ಲಡಾಕಿನ ಲೇಹದಲ್ಲಿ ಜಗತ್ತಿನ ಅತಿ ದೊಡ್ಡ ಖಾದಿ ರಾಷ್ಟ್ರಧ್ವಜದ ಅನಾವರಣ

ನವದೆಹಲಿ: ಖಾದಿ ಬಟ್ಟೆಯಲ್ಲಿ ರಚಿಸಲಾದ ಜಗತ್ತಿನ ಅತಿ ದೊಡ್ಡ ರಾಷ್ಟ್ರಧ್ವಜವನ್ನು ಮಹಾತ್ಮ ಗಾಂಧೀಜಿಯವರ 152ನೇ ಜನ್ಮದಿನವಾದ ಅಕ್ಟೋಬರ್‌ 2ರಂದು ಲಡಾಕಿನ ಲೇಹದಲ್ಲಿ ಅನಾವರಣಗೊಳಿಸಲಾಯಿತು.
ಲಡಾಕ್ ನ ಲೆಫ್ಟಿನೆಂಟ್ ಗವರ್ನರ್ ಆರ್.ಕೆ. ಮಾಥುರ್ ನೂತನ ರಾಷ್ಟಧ್ವಜವನ್ನು ಅರಳಿಸಿದರು. 225 ಅಡಿ ಉದ್ದ ಹಾಗೂ 150 ಅಡಿ ಅಗಲದ ಈ ತ್ರಿವರ್ಣ ಧ್ವಜವು 1 ಸಾವಿರ ಕೆ.ಜಿ. ಭಾರವಿದೆ. ಭಾರತೀಯ ಸೇನೆಯ 57 ಎಂಜಿನಿಯರ್ ರೆಜಿಮೆಂಟ್ ಈ ರಾಷ್ಟ್ರಧ್ವಜವನ್ನು ಸಿದ್ಧಪಡಿಸಿದೆ ಎಂದು ದೂರದರ್ಶನ ವರದಿ ತಿಳಿಸಿದೆ.
ನಮ್ಮ ಧ್ವಜವು ನಮ್ಮ ಏಕತೆ, ಮಾನವತೆ ಹಾಗೂ ದೇಶದ ಪ್ರತಿಯೊಬ್ಬರೂ ಸ್ವೀಕರಿಸುವಂತಹ ಸಂಕೇತವಾಗಿದೆ ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಇದು ನಮ್ಮ ದೇಶದ ಮಹಾನತೆಯ ಸಂಕೇತವೂ ಆಗಿದೆ. ಮುಂಬರುವ ವರ್ಷಗಳಲ್ಲಿ ಈ ಧ್ವಜವು ನಮ್ಮ ಸೈನಿಕರ ಉತ್ಸಾಹದ ಸಂಕೇತವಾಗಲಿದೆ ಎಂದು ಲಡಾಕ್ ಗವರ್ನರ್ ರಾಷ್ಟ್ರಧ್ವಜವನ್ನು ಆರೋಹಣಗೊಳಿಸಿದ ಬಳಿಕ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದರು.
ಈ ಬಗ್ಗೆ ಕೇಂದ್ರ ಗೃಹ ಮನ್ಸುಖ್ ಮಾಂಡವೀಯ ಟ್ವಿಟ್ಟರ್ ನಲ್ಲಿ ವಿಡಿಯೋ ಪ್ರಸಾರ ಮಾಡಿದ್ದಾರೆ. ” ಗಾಂಧೀಜಿ ಜಯಂತಿಯಂದು ಭಾರತದ ರಾಷ್ಟ್ರಧ್ವಜ ಲಡಾಕಿನ ಲೇಹದಲ್ಲಿ ಲ್ಲಿ ಅನಾವರಣಗೊಂಡಿರುವುದು ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ. ಬಾಪೂಜಿಯವರ ನೆನಪನ್ನು ಸ್ಮರಿಸುವ, ದೇಶವನ್ನು ಗೌರವಿಸುವ ಈ ಸಂಕೇತವನ್ನು ನಾನು ಗೌರವಿಸುತ್ತೇನೆ ಟ್ವೀಟ್‌ ಮಾಡಿದ್ದಾರೆ.
ಖಾದಿ ಹಾಗೂ ಗ್ರಾಮ ಕೈಗಾರಿಕೋದ್ಯಮ ಆಯೋಗ (ಕೆವಿಐಸಿ) ಈ ಧ್ವಜವನ್ನು ತಯಾರಿಸಿದ್ದು, ಅದನ್ನು ಲೇಹದಲ್ಲಿರುವ ಭಾರತೀಯ ಸೇನಾಪಡೆ ಪ್ರದರ್ಶಿಸಿದೆ.
ಧ್ವಜದ ಉದ್ಘಾಟನಾ ಸಮಾರಂಭದಲ್ಲಿ ಲೇಹ್‌ ಗೆ ಎರಡು ದಿನಗಳ ಭೇಟಿಗೆ ಆಗಮಿಸಿದ್ದ ಸೇನಾ ವರಿಷ್ಠ ಮುಕುಂದ ನರವಾಣೆ ಹಾಗೂ ಇತರ ಕೆಲವು ಸೇನಾ ಅಧಿಕಾರಿಗಳು ಉಪಸ್ಥಿತರಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಗಳು ಹಾರಾಟ ನಡೆಸಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದವು. ಭಾರತೀಯ ಸೇನೆಯ 57ನೇ ಎಂಜಿನಿಯರಿಂಗ್ ರೆಜಿಮೆಂಟಿನ ಕನಿಷ್ಠ 150 ಸೈನಿಕರು ರಾಷ್ಟ್ರಧ್ವಜ ಹೊತ್ತೊಯ್ದು ಲೇಹದ ನೆಲಮಟ್ಟದಿಂದ ಎರಡು ಸಾವಿರ ಅಡಿ ಎತ್ತರದ ಬೆಟ್ಟದಲ್ಲಿ ಸ್ಥಾಪಿಸಿದ್ದಾರೆ. ಬೆಟ್ಟದ ತುದಿಯನ್ನು ತಲುಪಲು ಸೈನಿಕರಿಗೆ ಎರಡು ತಾಸುಗಳ ಬೇಕಾದವು.

ಪ್ರಮುಖ ಸುದ್ದಿ :-   ರಾಜ್ ಠಾಕ್ರೆ ಸಂಕಲ್ಪ, ಉದ್ಧವರಿಂದ ದೊಡ್ಡ ಸುಳಿವು : 20 ವರ್ಷಗಳ ನಂತರ ಠಾಕ್ರೆ ಸಹೋದರರ ಪುನರ್ಮಿಲನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement