನೇ ತರಗತಿ ಪರೀಕ್ಷೆಯಲ್ಲಿ ಜೆಎಸ್‌ಎಸ್‌ ಮಂಜುನಾಥೇಶ್ವರ ಸಿಬಿಎಸ್ಇ ಶಾಲೆ ನೂರಕ್ಕೆ ೧೦೦% ಫಲಿತಾಂಶ

ಧಾರವಾಡ: ೨೦೨೧-೨೨ ರ ಸಿಬಿಎಸ್‌ಇ ೧೦ನೇ ತರಗತಿಯ ಪರೀಕ್ಷೆಯಲ್ಲಿ ಇಲ್ಲಿನ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸಿ.ಬಿ.ಎಸ್.ಇ ಶಾಲೆ ನೂರಕ್ಕೆ ೧೦೦ % ಫಲಿತಾಂಶ ಪಡೆದಿದೆ. ಶಾಲೆಯು ಸತತ ೧೬ ನೇ ವರ್ಷ ನೂರಕ್ಕೆ ೧೦೦% ಫಲಿತಾಂಶ ಪಡೆದಿದೆ. ಸೌಮ್ಯಾ ಸುಮನ್ ಅತೀ ಹೆಚ್ಚು ೪೯೭/೫೦೦ ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಶಾಲೆಯಲ್ಲಿ ಪರೀಕ್ಷೆಗೆ … Continued

ರಾಜಸ್ತಾನದಲ್ಲಿ ನಡೆದ ರೋಪ್ ಸ್ಕಿಪಿಂಗ್ ಸ್ಫರ್ಧೆಯಲ್ಲಿ ಧಾರವಾಡದ ಜೆಎಸ್‌ಎಸ್ ಸಂಸ್ಥೆ ವಿದ್ಯಾರ್ಥಿನಿ ಚಾಂಪಿಯನ್‌

ಧಾರವಾಡ: ರಾಜಸ್ತಾನದ ಜೈಪುರದ ಪೂರ್ಣಿಮಾ ವಿಶ್ವವಿದ್ಯಾಲಯದಲ್ಲಿ ನಡೆದ ಆಲ್ ಇಂಡಿಯಾ ಇಂಟರ್ ಯುನಿವರ್ಸಿಟಿ ರೋಪ್ ಸ್ಕಿಪಿಂಗ್ ಸ್ಫರ್ಧೆಯಲ್ಲಿ ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಬಿ.ಕಾಂ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾದ ಭೀಮಾಂಬಿಕಾ ನೊಸಬಿ ಫ್ರೀಸ್ಟೆಲ್‌ನಲ್ಲಿ ಚಿನ್ನದ ಪದಕ, ಸ್ಪೀಡ್ ರಿಲೇಯಲ್ಲಿ ಚಿನ್ನದ ಪದಕ ಹಾಗೂ ಡಿ.ಡಚ್‌ನಲ್ಲಿ ಕಂಚಿನ ಪದಕ … Continued

ಧಾರವಾಡ:ಜೆಎಸ್‌ಎಸ್ ಹುಕ್ಕೇರಿಕರ್ ಕಾಲೇಜಿನ ಐವರು ವಿದ್ಯಾರ್ಥಿಗಳು ಜಿಲ್ಲೆಗೆ ಟಾಪರ್

ಧಾರವಾಡ: ಧಾರವಾಡದ ಜೆಎಸ್ಎಸ್‌ ಸಂಸ್ಥೆಯ ಆರ್.ಎಸ್.ಹುಕ್ಕೇರಿಕರ ಪದವಿಪೂರ್ವ ಮಹಾವಿದ್ಯಾಲಯವು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿಒಟ್ಟು ಹಾಜರಾದ ೭೭೫ ವಿದ್ಯಾರ್ಥಿಗಳಲ್ಲಿ ೬೨೬ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಒಟ್ಟು ೮೦.೭೭% ಫಲಿತಾಂಶ ಪಡೆದಿದೆ.ಜಿಲ್ಲೆಯ ಟಾಪ್ ೧೦ ರಲ್ಲಿ ಐದು ವಿದ್ಯಾರ್ಥಿಗಳು ಈ ಕಾಲೇಜಿನವರಾಗಿದ್ದಾರೆ. ವಾಣಿಜ್ಯ ವಿಭಾಗ ೧. ಅನನ್ಯ ಭಟ್(೯೮.೩೩) ಜಿಲ್ಲೆಗೆ ೨ನೇ ಸ್ಥಾನ, ೨ ಸಾಕ್ಷಿ ಕುಲಕರ್ಣಿ ಜಿಲ್ಲೆಗೆ … Continued

ಧಾರವಾಡ: ನಾಳೆ ವಿಧಾನ ಪರಿಷತ್‌ ಸಭಾಪತಿ ಹೊರಟ್ಟಿಗೆ ಅಭಿನಂದನಾ ಸಮಾರಂಭ

ಧಾರವಾಡ: ಧಾರವಾಡದ ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿಯ ಪರವಾಗಿ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಅಭಿನಂದನಾ ಸಮಾರಂಭ ಏಪ್ರಿಲ್‌ ೯ ರಂದು ಬೆಳಿಗ್ಗೆ ೧೦:೩೦ಕ್ಕೆ ಧಾರವಾಡದ ಜೆ.ಎಸ್.ಎಸ್ ಸನ್ನಿಧಿ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಸಾನಿಧ್ಯವನ್ನು ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸಲಿದ್ದಾರೆ. ಖ್ಯಾತ ಸಂಸ್ಕೃತ ವಿದ್ವಾಂಸ ವೆಂಕಟ ನರಸಿಂಹ ಜೋಶಿಯ ಶುಭಾಶಂಸನೆ … Continued

ಕರ್ನಾಟಕ ಇತಿಹಾಸ ಪರಿಷತ್ತಿನ ಸಮ್ಮೇಳನದ ಸಮಾರೋಪ, ಚರಿತ್ರೆಯ ಅಧ್ಯಯನಕ್ಕೆ ಐತಿಹಾಸಿಕ ಸತ್ಯ ಹುಡುಕುವ ಪ್ರಾಮಾಣಿಕ ಪ್ರಯತ್ನ ಬೇಕು: ಡಾ. ರಮೇಶ ನಾಯಕ

posted in: ರಾಜ್ಯ | 0

ಧಾರವಾಡ: ಇಲ್ಲಿನ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಆತಿಥ್ಯದಲ್ಲಿ ನಡೆದ ೩೧ನೇ ಕರ್ನಾಟಕ ಇತಿಹಾಸ ಪರಿಷತ್ತಿನ ಮಹಾಸಮ್ಮೇಳನದ ಸಮಾರೋಪ ಸಮಾರಂಭ ನಡೆಯಿತು. ಸಮಾರೋಪ ಭಾಷಣ ಮಾಡಿದ ಹಂಪಿ ವಿಶ್ವ ವಿದ್ಯಾಲಯದ ವಿತ್ತಾಧಿಕಾರಿ ಡಾ. ರಮೇಶ ನಾಯಕ ಮಾತನಾಡಿ, ಇತಿಹಾಸವು ಜಗತ್ತಿನಲ್ಲಿ ಹೆಚ್ಚು ಚರ್ಚೆಗೆ ಒಳಗಾದ ವಿಷಯವಾಗಿದ್ದು, ಅದಕ್ಕೆ ಕಾರಣ … Continued

ಧಾರವಾಡ ಜೆಎಸ್ಎಸ್ ನಲ್ಲಿ ಟಾಟಾ ಮೋಟರ್ಸ್‌ ಕ್ಯಾಂಪಸ್ ಸಂದರ್ಶನ

posted in: ರಾಜ್ಯ | 0

ಧಾರವಾಡ: ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಐ.ಟಿ.ಐ ನಲ್ಲಿ ಧಾರವಾಡದ ಬೇಲೂರಿನ ಟಾಟಾ ಮೋಟರ‍್ಸನವರು, ಅಪ್ರೆಂಟೈಸ್‌ಶಿಪ್ ಹುದ್ದೆಗಳಿಗಾಗಿ ಮಾರ್ಚ್‌ 29ರಂದು ಕ್ಯಾಂಪಸ್ ಸಂದರ್ಶನ ಏರ್ಪಡಿಸಿದ್ದಾರೆ. ಐ.ಟಿ.ಐ ಡಿಸೈಲ್ ಮೆಕ್ಯಾನಿಕ್, ಮೆಕ್ಯಾನಿಕ್ ಮೊಟಾರ್ ವೆಹಿಕಲ್, ಇಲೆಕ್ಟ್ರೀಶಿಯನ್, ವೆಲ್ಡರ್, ಫಿಟ್ಟರ್, ಇಲೆಕ್ಟ್ರಾನಿಕ್ ಮೆಕ್ಯಾನಿಕ್ ಉತ್ತೀರ್ಣರಾದ, ಎಸ್.ಎಸ್.ಎಲ್.ಸಿಯಲ್ಲಿ 50% ಪ್ರತಿಶತ ಹಾಗೂ ಐ.ಟಿ.ಐ ನಲ್ಲಿ 60% ಪ್ರತಿಶತ ಅಂಕಗಳನ್ನು … Continued

ಚಾಲಕರು ಮಾಡುತ್ತಿರುವ ಜನಸಾಮಾನ್ಯರ ಸೇವೆಗೆ ಬೆಲೆಕಟ್ಟಲಾಗದು: ಡಾ.ಅಜಿತ ಪ್ರಸಾದ

ಧಾರವಾಡ: ಜನಸಾಮಾನ್ಯರ ಮತ್ತು ಪ್ರತಿಯೊಬ್ಬರ ಜೀವನದ ರಥ ಎಂದೇ ಕರೆಯಲ್ಪಡುವ ಚಾಲಕರ ಮಹತ್ವ ಅರಿಯಬೇಕು. ಹಾಗೆಯೇ ಈ ಚಾಲಕರು ಮಾಡುತ್ತಿರುವ ಜನಸಾಮಾನ್ಯರ ಸೇವೆಗೆ ಬೆಲೆಕಟ್ಟಲಾಗದು .ಅದೇರೀತಿ ಪ್ರಯೋಗಾಲಯದಲ್ಲಿ ಕಾರ್ಯಮಾಡುವವರ ಸೇವೆಯು ಅಷ್ಟೇ ಮಹತ್ವದ್ದು ಎಂದು ಜೆ.ಎಸ್.ಎಸ್ ನ ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದ ಹೇಳಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ೧೦೦ ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಭಾರತೀಯ … Continued

ಧಾರವಾಡ: ಐಟಿಐ ಉದ್ಯೋಗ ಮೇಳ-೨೦೨೨

posted in: ರಾಜ್ಯ | 0

ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜನವರಿ 23ರಂದು ಐ.ಟಿ.ಐ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ. ಈ ಮೇಳದಲ್ಲಿ 15ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು, ಆಸಕ್ತ ವಿದ್ಯಾರ್ಥಿಗಳು 0836-2462202 ಅಥವಾ 7760011848 ಕ್ಕೆ ಕರೆ ಮಾಡಿ ದಿನಾಂಕ 20-01-2022ರ ಒಳಗಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಅಲ್ಲದೆ, ಈ … Continued

ಧಾರವಾಡ: ಜೆಎಸ್ಎಸ್‌ನಲ್ಲಿ ಇಗ್ನೋ ಕೋರ್ಸುಗಳಿಗೆ ಪ್ರವೇಶ ಪ್ರಾರಂಭ

posted in: ರಾಜ್ಯ | 0

ಧಾರವಾಡ: ಇಂಧಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ (ಇಗ್ನೋ) ದೂರ ಶಿಕ್ಷಣದ ಕೋರ್ಸಗಳಿಗೆ ಜನೇವರಿ ೨೦೨೨ ನೇ ಸಾಲಿಗೆ ಪ್ರವೇಶ ಪ್ರಾರಂಭವಾಗಿದೆ. ಪ್ರವೇಶಕ್ಕಾಗಿ ಧಾರವಾಡ ಜೆ.ಎಸ್.ಎಸ್. ಕಾಲೇಜಿನಲ್ಲಿರುವ ಇಗ್ನೋದ ಧಾರವಾಡ ಅಧ್ಯಯನ ಕೇಂದ್ರದಿಂದ ಮಾಹಿತಿ ಪಡೆಯಬಹುದಾಗಿದೆ. ಇಗ್ನೋ ಧಾರವಾಡದ ಜೆ.ಎಸ್.ಎಸ್ ಕಾಲೇಜಿನಲ್ಲಿ, ಎಂಬಿಎ, ಎಂಸಿಎ, ಎಂ.ಕಾಂ, ಎಮ್.ಎ.(ಇಂಗ್ಲೀಷ್) ಎಮ್.ಎ.(ಇತಿಹಾಸ), ಎಮ್.ಎ.(ಅರ್ಥಶಾಸ್ತ್ರ) ಮುಂತಾದ ಸ್ನಾತಕೋತ್ತರ ಕೋರ್ಸುಗಳು ಬಿಎ, ಬಿ.ಕಾಂ, … Continued