ಕೈ ಕೊಟ್ಟ ವಾಟ್ಸಾಪ್, ಫೇಸ್ ಬುಕ್, ಇನ್‍ಸ್ಟಾಗ್ರಾಂ : ಬಳಕೆದಾರರು ಕಂಗಾಲು

ಬೆಂಗಳೂರು: ಸೋಷಿಯಲ್ ಮೀಡಿಯಾ ಹಾಗೂ ಮೆಸೇಜಿಂಗ್ ಆಪ್​ಗಳನ್ನು ಬಳಸುತ್ತಿರುವವರಿಗೆ ಇಂದು (ಸೋಮವಾರ) ಇದ್ದಕ್ಕಿದ್ದಂತೆ ಸರ್ವರ್ ​ ಕೈಕೊಟ್ಟಿದೆ.
ಸೋಷಿಯಲ್​ ಮೀಡಿಯಾ ಹಾಗೂ ಮೆಸೇಜಿಂಗ್ ದಿಗ್ಗಜ ಕಂಪನಿ ಆಗಿರುವ ಫೇಸ್​ಬುಕ್​, ವಾಟ್ಸ್​ಆಪ್​, ಇನ್​ಸ್ಟಾಗ್ರಾಮ್​ ಸರ್ವರ್ ಡೌನ್​ ಆಗಿದ್ದು, ಸಂವಹನ ವ್ಯವಸ್ಥೆಯಲ್ಲಿ ಸಾಕಷ್ಟು ತೊಂದರೆಯಾಗಿದೆ.
ಈ ಬಗ್ಗೆ ಬಳಕೆದಾರರು ಟ್ವಿಟರ್​ನಲ್ಲಿ ಸಮಸ್ಯೆ ಹೇಳಿಕೊಳ್ಳಲಾರಂಭಿಸಿದ್ದು, ವಾಟ್ಸ್​​ಆಪ್ ಕುರಿತು ಲಕ್ಷಾಂತರ ಟ್ವೀಟ್​ ಪೋಸ್ಟ್ ಆಗಿರುವುದರಿಂದ​ ಟ್ವಿಟರ್​ನಲ್ಲಿ ಈಗಾಗಲೇ ಟ್ರೆಂಡಿಂಗ್​ನಲ್ಲಿದೆ. ಅಲ್ಲದೆ ಮೆಸೇಜಿಂಗ್​ಗೆ ಹಲವರು ಈಗ ಟೆಲಿಗ್ರಾಮ್​ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲು, ಇನ್​ಸ್ಟಾಲ್ ಮಾಡಿಕೊಳ್ಳಲು ಆರಂಭಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಸೋಮವಾರ ರಾತ್ರಿ ಭಾರತ ಮತ್ತು ವಿಶ್ವದ ಕೆಲವು ಭಾಗಗಳಲ್ಲಿ ಸ್ಥಗಿತಗೊಂಡಿದೆ. WhatsApp ಸರ್ವರ್ ದೋಷವನ್ನು ತೋರಿಸುತ್ತಿದ್ದು, Instagram ಬಳಕೆದಾರರ ಫೀಡ್ ಅನ್ನು ರಿಫ್ರೆಶ್ ಮಾಡುತ್ತಿಲ್ಲ.
ಕ್ಷಮಿಸಿ, ಏನೋ ಸರಿಯಾಗಿಲ್ಲ. ನಾವು ಅದರ ಮೇಲೆ ಕೆಲಸ ಮಾಡುತ್ತಿದ್ದೇವೆ ಮತ್ತು ನಾವು ಅದನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ ಎಂದು ಫೇಸ್‌ಬುಕ್ ವೆಬ್‌ಸೈಟ್‌ನಲ್ಲಿ ಸಂದೇಶವೊಂದು ಹೇಳಿದೆ.

ಪ್ರಮುಖ ಸುದ್ದಿ :-   ಉತ್ತರ ಪತ್ರಿಕೆಗಳಲ್ಲಿ ಜೈ ಶ್ರೀ ರಾಮ, ಕ್ರಿಕೆಟ್‌ ಆಟಗಾರರ ಹೆಸರು ಬರೆದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣ ; ಇಬ್ಬರು ಪ್ರಾಧ್ಯಾಪಕರು ಅಮಾನತು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement