ಎಂಥಾ ಲೋಕವಯ್ಯಾ…ಕುಕ್ಕರ್ ಜೊತೆ ಇಂಡೋನೇಷ್ಯಾ ಯುವಕನ ಮದುವೆ..!

ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಆದರೆ, ಇಂಡೋನೇಷ್ಯಾದ ಯುವಕನೊಬ್ಬತಾನು ದಿನನಿತ್ಯ ಅನ್ನ ಬೇಯಸಿಕೊಳ್ಳುವ ಮಾಡುವ ಕುಕ್ಕರ್ ಜೊತೆಯೇ ಮದುವೆಯಾಗಿದ್ದಾನೆ..! ಇದು ವಿಚಿತ್ರವಾದರೂ ಸತ್ಯ..
ಇಂಡೋನೇಷ್ಯಾದ ಯುವಕ ಉದ್ಯೋಗದ ನಿಮಿತ್ತ ಮನೆಯಿಂದ ದೂರವಾಗಿ ಬೇರೆ ಊರಿನಲ್ಲಿ ಇದ್ದ. ಆಗ ತಾನೇ ಅಡುಗೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಯಿತು ಹೀಗಾಗಿ, ಆತ ಅಡುಗೆ ಸಾಮಾನುಗಳನ್ನು ಖರೀದಿಸಿದ್ದ. ಅದರಲ್ಲಿ ಕುಕ್ಕರ್ ಎಂದರೆ ಆತನಿಗೆ ಬಹಳ ಪ್ರೀತಿ. ಬಿಳಿಯ ಹಾಗೂ ಆಧುನಿಕವಾಗಿದ್ದ ಆ ಕುಕ್ಕರ್​ನಲ್ಲಿ ಬಹುಬೇಗ ಅನ್ನವಾಗುತ್ತಿತ್ತು. ಆ ಕುಕ್ಕರ್ ಮೇಲೆ ಪ್ರೀತಿ ಹೆಚ್ಚಾಗಿ ಅದನ್ನೇ ಮದುವೆಯಾಗಲು ಈತ ನಿರ್ಧರಿಸಿದ. ಇದಕ್ಕೆ ಆತ ರಿಜಿಸ್ಟರ್ ಆಫೀಸಿಗೆ ಹೋಗಿಯೇ ಮದುವೆಯಾಗಿರುವುದಾಗಿ ಆತನೇ ಹೇಳಿಕೊಂಡಿದ್ದಾನೆ.
ಈತನ ಹೆಸರು ಕಹಿರೋಲ್ ಆನಂ. ತನ್ನ ಫೇಸ್​ಬುಕ್​ ಪೇಜಿನಲ್ಲಿ ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದು, ಕುಕ್ಕರ್ ಅನ್ನು ಕೈಯಲ್ಲಿ ಹಿಡಿದು, ಅದಕ್ಕೆ ಮುತ್ತನ್ನಿಟ್ಟು ಪೋಸ್ ಕೊಟ್ಟಿದ್ದಾನೆ.
ಆ ಕುಕ್ಕರ್​ಗೆ ಹುಡುಗಿಯಂತೆ ಅಲಂಕಾರ ಮಾಡಿ ರಿಜಿಸ್ಟರ್ ಆಫೀಸಿನಲ್ಲಿ ನೋಂದಾಯಿಸಿಯೇ ತಾನು ಕುಕ್ಕರ್‌ ಅನ್ನು ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದಾನೆ. ಮದುವೆಯ ವೇಳೆ ಬಿಳಿಯ ದುಪಟ್ಟಾ ಹೊದಿಸಿ, ಕುಕ್ಕರ್​ಗೆ ವಧುವಿನ ರೀತಿ ಸಿಂಗಾರ ಮಾಡಿದ್ದ. ಆ ಕುಕ್ಕರ್​ಗೆ ಮುತ್ತಿಟ್ಟು ತನ್ನ ಹಾಗೂ ಆ ಕುಕ್ಕರ್​ಮದುವೆಯನ್ನು ರಿಜಿಸ್ಟರ್ ಮಾಡಿಸಿದ್ದಾನೆ. ಆತನ ವಿಚಿತ್ರ ವರ್ತನೆಗೆ ಎಲ್ಲರೂ ಅಚ್ಚರಿ ವ್ಯಕ್ತ ಪಡಿಸಿದ್ದಾರೆ.
ನನ್ನ ಮಡದಿ ಬಹಳ ಚೆನ್ನಾಗಿ ಅಡುಗೆ ಮಾಡುತ್ತಾಳೆ, ಹೆಚ್ಚು ಮಾತನಾಡುವುದಿಲ್ಲ. ನಾನು ಹೇಳಿದ್ದೆಲ್ಲ ಕೇಳಿಸಿಕೊಂಡು ಸುಮ್ಮನಿರುತ್ತಾಳೆ. ನನ್ನ ಕನಸಿನ ಹುಡುಗಿಯ ರೀತಿಯಲ್ಲೇ ಇದ್ದಾಳೆ. ಅವಳಿಲ್ಲದಿದ್ದರೆ ನನಗೆ ಊಟವಿಲ್ಲ ಎಂದೆಲ್ಲ ಆತ ಬರೆದುಕೊಂಡಿದ್ದಾನೆ.
ಆದರೆ ಈತನ ಕತೆ ಇಷ್ಟಕ್ಕೇ ಮುಗಿದಿಲ್ಲ. ಆತ ತಾನು ಮದುವೆಯ ಫೋಟೋ ಹಂಚಿಕೊಂಡ ಎರಡೇ ದಿನಕ್ಕೆ ತನ್ನ ‘ಹೆಂಡತಿ’ಗೆ ಡೈವೋರ್ಸ್ ಸಹ ನೀಡಿರುವುದಾಗಿ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾನೆ…! ವಿಚ್ಛೇದನ ನೀಡಲು ಕಾರಣವನ್ನೂ ಹೇಳಿದ್ದಾನೆ. ನನ್ನ ಹೆಂಡತಿ ನಾನು ಹೇಳಿದ್ದೆಲ್ಲ ಕೇಳುತ್ತಾಳೆ, ನೋಡಲೂ ಚೆನ್ನಾಗಿದ್ದಾಳೆ ಆದರೆ, ಆಕೆಗೆ ಅನ್ನ ಬಿಟ್ಟು ಬೇರೆ ಯಾವ ಅಡುಗೆಯನ್ನೂ ಮಾಡಲು ಬರುವುದಿಲ್ಲ. ಆಕೆ ಅನ್ನ ಚೆನ್ನಾಗಿ ಮಾಡುವುದನ್ನು ನೋಡಿ ಮರುಳಾಗಿ ನಾನು ಮದುವೆಯಾಗಿ ಮೋಸ ಹೋದೆ’ ಎಂದೆಲ್ಲ ಬರೆದುಕೊಂಡಿದ್ದಾನೆ !. ಅಂತೂ ಏನಕೇನ ಪ್ರಕಾರೇಣ ಎಂಬಂತಿದೆ ಈತನ ವರ್ತನೆ.

ಪ್ರಮುಖ ಸುದ್ದಿ :-   ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿ ನೂತನ ದಾಖಲೆ ನಿರ್ಮಿಸಿದ ಭಾರತದ ಮೂಲದ ಈ ತಳಿಯ ಹಸು..! ಬೆಲೆ ಕೇಳಿದ್ರೆ ದಂಗಾಗ್ತೀರಾ...!!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement