ವಿಚಿತ್ರ ವದಂತಿಯಿಂದ ಬಿಹಾರದಲ್ಲಿ ದಿಢೀರ್‌ ಭಾರೀ ಹೆಚ್ಚಳ ಕಂಡ ಪಾರ್ಲೆ-ಜಿ ಬಿಸ್ಕತ್ ಮಾರಾಟ:ಅಂಗಡಿಗಳ ಮುಂದೆ ಕ್ಯೂ, ಕಾಳಸಂತೆಯಲ್ಲೂ ಮಾರಾಟ..!

ಪಾಟ್ನಾ: ಬಿಹಾರದಲ್ಲಿ ವದಂತಿಗಳು ಯಾವಾಗಲೂ ಕಾಳ್ಗಿಚ್ಚಿನಂತೆ ಹರಡುತ್ತವೆ. ಇತ್ತೀಚಿನ ವದಂತಿಯು ಜ್ಯೂತಿಯಾ ಹಬ್ಬಕ್ಕೆ (Jeutiya festival) ಸಂಬಂಧಿಸಿದೆ. ಇದರಲ್ಲಿ ಮಕ್ಕಳು (ಪುರುಷರು) ಜ್ಯೂತಿಯಾದ ಪಾರ್ಲೆ-ಜಿ ಬಿಸ್ಕತ್ತುಗಳನ್ನು ತಿನ್ನದಿದ್ದರೆ, ಭವಿಷ್ಯದಲ್ಲಿ ಅವರು ಅಹಿತಕರ ಘಟನೆಗಳನ್ನು ಎದುರಿಸಬೇಕಾಗಬಹುದು ಎಂಬ ವದಂತಿ ಹರಡಿದೆ. ಬಾಯಿಂದ ಬಾಯಿಗೆ ಹಬ್ಬಿದ ಈ ವದಂತಿ ಬಿಹಾರದಲ್ಲಿ ‘ಪಾರ್ಲೆ-ಜಿ ಬಿಸ್ಕೆಟ್‌ ಎಷ್ಟು ಹೆಚ್ಚಿಸಿದೆಯೆಂದರೆ ಈಗ ಈ ಬಿಸ್ಕಟ್‌ ಕಾಳುಸಂತೆಯಲ್ಲಿ ಮಾರಾಟವಾಗುತ್ತಿದೆ..!
ಬಿಹಾರದಲ್ಲಿ ಪ್ರತಿವರ್ಷ ಜ್ಯೂತಿಯಾ ಹಬ್ಬವನ್ನು ಆಚರಿಸಲಾಗುತ್ತದೆ, ಅಲ್ಲಿ ತಾಯಂದಿರು ತಮ್ಮ ಮಕ್ಕಳ ದೀರ್ಘ, ಆರೋಗ್ಯಕರ ಮತ್ತು ಸಮೃದ್ಧ ಜೀವನಕ್ಕಾಗಿ 24 ಗಂಟೆಗಳ ಕಾಲ ಉಪವಾಸ ಮಾಡುತ್ತಾರೆ. ಈಗ ಹಬ್ಬಿರುವ ವದಂತಿ ಏನೆಂದರೆ ಹಬ್ಬದ ದಿನ 24 ಗಂಟೆಯೊಳಗೆ ಮಕ್ಕಳಿಗೆ, ಅದರಲ್ಲೂ ಗಂಡುಮಕ್ಕಳಿಗೆ ವಿಶೇಷವಾಗಿ ಪಾರ್ಲೆ-ಜಿ ಬಿಸ್ಕೆಟ್‌ ತಿನ್ನಿಸಬೇಕು. ಒಂದು ವೇಳೆ ಮಕ್ಕಳು ತಿನ್ನಲು ನಿರಾಕರಿಸಿದರೆ ಭವಿಷ್ಯದಲ್ಲಿ ಕೇಡು ಸಂಭವಿಸುತ್ತದೆ ಎಂದು ಹಬ್ಬಿಸಲಾಗುತ್ತಿದೆ.
ಗುರುವಾರ ಪಾರ್ಲೆ-ಜಿ ಬಿಸ್ಕಟ್‌ಗಳ ಬಗ್ಗೆ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ವದಂತಿಗಳಿದ್ದವು. ಜನರು ಅಂಗಡಿಗಳ ಹೊರಗೆ ಉದ್ದವಾದ ಸರತಿ ಸಾಲಿನಲ್ಲಿ ಕಾಣುತ್ತಿದ್ದರು. ಇದು ಶುಕ್ರವಾರ ಕಾಣಲಿಲ್ಲ. ಜಿಲ್ಲೆಯಲ್ಲಿ ವದಂತಿಗಳು ಹೇಗೆ ಹರಡಿವೆ ಎಂಬುದು ಇನ್ನೂ ಖಚಿತವಾಗಿಲ್ಲ.
ವದಂತಿಗಳ ನಂತರ, ಜನರು ಕಿರಾಣಿ ಅಂಗಡಿಗಳು, ಪಾನ್ ಅಂಗಡಿಗಳು ಹೀಗೆ ಯಾವುದೇ ಅಂಗಡಿಗಳ ಮುಂದೆ ಪಾರ್ಲೆ-ಜಿ ಬಿಸ್ಕಟ್‌ಗಳ ಕನಿಷ್ಠ ಒಂದು ಪ್ಯಾಕೆಟ್ ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು.
ಪರಿಣಾಮವಾಗಿ, ಪಾರ್ಲೆ-ಜಿ ಸ್ಟಾಕ್‌ಗಳು ಬೇಗನೆ ಖಾಲಿಯಾದವು. ಅನೇಕ ಅಂಗಡಿ ಮಾಲೀಕರು ಇದನ್ನು ಕಾಳಸಂತೆಯಲ್ಲಿ ಸಹ ಮಾರಾಟ ಮಾಡತೊಡಗಿದ್ದಾರೆ ಎಂದು ಆರೋಪಿಸಲಾಗಿದೆ. ಸೀತಾಮರ್ಹಿ ಜಿಲ್ಲೆಯಲ್ಲಿ 5 ರೂ.ಗಳ ಪ್ಯಾಕೆಟ್-ಜಿ ಬಿಸ್ಕೆಟ್ ಪ್ಯಾಕೆಟ್ ಅನ್ನು 50 ರೂ.ಗಳಿಗೆ ಮಾರಾಟ ಮಾಡಲಾಗಿದೆ. ಈ ವದಂತಿಗಳು ಮೂಲತಃ ಗ್ರಾಮೀಣ ಪ್ರದೇಶಗಳಾದ ಬರ್ಗಾನಿಯಾ, ದೆಹ್, ನಾನುಪುರ, ಬಾಜಪಟ್ಟಿ, ಮೆಜರ್ಗಂಜ್ ಮತ್ತು ಜಿಲ್ಲೆಯ ಇತರ ಕೆಲವು ಬ್ಲಾಕ್‌ಗಳಲ್ಲಿ ಹರಡಿದೆ.
ಮೂಲಗಳು ಹೇಳುವಂತೆ ವದಂತಿಗಳು ಪಕ್ಕದ ಇತರ ನಾಲ್ಕು ಜಿಲ್ಲೆಗಳಿಗೆ ಹರಡಿತು, ಅಲ್ಲಿ ಜನರು ಶುಕ್ರವಾರ ಬಿಸ್ಕತ್ತುಗಳನ್ನು ಖರೀದಿಸಲು ದುಂಬಾಲು ಬಿದ್ದರು ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   ಜೆಡಿಯು ಯುವ ಮುಖಂಡನ ಗುಂಡಿಕ್ಕಿ ಹತ್ಯೆ

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement