ರೈತರ ಪ್ರತಿಭಟನೆಗೆ ಮಣಿದ ಕೇಂದ್ರ: ಅಕ್ಟೋಬರ್‌ 3ರಿಂದಲೇ ಭತ್ತ ಖರೀದಿಗೆ ಗ್ರೀನ್ ಸಿಗ್ನಲ್..

ನವದೆಹಲಿ : ಪಂಜಾಬ್​, ಹರಿಯಾಣ ರೈತರ ಪ್ರತಿಭಟನೆಗೆ ಕೊನೆಗೂ ಮಣಿದ ಕೇಂದ್ರ ಸರ್ಕಾರ ನಾಳೆಯಿಂದಲೇ ಭತ್ತ (Paddy) ಖರೀದಿಗೆ ಗ್ರೀನ್​ ಸಿಗ್ನಲ್ ನೀಡಿದೆ.
ಭತ್ತ ಹಾಗೂ ರಾಗಿ ಖರೀದಿಗೆ ಅಕ್ಟೋಬರ್​ 11ರಿಂದ ಚಾಲನೆ ನೀಡಲಾಗುತ್ತದೆ ಎಂದು ಈ ಹಿಂದೆ ಕೇಂದ್ರ ಸರ್ಕಾರ ತಿಳಿಸಿತ್ತು. ಹೀಗಾಗಿ, ಪಂಜಾಬ್​ ಹಾಗೂ ಹರಿಯಾಣದಲ್ಲಿ ಕಳೆದ ಕೆಲ ದಿನಗಳಿಂದ ರೈತರು ಪ್ರತಿಭಟನೆಗೆ ಇಳಿದಿದ್ದರು.
ಹರಿಯಾಣ ಮುಖ್ಯಮಂತ್ರಿ ಮನೋಹರ್​ಲಾಲ್​ ಖಟ್ಟರ್​​ ಹಾಗೂ ದುಷ್ಯಂತ್​ ಚೌಟಾಲಾ ಅವರೊಂದಿಗಿನ ಮಾತುಕತೆ ಬಳಿಕ ಕೇಂದ್ರ ಆಹಾರ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್​​ ಚೌಬೆ ಈ ಕುರಿತು ಮಾಹಿತಿ ನೀಡಿದ್ದಾರೆ. ಹರಿಯಾಣ ಹಾಗೂ ಪಂಜಾಬ್​​ನಲ್ಲಿ ನಾಳೆಯಿಂದ ಭತ್ತ, ರಾಗಿ ಬೆಳೆ ಖರೀದಿ ಆರಂಭವಾಗಲಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಮುಂಗಾರು ವಿಳಂಬವಾಗಿದ್ದ ಕಾರಣ ಕೇಂದ್ರ ಸರ್ಕಾರ ಭತ್ತ ಮತ್ತು ರಾಗಿ ಖರೀದಿಯನ್ನ ಅಕ್ಟೋಬರ್​ 1ರ ಬದಲು ಅಕ್ಟೋಬರ್​​ 11ಕ್ಕೆ ಮುಂದೂಡಿತ್ತು. ಆದರೆ, ಅಕ್ಟೋಬರ್​​ 1ರಿಂದಲೇ ಭತ್ತದ ಖರೀದಿ ಆರಂಭಿಸುವಂತೆ ಪಂಜಅಬ್‌ ಹಾಗೂ ಹರ್ಯಾಣದಲ್ಲಿ ರೈತರು ಭಾರೀ ಪ್ರತಿಭಟನೆ ನಡೆಸಿದ್ದರು. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದ ಪಂಜಾಬ್​ ಮುಖ್ಯಮಂತ್ರಿ ಚರಣ್​ಜಿತ್​ ಸಿಂಗ್​ ಚನ್ನಿ ಕೂಡ ಈ ವಿಷಯವನ್ನು ಪ್ರಸ್ತಾಪಿಸಿದ್ದರು.
ಚನ್ನಿ ಅವರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ನೂತನ ಕೃಷಿ ಕಾನೂನುಗಳ ಬಗ್ಗೆ ಚರ್ಚಿಸುವಾಗ ಭತ್ತ ಮತ್ತು ರಾಗಿ ಖರೀದಿಯನ್ನು ಆರಂಭಿಸಲು ಕೇಳಿಕೊಂಡಿದ್ದರು. ಶನಿವಾರ (ಇಂದು) ಬೆಳಗ್ಗೆ ಹರಿಯಾಣ ಮುಖ್ಯಮಂತ್ರಿ ಮನೋಹರ್​ಲಾಲ್ ಖಟ್ಟರ್​ ನಿವಾಸದ ಮುಂದೆ ದೊಡ್ಡ ಪ್ರಮಾಣದಲ್ಲಿ ರೈತರ ಪ್ರತಿಭಟನೆ ಸಹ ನಡೆದಿತ್ತು. ಇದರ ಬೆನ್ನಲ್ಲೇ ಮಹತ್ವದ ಸಭೆ ನಡೆದಿತ್ತು. ಸಭೆಯ ನಂತರ ಕೇಂದ್ರ ಸಚಿವರು ಈ ನಿರ್ಧಾರ ಪ್ರಕಟಿಸಿದ್ದಾರೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದ ಎಫ್ -16 ಯುದ್ಧ ವಿಮಾನ ಹೊಡೆದುರುಳಿಸಿದ ಭಾರತ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement