ಎಸ್.ಎಸ್.ಎಲ್.ಸಿ. ಪರೀಕ್ಷೆ : ಧಾರವಾಡ ಜೆ ಎಸ್ ಎಸ್ ಸಂಸ್ಥೆ ಎಸ್‌ಎಂಇಎಂ ಶಾಲೆ ಉತ್ತಮ ಸಾಧನೆ

ಧಾರವಾಡ: ೨೦೨೩ -೨೪ ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಧಾರವಾಡದ ಸವದತ್ತಿ ರಸ್ತೆಯ ಮ್ಯತ್ಯುಂಜಯ ನಗರದ ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಫಲಿತಾಂಶ ೯೮% ರಷ್ಟು ಆಗಿದ್ದು, ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಸ್ನೇಹಾ ಹಿರೇಮಠ ೯೫.೫೨% (೫೯೭) ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಹರ್ಷಿತಾ ಹೊಸೂರು ೯೫.೨೦% (೫೯೫) ಅಂಕಗಳನ್ನು ಪಡೆದು ಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಸೋಹಿಲ್ ನದಾಫ್ ೯೨.೬೪% (೫೭೯) ತೃತೀಯ,
ಕಾರ್ತಿಕ ನರಗುಂದ ೯೧.೮೪% (೫೭೪) ನಾಲ್ಕನೇ ಸ್ಥಾನ, ಸಕ್ಷಮ ಕಲಾಲ ೮೯.೬೦% (೫೧೬) ಐದನೇ ಸ್ಥಾನ ಹಾಗೂ ಕೃಷ್ಣಾ ಎಂಡಿಗೇರಿ ೮೯.೪೪% (೫೫೯) ಆರನೇ ಸ್ಥಾನ ಪಡೆದಿದ್ದಾರೆ. ಅಬ್ದುರೆಯಾನ ಹೆಬ್ಬಾಳ ೮೮.೮೦% (೫೫೫), ಸುಮಾ ಹೆಬ್ಬಳ್ಳಿ ೮೮.೪೮% (೫೫೩), ಕೀರ್ತಿ ಹಿರೇಮಠ ೮೭.೮೪% (೫೪೯) ಹಾಗೂ ಪ್ರೀತಿ ಮರ‍್ತಕನಾಲ್ ೮೭.೩೬% (೫೪೬) ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳ ಉತ್ತಮ ಶೈಕ್ಷಣಿಕ ಸಾಧನೆಗೆ ಜನತಾ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು, ಕಾರ್ಯಾಧ್ಯಕ್ಷರಾದ ಪೂಜ್ಯ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ, ಶಾಲೆಯ ಪ್ರಾಚಾರ್ಯರಾದ ತ್ರಿವೇಣಿ ಆರ್ ಹಾಗೂ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement