ಏರ್ ಇಂಡಿಯಾ ಬಿಡ್ ಟಾಟಾ ಸಂಸ್ಥೆ ಗೆದ್ದಿಲ್ಲ, ಕೇಂದ್ರ ಸರ್ಕಾರದಿಂದ ಸ್ಪಷ್ಟನೆ

ನವದೆಹಲಿ: ಟಾಟಾ ಸನ್ಸ್ ರಾಷ್ಟ್ರೀಯ ವಿಮಾನಯಾನ ಏರ್ ಇಂಡಿಯಾಕ್ಕೆ ಬಿಡ್ ಗೆದ್ದಿದೆ ಎನ್ನುವ ಸುದ್ದಿಗಳು ಮಾಧ್ಯಮಗಳಲ್ಲಿ ವರದಿಯಾದ ಬೆನ್ನಿಗೇ ಕೇಂದ್ರ ಸರ್ಕಾರವು ಈ ವರದಿಗಳನ್ನು ನಿರಾಕರಣೆ ಮಾಡಿದೆ.
ಎಐ ಡಿಇನ್‌ವೆಸ್ಟ್‌ಮೆಂಟ್ ಪ್ರಕರಣದಲ್ಲಿ ಭಾರತ ಸರ್ಕಾರವು ಹಣಕಾಸು ಬಿಡ್‌ಗಳ ಅನುಮೋದನೆಯನ್ನು ಸೂಚಿಸುವ ಮಾಧ್ಯಮ ವರದಿಗಳು ತಪ್ಪಾಗಿವೆ. ಸರ್ಕಾರದ ನಿರ್ಧಾರವನ್ನು ಯಾವಾಗ ತೆಗೆದುಕೊಳ್ಳಲಾಗುತ್ತದೆ ಎಂದು ಮಾಧ್ಯಮಗಳಿಗೆ ತಿಳಿಸಲಾಗುವುದು ಎಂದು ಸರ್ಕಾರ ಹೇಳಿದೆ.
ಫ್ಲ್ಯಾಗ್ ಕ್ಯಾರಿಯರ್‌ಗಾಗಿ ಹಣಕಾಸಿನ ಬಿಡ್‌ಗಳನ್ನು ಪರಿಶೀಲಿಸುವುದರಿಂದ ಮುಂದಿನ ದಿನಗಳಲ್ಲಿ ಏರ್ ಇಂಡಿಯಾದ ಹೊಸ ಮಾಲೀಕರನ್ನು ನಿರ್ಧರಿಸಲಾಗುವುದು ಎಂದು ಶುಕ್ರವಾರ ತಿಳಿಸಿವೆ.
ಆ ರೀತಿಯಲ್ಲಿ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂದು ಕೇಂದ್ರ ಸರ್ಕಾರದ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ ಕಾರ್ಯದರ್ಶಿಯವರು ಟ್ವೀಟ್ ಮಾಡಿದ್ದಾರೆ,
ಏರ್‌ ಇಂಡಿಯಾ ಡಿಇನ್‌ವೆಸ್ಟ್‌ಮೆಂಟ್ ಪ್ರಕರಣದಲ್ಲಿ ಭಾರತ ಸರ್ಕಾರವು ಹಣಕಾಸು ಬಿಡ್‌ಗಳ ಅನುಮೋದನೆಯನ್ನು ಸೂಚಿಸುವ ಮಾಧ್ಯಮ ವರದಿಗಳು ತಪ್ಪಾಗಿವೆ. ಸರ್ಕಾರದ ನಿರ್ಧಾರವನ್ನು ನಂತರ ಮಾಧ್ಯಮಗಳಿಗೆ ತಿಳಿಸಲಾಗುವುದು ಎಂದು ತಿಳಿಸಿದೆ.
ಹಿಂದೆ, ಟಾಟಾ ಸನ್ಸ್‌ನ ಸಾಲದ ಹೊರೆಯಿರುವ ಸರ್ಕಾರಿ ಸ್ವಾಮ್ಯದ ಏರ್‌ಲೈನ್ ಏರ್ ಇಂಡಿಯಾಕ್ಕಾಗಿ ಬಿಡ್ ಶಿಫಾರಸು ಮಾಡುವ ಪ್ರಸ್ತಾವನೆಯನ್ನು ಮಂತ್ರಿಗಳ ಸಮಿತಿಯು ಒಪ್ಪಿಕೊಂಡಿದೆ ಎಂದು ವರದಿಗಳು ತಿಳಿದ್ದವು. ಸರ್ಕಾರವು ಗುರುವಾರ ಹಣಕಾಸು ಬಿಡ್‌ಗಳ ಮೌಲ್ಯಮಾಪನವನ್ನು ಆರಂಭಿಸಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿತ್ತು.
ಪ್ಯಾನಲ್ ಟಾಟಾ ಗ್ರೂಪ್ ಮತ್ತು ಸ್ಪೈಸ್ ಜೆಟ್ ಸಂಸ್ಥಾಪಕರಿಂದ ಬಿಡ್ ಗಳನ್ನು ಪಡೆದಿದೆ.

ಪ್ರಮುಖ ಸುದ್ದಿ :-   ʼಗೋವಾದ ಮೇಲೆ ಬಲವಂತವಾಗಿ ಭಾರತದ ಸಂವಿಧಾನದ ಹೇರಿಕೆ ; ಕಾಂಗ್ರೆಸ್ ಅಭ್ಯರ್ಥಿ ಹೇಳಿಕೆಯಿಂದ ಭುಗಿಲೆದ್ದ ವಿವಾದ : ದೇಶ ಒಡೆಯುವ ಹುನ್ನಾರ ಎಂದ ಪ್ರಧಾನಿ ಮೋದಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement