ನವದೆಹಲಿ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಭಾನುವಾರ ದೇಶಾದ್ಯಂತ ದಾಖಲೆಯ ಪ್ರಮಾಣದಲ್ಲಿ ಬೆಲೆ ಏರಿಕೆಯಾಗಿದೆ ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ದೆಹಲಿಯಲ್ಲಿ ಪೆಟ್ರೋಲ್ ದರವು ಲೀಟರ್‌ಗೆ 102.39 ರೂ. ಮತ್ತು ಮುಂಬೈನಲ್ಲಿ 108.43 ರೂ. ದಾಖಲಾಗಿದೆ.
ಡೀಸೆಲ್ ದರಗಳು ಕೂಡ ಏರಿಕೆಯನ್ನು ಕಂಡಿದ್ದು, ದೆಹಲಿಯಲ್ಲಿ 90.77 ರೂ. ಮತ್ತು ಮುಂಬೈನಲ್ಲಿ 98.48ರೂ. ರ ಗರಿಷ್ಠ ದಾಖಲೆಯನ್ನು ತಲುಪಿದೆ.
ಬೆಂಗಳೂರಿನಲ್ಲಿ ಪ್ರತಿಲೀಟರ್ ಪೆಟ್ರೋಲಿಗೆ 105.95 ರೂ.ಗಳು ಹಾಗೂ ಡೀಸೆಲ್‌ಗೆ 96.34 ರೂ.ಗಳಾಗಿವೆ.ಕೋಲ್ಕತ್ತಾದಲ್ಲಿ ಪೆಟ್ರೋಲ್ 103.07 ರೂ. ಮತ್ತು ಡೀಸೆಲ್ 93.87 ರೂ.ಗಳಾಗಿದೆಮತ್ತು ಚೆನ್ನೈನಲ್ಲಿ ಒಂದು ಲೀಟರ್ ಪೆಟ್ರೋಲ್ ಗೆ 100.01ರೂ. ಮತ್ತು ಒಂದು ಲೀಟರ್ ಡೀಸೆಲ್ ಗೆ 95.31 ರೂ. ಗಳಿಗೆ ಏರಿಕೆಯಾಗಿದೆ.
ಪೆಟ್ರೋಲ್ ಹಾಗೂ ಡಿಸೇಲ್ ದರವು ಸ್ಥಳೀಯ ತೆರಿಗೆಗಳನ್ನು ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ಬದಲಾವಣೆಯಾಗುತ್ತಿದೆ. ಅಂತಾರಾಷ್ಟ್ರೀಯ ತೈಲ ಬೆಲೆಗಳು ಮೂರು ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.
ಭಾರತವು ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಬ್ಯಾರಲ್ ಕಳೆದ ಕೆಲವು ದಿನಗಳಲ್ಲಿ ಸರಾಸರಿ ಪ್ರತಿ ಬ್ಯಾರೆಲ್‌ಗೆ $ 78 ಆಗಿದೆ. , ಮಧ್ಯಪ್ರದೇಶ, ರಾಜಸ್ಥಾನ, ಒಡಿಶಾ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಹಲವು ನಗರಗಳಲ್ಲಿ ಡೀಸೆಲ್ ದರಗಳು 100 ರೂ.ಗಿಂತ ಹೆಚ್ಚಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ