ರಾಜಸ್ತಾನದಲ್ಲಿ ನಡೆದ ರೋಪ್ ಸ್ಕಿಪಿಂಗ್ ಸ್ಫರ್ಧೆಯಲ್ಲಿ ಧಾರವಾಡದ ಜೆಎಸ್‌ಎಸ್ ಸಂಸ್ಥೆ ವಿದ್ಯಾರ್ಥಿನಿ ಚಾಂಪಿಯನ್‌

ಧಾರವಾಡ: ರಾಜಸ್ತಾನದ ಜೈಪುರದ ಪೂರ್ಣಿಮಾ ವಿಶ್ವವಿದ್ಯಾಲಯದಲ್ಲಿ ನಡೆದ ಆಲ್ ಇಂಡಿಯಾ ಇಂಟರ್ ಯುನಿವರ್ಸಿಟಿ ರೋಪ್ ಸ್ಕಿಪಿಂಗ್ ಸ್ಫರ್ಧೆಯಲ್ಲಿ ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಬಿ.ಕಾಂ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾದ ಭೀಮಾಂಬಿಕಾ ನೊಸಬಿ ಫ್ರೀಸ್ಟೆಲ್‌ನಲ್ಲಿ ಚಿನ್ನದ ಪದಕ, ಸ್ಪೀಡ್ ರಿಲೇಯಲ್ಲಿ ಚಿನ್ನದ ಪದಕ ಹಾಗೂ ಡಿ.ಡಚ್‌ನಲ್ಲಿ ಕಂಚಿನ ಪದಕ ಸೇರಿ ಪಡೆದು ಚಾಂಪಿಯನ್ನಾಗಿ ಹೊರಹೊಮ್ಮಿದ್ದಾರೆ.
ವಿದ್ಯಾರ್ಥಿನಿಯ ಈ ಸಾಧನೆಗೆ ಜೆ.ಎಸ್.ಎಸ್ ಸಂಸ್ಥೆಯ ಅಧ್ಯಕ್ಷರಾದ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು, ಕಾರ್ಯಾಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಕಾರ್ಯದರ್ಶಿಗಳಾದ ಡಾ. ನ. ವಜ್ರಕುಮಾರರವರು ಹಾಗೂ ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದರವರು ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ಮಹಾವೀರ ಉಪಾದ್ಯೆ, ಜಿನಪ್ಪ ಕುಂದಗೋಳ, ಶ್ರವಣ ಯೋಗಿ ಇದ್ದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement