ಉಪಚುನಾವಣೆ: ಜೆಡಿಎಸ್‌ನಿಂದ ಸಿಂಧಗಿಯಿಂದ ನಾಜಿಯಾ, ಹಾನಗಲ್​ನಿಂದ ನಿಯಾಜ್ ಕಣಕ್ಕೆ

posted in: ರಾಜ್ಯ | 0

ಬೆಂಗಳೂರು: ಸಿಂಧಗಿ ವಿಧಾನಸಭಾ ಉಪ ಚುನಾವಣೆ ಜೆಡಿಎಸ್ ಅಭ್ಯರ್ಥಿಯಾಗಿ ನಾಜಿಯಾ ಶಕೀಲಾ ಅಂಗಡಿ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.
ಈಗಾಗಲೇ ಹಾನಗಲ್ ಕ್ಷೇತ್ರಕ್ಕೆ ನಿಯಾಜ್ ಶೇಕ್ ಅವರನ್ನು ಆಯ್ಕ ಮಾಡಿರುವ ಜೆಡಿಎಸ್, ಇದೀಗ ಸಿಂಧಗಿ ಕ್ಷೇತ್ರಕ್ಕೂ ಅಂತಿಮಗೊಳಿಸಿ ಎರಡೂ ಕ್ಷೇತ್ರಗಳಿಗೂ ಅಲ್ಪಸಂಖ್ಯಾತರಿಗೆ ಮಣೆ ಹಾಕಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡುವುದಕ್ಕಿಂತ ಮೊದಲೇ ಜೆಡಿಎಸ್ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.
2023ರ ವಿಧಾನಸಭಾ ಚುನಾವಣೆಗೆ ಶೇ.35ರಷ್ಟು ಮಹಿಳೆಯರಿಗೆ ಟಿಕೆಟ್ ನೀಡುವುದಾಗಿ ಇತ್ತೀಚೆಗಷ್ಟೇ ಘೋಷಿಸಿದ್ದ ಜೆಡಿಎಸ್ ಉಪ ಚುನಾವಣೆಯಲ್ಲಿಯೇ ಎರಡು ಟಿಕೆಟ್‌ನಲ್ಲಿ ಒಂದನ್ನು ಮಹಿಳೆಗೆ ನೀಡಿದೆ. ಇಬ್ಬರು ಅಭ್ಯರ್ಥಿಗಳು ಸಹ ಸ್ನಾತಕೋತ್ತರ ಪದವೀಧರರಾಗಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ