ದೇವರ ಪ್ರಸಾದದ ಹೆಸರಲ್ಲಿ ವಿದೇಶಕ್ಕೆ ಡ್ರಗ್ಸ್‌ ಸಾಗಾಟ..! :ಮತ್ತೊಂದು ಡ್ರಗ್ಸ್‌ ಜಾಲ ಬಯಲು, ಮೂವರ ಬಂಧನ

ಬೆಂಗಳೂರು : ಎನ್‌ಸಿಬಿ ಅಧಿಕಾರಿಗಳು ಮುಂಬೈನಲ್ಲಿ ರೇವ್‌ ಪಾರ್ಟಿ ನಡೆಯುತ್ತಿದ್ದ ಹಡಗಿನ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಬೆಂಗಳೂರಲ್ಲಿ ಮತ್ತೊಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ದೇವರ ಪ್ರಸಾದದ ಹೆಸರಲ್ಲಿ ಮಾದಕ ವಸ್ತುಗಳನ್ನು ಆಸ್ಟ್ರೇಲಿಯಾ ಹಾಗೂ ಬಹ್ರೇನ್‌ಗೆ ಸಾಗಾಟ ಮಾಡುತ್ತಿದ್ದ ಜಾಲವನ್ನು ಬೇಧಿಸುವಲ್ಲಿ ಎನ್‌ಸಿಬಿ ಅಧಿಕಾರಿಗಳು ಯಶಸ್ವಿಯಾಗಿದ್ದು, ಈ ಸಂಬಂಧ ಬೆಂಗಳೂರಲ್ಲಿ ಮೂವರನ್ನು ಬಂಧಿಸಿದ್ದಾರೆ…!
ಎನ್‌ಸಿಬಿ ಅಧಿಕಾರಿಗಳು ಬಂಧಿತ ಆರೋಪಿಗಳಿಂದ ಕೋಟ್ಯಂತರ ಮೌಲ್ಯದ 3.5 ಕೇಜಿ ಹ್ಯಾಶಿಶ್ ಆಯಿಲ್, 19 ಕೆಜಿ ಸೆಡೋಫೆರೋಡ್ರೈನ್ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಸೆಪ್ಟಂಬರ್‌ 12 ರಂದು ಖಚಿತ ಮಾಹಿತಿಯ ಮೇರೆಗೆ ಆಸ್ಟ್ರೇಲಿಯಾ ಹಾಗೂ ಬಹ್ರೈನ್‌ಗೆ ಕೋರಿಯಲ್‌ ಮೂಲಕ ಮಾದಕ ವಸ್ತುಗಳನ್ನು ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಸುಳಿವಿನ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದ ಎನ್‌ಸಿಬಿ ಅಧಿಕಾರಿಗಳು ಈ ಸಂಭಂಧ ಎರ್ನಾಕುಲಂ ವಿಮಾನ ನಿಲ್ದಾಣದಲ್ಲಿ ಓರ್ವನನ್ನು ಬಂಧಿಸಿದ್ದರು.
ನಂತರದಲ್ಲ ಚೆನ್ನೈ ಇಂಟರ್‌ ನ್ಯಾಷನಲ್‌ ಏರ್‌ಪೋರ್ಟ್‌ನಲ್ಲಿ ಆಸ್ಟ್ರೇಲಿಯಾಕ್ಕೆ ಸಾಗಾಟ ಮಾಡಲಾಗುತ್ತಿದ್ದ 16 ಕೆ.ಜಿ ಸ್ಯೂಡೋಪೆಡ್ರೈನ್ ಜಪ್ತಿ ಮಾಡಿದ್ದರು. ಈತ ನೀಡಿದ ಮಾಹಿತಿಯ ಮೇರೆಗೆ ಎನ್‌ಸಿಬಿ ಅಧಿಕಾರಿಗಳು ಬೆಂಗಳೂರಿನಲ್ಲಿ ಕಾಸರಗೋಡು ಮೂಲದ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆದಿದ್ದಾರೆ.
ಮಾದಕ ವಸ್ತುಗಳನ್ನು ಬ್ರಹ್ಮರಸಾಯನ, ನರಸಿಂಹ ರಸಾಯನ, ಅಶ್ವಗಂಧಿ ಲೇಹ, ಚಾಯಾವಧನ ಲೇಹ ಹೆಸರಿನ ಡಬ್ಬದಲ್ಲಿ ತುಂಬಿಸುತ್ತಿದ್ದರು. ನಂತರದಲ್ಲಿ ಕರೈಕಾಲ್‌ ಎಂಬ ಹೆಸರಿನ ಕೊರಿಯರ್‌ ಮೂಲಕ ಆಸ್ಟ್ರೇಲಿಯಾ ಹಾಗೂ ಬಹ್ರೈನ್‌ಗೆ ಈ ಮಾದಕ ವಸ್ತುಗಳನ್ನು ಪ್ರಸಾದದ ಹೆಸರಿನಲ್ಲಿ ಸಾಗಾಟ ಮಾಡುತ್ತಿದ್ದರು.ಆಯುರ್ವೇದ ಔಷಧ ಹಾಗೂ ದೇವರ ಪ್ರಸಾದ ರೂಪದಲ್ಲಿ ಮಾದಕ ವಸ್ತು ಸಾಗಾಟ ಮಾಡುವುದನ್ನೇ ಆರೋಪಿಗಳು ದಂಧೆಯನ್ನಾಗಿಸಿಕೊಂಡಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಸ್ವಿಗ್ಗಿ ಮೂಲಕ ಮನೆ ಮನೆಗೆ ಗಾಂಜಾ ಸಪ್ಲೈ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಎನ್‌ಸಿಬಿ ಅಧಿಕಾರಿಗಳು ಈ ಮತ್ತೊಂದು ಭರ್ಜರಿ ಭೇಟೆ ಮಾಡಿದ್ದು, ಬಂಧಿಸಿರುವ ಮೂವರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ಗಡಿ ಉಸ್ತುವಾರಿ ಸಚಿವರಾಗಿ ಹೆಚ್‌.ಕೆ ಪಾಟೀಲ ನೇಮಕ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement