ಗೋಡ್ಸೆ ಜಿಂದಾಬಾದ್ ಎಂದು ಟ್ವೀಟ್ ಮಾಡುವವರಿಂದ ಭಾರತಕ್ಕೆ ಅವಮಾನ : ಬಿಜೆಪಿ ಸಂಸದ ವರುಣ್ ಗಾಂಧಿ

ನವದೆಹಲಿ: ರಾಷ್ಟ್ರಪಿತನ ಜನ್ಮ ದಿನಾಚರಣೆಯಂದು ಸಾಮಾಜಿಕ ಮಾಧ್ಯಮದಲ್ಲಿ ಮಹಾತ್ಮಾ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯನ್ನು ವೈಭವೀಕರಿಸಿದವರ ವಿರುದ್ಧ ಬಿಜೆಪಿ ಸಂಸದ ವರುಣ್ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಥವರು ಬೇಜವಾಬ್ದಾರಿಯಿಂದ ಇಡೀ ದೇಶ ನಾಚಿಕೆಪಡುವಂತೆ ಮಾಡುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತವು ಯಾವಾಗಲೂ ಆಧ್ಯಾತ್ಮಿಕ ಮಹಾಶಕ್ತಿಯಾಗಿದೆ. ಆದರೆ ಮಹಾತ್ಮ ಗಾಂಧಿ ತಮ್ಮ ಅಸ್ತಿತ್ವದ ಮೂಲಕ ನಮ್ಮ ರಾಷ್ಟ್ರದ ಆಧ್ಯಾತ್ಮಿಕ ಶಕ್ತಿಗೆ ಭದ್ರ ಬುನಾದಿ ಹಾಕಿದರು. ಮಹಾತ್ಮ ಗಾಂಧೀಜಿ ಆಧ್ಯಾತ್ಮಿಕ ಆಧಾರಗಳನ್ನು ತನ್ನ ಅಸ್ತಿತ್ವದ ಮೂಲಕ ಅಭಿವ್ಯಕ್ತಗೊಳಿಸಿ ನಮಗೆ ನೈತಿಕ ಅಧಿಕಾರವನ್ನು ನೀಡಿದ್ದರು ಅದು ಇಂದಿಗೂ ನಮ್ಮ ದೊಡ್ಡ ಶಕ್ತಿಯಾಗಿ ಉಳಿದಿದೆ. ‘ಗೋಡ್ಸೆ ಜಿಂದಾಬಾದ್’ ಎಂದು ಟ್ವೀಟ್ ಮಾಡುವುದು ಬೇಜವಾಬ್ದಾರಿಯಿಂದ ಕೂಡಿದ್ದು, ರಾಷ್ಟ್ರವನ್ನು ಅವಮಾನಿಸುತ್ತಿದ್ದಾರೆ” ಎಂದು ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಟ್ವಿಟರ್‌ನಲ್ಲಿ ‘ನಾಥೂರಾಮ್ ಗೋಡ್ಸೆ ಜಿಂದಾಬಾದ್’ ಟ್ರೆಂಡಿಂಗ್ ಆಗಿದ್ದು, ಭಾರೀ ವಿವಾದ ಭುಗಿಲೆದ್ದಿದೆ. ವರುಣ್ ಗಾಂಧಿ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
1948ರ ಜನವರಿ 30 ರಂದು ನಾಥೂರಾಮ್ ಗೋಡ್ಸೆ ಮಹಾತ್ಮಾ ಗಾಂಧಿ ಅವರನ್ನು ಗುಂಡಿಕ್ಕಿ ಕೊಂದಿದ್ದರು. ಈ ತಪ್ಪಿನ ಶಿಕ್ಷೆಯಾಗಿ ಗೋಡ್ಸೆಗೆ ಮರಣದಂಡನೆ ವಿಧಿಸಲಾಯಿತು.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement