ಅಫ್ಘಾನಿಸ್ತಾನ ಗಡಿಗಳಲ್ಲಿ ತಾಲಿಬಾನಿಗಳಿಂದ ಆತ್ಮಹತ್ಯಾ ಬಾಂಬರ್‌ಗಳ ನಿಯೋಜನೆ:ವರದಿ

ಕಾಬೂಲ್: ತಾಲಿಬಾನ್ ಆತ್ಮಾಹುತಿ ಬಾಂಬರ್‌ಗಳ ವಿಶೇಷ ಬೆಟಾಲಿಯನ್ ಅನ್ನು ರಚಿಸಿದ್ದು, ಅದನ್ನು ಅಫ್ಘಾನಿಸ್ತಾನದ ಗಡಿಗಳಲ್ಲಿ ವಿಶೇಷವಾಗಿ ಬಡಕ್ಷಾನ್ ಪ್ರಾಂತ್ಯದಲ್ಲಿ ನಿಯೋಜಿಸಲಾಗುತ್ತದೆ ಎಂದು ವರದಿಗಳು ಹೇಳಿವೆ.
ಪ್ರಾಂತ್ಯದ ಉಪ ಗವರ್ನರ್ ಮುಲ್ಲಾ ನಿಸಾರ್ ಅಹ್ಮದ್ ಅಹ್ಮದಿತಜಾಕಿಸ್ತಾನ್ ಮತ್ತು ಚೀನಾದ ಗಡಿಯಾಗಿರುವ ಈಶಾನ್ಯ ಪ್ರಾಂತ್ಯದ ಬಡಕ್ಷಾನಿನಲ್ಲಿ ಆತ್ಮಾಹುತಿ ಬಾಂಬರ್ ಗಳ ಬೆಟಾಲಿಯನ್ ಸೃಷ್ಟಿಯ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದು ಖಾಮಾ ಪ್ರೆಸ್ ವರದಿ ಮಾಡಿದೆ.
ಬೆಟಾಲಿಯನ್ ಗೆ ಲಷ್ಕರ್-ಎ-ಮನ್ಸೂರಿ (‘ಮನ್ಸೂರ್ ಸೇನೆ’) ಎಂದು ಹೆಸರಿಸಲಾಗಿದೆ ಮತ್ತು ದೇಶದ ಗಡಿಗಳಿಗೆ ನಿಯೋಜಿಸಲಾಗುವುದು ಎಂದು ಅಹ್ಮದಿ ಹೇಳಿದರು. ಇದು ಹಿಂದಿನ ಅಫ್ಘಾನ್ ಸರ್ಕಾರದ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಆತ್ಮಹತ್ಯಾ ದಾಳಿ ನಡೆಸಿದ ಬೆಟಾಲಿಯನ್ನೇ ಆಗಿದೆ ಎಂದು ಅವರು ಹೇಳಿದ್ದಾರೆ.
ಈ ಬೆಟಾಲಿಯನ್ ಇಲ್ಲದಿದ್ದರೆ ಅಮೆರಿಕದ ಸೋಲು ಸಾಧ್ಯವಿಲ್ಲ. ಈ ಧೈರ್ಯಶಾಲಿ ಪುರುಷರು ಸ್ಫೋಟಕ ಹೊಂದಿರುವ ಕೋಟುಗಳನ್ನು ಧರಿಸುತ್ತಾರೆ ಮತ್ತು ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ನೆಲೆಗಳನ್ನು ಸ್ಫೋಟಿಸಿದ್ದಾರೆ. ಇವರು ಅಕ್ಷರಶಃ ಭಯವಿಲ್ಲದ ಜನರು ಅಲ್ಲಾಹನ ಒಪ್ಪಿಗೆಗಾಗಿ ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ” ಎಂದು ಅಹ್ಮದಿ ಹೇಳಿದ್ದಾರೆ ಎಂದು ಖಾಮಾ ಪ್ರೆಸ್ ವರದಿ ತಿಳಿಸಿದೆ.
ಲಷ್ಕರ್-ಎ-ಮನ್ಸೂರಿಯ ಜೊತೆಗೆ, ಬದರಿ 313 ಮತ್ತೊಂದು ಬೆಟಾಲಿಯನ್ ಆಗಿದ್ದು, ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಯೋಜಿಸಲಾಗಿರುವ ಅತ್ಯಂತ ಸುಸಜ್ಜಿತ ಮತ್ತು ಆಧುನಿಕ ಸೇನಾ ಗುಂಪುಗಳಲ್ಲಿ ಒಂದಾಗಿದೆ ಎಂದು ಪ್ರಕಟಣೆ ಹೇಳಿದೆ.
ಬದ್ರಿ 313 ಕೂಡ ಆತ್ಮಾಹುತಿ ಬಾಂಬರ್‌ಗಳನ್ನು ಒಳಗೊಂಡಿದೆ ಎಂದು ಖಾಮಾ ಪ್ರೆಸ್ ಹೇಳಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಅಬ್ಬಬ್ಬಾ...ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement