ಕುಮಟಾ; ಬಾಳಿಗಾ ವಾಣಿಜ್ಯ ಕಾಲೇಜಿನಲ್ಲಿ ಸ್ವಚ್ಛತೆ -ಕರ್ತವ್ಯ ಮಾಸಾಚರಣೆಗೆ ಚಾಲನೆ

ಕುಮಟಾ;ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸ್ವಚ್ಛತಾ ಮಾಸಾಚರಣೆಗೆ ಪ್ರಾಚಾರ್ಯ ಡಾ. ಎಸ್.ವಿ.ಶೇಣ್ವಿ ಚಾಲನೆ ಶನಿವಾರ ನೀಡಿದರು
ಮಹಾತ್ಮ ಗಾಂಧಿ ಹಾಗೂ ಲಾಲಬಹಾದ್ದೂರ ಶಾಸ್ತ್ರೀ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು.
.ಮಹಾತ್ಮ ಗಾಂಧೀಜಿ ಮತ್ತು ಲಾಲಬಹುದ್ದೂರ ಶಾಸ್ತ್ರಿಗಳ ಜನ್ಮ ದಿನಾಚರಣೆ ನೆನಪಿಗಾಗಿ ಉತ್ತರಕನ್ನಡ ಜಿಲ್ಲೆಯಲ್ಲಿಯೇ ಸ್ವಚ್ಚತೆ ಮತ್ತು ಕರ್ತವ್ಯ ಮಾಸಾಚರಣೆಯನ್ನು ವೈಶಿಷ್ಟ್ಯವಾಗಿ ಆಚರಿಸಲು ನಿರ್ದರಿಸಿದ್ದೇವೆ. ಸ್ವತಂತ್ರ ಭಾರತದ ೭೬ ನೇ ವರ್ಷದ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಗಾಂಧಿಯವರ ಸ್ವಚ್ಛತೆ ಕನಸು ಮತ್ತು ಶಾಸ್ತ್ರೀ ಅವರ ರಾಷ್ಟ್ರೀಯತೆಯ ಕರ್ತವ್ಯದ ಕನಸನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿ ಕೊಳ್ಳಲು ವಿಶೇಷ ಯೋಜನೆ ರೂಪಿಸಲಾಗಿದೆ ಎಂದರು.
ಆಧುನಿಕ ಯಂತ್ರೋಪಕರಣಗಳ ಕಾಲೇಜಿನ ಉಪನ್ಯಾಸಕರು ಮತ್ತು ಸಿಬ್ಬಂದಿಗೆ ಎರಡು ದಿನಗಳ ಮೂಲಕ ಸ್ವಚ್ಛತಾ ಅಭಿಯಾನದ ತರಬೇತಿ ನೀಡಲಾಗುವದು. ಕಾಲೇಜಿನ ಕ್ಯಾಂಪಸ್ ಅತ್ಯಂತ ಶುಭ್ರ ಮತ್ತು ಸ್ವಚ್ಛವಾಗಿರುವಂತೆ ನೋಡಿಕೊಳ್ಳಲು ವಿದ್ಯಾರ್ಥಿಗಳನ್ನೊಳಗೊಂಡಂತೆ ಪ್ರತ್ಯೇಕ ತಂಡ ರಚಿಸಲಾಗಿದೆ.
ಕಾಲೇಜಿನ ಕ್ಲಾಸ್ ರೂಮ್,ಗ್ರಂಥಾಲಯ,ಕಾಲೇಜ್ ಗಾರ್ಡನ,ಕುಡಿಯುವ ನೀರಿನ ಸ್ವಚ್ಛತೆ ಇತ್ಯಾದಿ ಪ್ರತಿಯೊಂದು ವಿಭಾಗವನ್ನು ಅತ್ಯಂತ ಸ್ವಚ್ಛವಾಗಿರುವಂತೆ ನೋಡಿಕೊಳ್ಳಲು ಉಪನ್ಯಾಕರನ್ನು ಒಳಗೊಂಡ ತಂಡಕ್ಕೆ ವಹಿಸಲಾಗಿದೆ. ಪ್ರತಿನಿತ್ಯ ಕನಿಷ್ಠ ೩೦ ನಿಮಿಷಗಳ ಕಾಲ ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನದಲ್ಲಿ ಶ್ರಮಾದಾನ ಮಾಡುವ ಮೂಲಕ ಗಾಂಧೀಜಿ ಅವರ ಕನಸನ್ನು ಸಾಕಾರ ಮಾಡಲಾಗುವುದು ಎಂದು ಹೇಳಿದರು.
ಮಾಜಿ ಪ್ರಧಾನಿ ಲಾಲಬಹುದ್ದೂರ್ ಶಾಸ್ತ್ರೀ ಅವರ ರಾಷ್ಟ್ರೀಯ ಧ್ಯೇಯೋದ್ದೇಶ, ಭಾರತದ ಸ್ವಾವಲಂಬನೆ ಕನಸು, ಸ್ವತಂತ್ರ ಬದುಕನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement