ಆರ್ಯನ್‌ ಖಾನ್‌ಗೆ ವಿದೇಶಿ ಡ್ರಗ್ ಪೆಡ್ಲರ್‌ಗಳ ನಂಟು

ಮುಂಬೈ: ಐಷಾರಾಮಿ ಹಡಗಿನಲ್ಲಿ ನಡೆದ ಡ್ರಗ್ಸ್ ಪಾರ್ಟಿಯಲ್ಲಿ ಸಿಕ್ಕಿ ಬಿದ್ದಿರುವ ಬಾಲಿವುಡ್ ನಟ ಆರ್ಯನ್ ಖಾನ್ ಮತ್ತು ಇತರ ಇಬ್ಬರ ವಾಟ್ಸಾಪ್ ಚಾಟ್ ಬಹಿರಂಗವಾಗಿದ್ದು, ಈ ಮೂವರಿಗೆ ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್‌ಗಳ ಸಂಪರ್ಕವಿರುವ ಬಗ್ಗೆ ಮಾದಕ ವಸ್ತು ನಿಗ್ರಹದಳ ಪತ್ತೆ ಹಚ್ಚಿದೆ.
ಈ ಬಗ್ಗೆ ತನಿಖೆ ಕೈಗೊಂಡಿರುವ ಎನ್‌ಸಿಬಿ ಮಧ್ಯವರ್ತಿಯೊಬ್ಬರಿಂದ ಡ್ರಗ್ ಸರಬರಾಜುರಾಗಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ನೀರ್‌ಲಿಕರ್ ಎಂಬ ವ್ಯಕ್ತಿಯನ್ನು ಪ್ರಾಥಮಿಕ ಹಂತದ ತನಿಖೆಗೆ ಗುರಿಪಡಿಸಲಾಗಿದೆವೆಂದು ಹೇಳಲಾಗಿದೆ.
ಆರ್ಯನ್ ಖಾನ್ ಅವರನ್ನು ವಾಟ್ಸಾಪ್‌ನಲ್ಲಿರುವ ಚಾಟ್‌ಗಳನ್ನು ನೋಡಿ ಎನ್‌ಸಿಬಿ ಅಧಿಕಾರಿಗಳಿಗೆ ಆಘಾತ ಉಂಟು ಮಾಡಿದೆ. ಹಲವು ಕೋಡ್‌ಗಳ ಹೆಸರಿನಲ್ಲಿ ಡ್ರಗ್ಸ್ ತರಿಸಿಕೊಂಡು ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ.
ಈ ಮಧ್ಯೆ ಮುಂಬೈನ ಸಮುದ್ರದ ಮಧ್ಯ ಭಾಗದಲ್ಲಿ ಐಷಾರಾಮಿ ಹಡಗಿನಲ್ಲಿ ನಡೆಸಿದ ಡ್ರಗ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತು ನಿಗ್ರಹದಳ (ಎನ್‌ಸಿಬಿ) ಇನ್ನು ಇಬ್ಬರನ್ನು ಬಂಧಿಸಿದೆ. ಇದರೊಂದಿಗೆ ಬಂಧಿತರ ಸಂಖ್ಯೆ ೧೧ಕ್ಕೆ ಏರಿದೆ.
ಈಗಾಗಲೇ ಬಾಲಿವುಡ್‌ನ ಸೂಪರ್ ಸ್ಟಾರ್ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ೯ ಜನರನ್ನು ಎನ್‌ಸಿಬಿ ಬಂಧಿಸಿದೆ. ಆರ್ಯನ್ ಖಾನ್ ಸೇರಿದಂತೆ ಮತ್ತಿತರರನ್ನು ಈಗಾಗಲೇ ಎನ್‌ಸಿಬಿ ಕಸ್ಟಡಿಗೆ ಒಪ್ಪಿಸಲಾಗಿದೆ.
ಡ್ರಗ್ಸ್ ಪಾರ್ಟಿ ಆಯೋಜಿಸಿದವರು ಯಾರು ಮತ್ತು ಮಾದಕ ವಸ್ತು ಹೇಗೆ ಬಂತು ಎಂಬ ಬಗ್ಗೆ ಎನ್‌ಸಿಬಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸಲು ತನಿಖೆ ಚುರುಕುಗೊಳಿಸಿದ್ದಾರೆ.

ಪ್ರಮುಖ ಸುದ್ದಿ :-   ಚುನಾವಣಾ ಭಾಷಣ ಮಾಡುವ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಶನಿವಾರ ರಾತ್ರಿ ಎನ್‌ಸಿಬಿ ಮುಂಬೈ ಘಟಕ ಗೋವಾದತ್ತ ತೆರಳಿದ್ದ ಐಷಾರಾಮಿ ಹಡಗಿನ ಮೇಲೆ ದಾಳಿ ಮಾಡಿ ಭಾರಿ ಪ್ರಮಾಣದಲ್ಲಿ ಡ್ರಗ್ಸ್ ವಶಪಡಿಸಿಕೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ವಿಚಾರಣೆ ನಡೆಸಿದ ವೇಳೆ ಇನ್ನಿಬ್ಬರ ಬಗ್ಗೆ ಮಾಹಿತಿ ಲಭಿಸಿತ್ತು.
ಆರ್ಯನ್ ಖಾನ್ ಮತ್ತು ಇನ್ನಿಬ್ಬರ ವಾಟ್ಸಾಪ್ ಸಂದೇಶಗಳಲ್ಲಿ ಆಘಾತಕಾರಿ ಮಾಹಿತಿ ಪತ್ತೆಯಾಗಿತ್ತು. ಡ್ರಗ್ಸ್‌ಗೆ ಹಲವಾರು ಕೋಡ್ ಹೆಸರುಗಳನ್ನು ಬಳಸಿರುವುದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ.
ಈ ಮಧ್ಯೆ ಎನ್‌ಸಿಬಿ ಘಟಕದ ವಲಯ ಅಧ್ಯಕ್ಷ ಸಮೀರ್ ವಾಂಖೆಡೆ ಪ್ರತಿಕ್ರಿಯೆ ನೀಡಿ ನಾವು ಯಾರನ್ನು ಗುರಿಯಾಗಿರಿಸಿಕೊಂಡು ನಾವು ದಾಳಿ ಮಾಡಿಲ್ಲ. ಕಳೆದ ೧೦ ತಿಂಗಳ ಅವಧಿಯಲ್ಲಿ ೩೦೦ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು. ಡ್ರಗ್ಸ್ ನಿರ್ಮೂಲನೆ ಮಾಡುವ ಸಂಬಂಧ ಕಳೆದ ಒಂದು ವರ್ಷದಿಂದ ಡ್ರಗ್ಸ್ ಪೆಡ್ಲರ್ ಮತ್ತು ಸರರಾಜುದಾರರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಡ್ರಗ್ ಪಾರ್ಟಿಗೆ ಬೆಂಗಳೂರು ಲಿಂಕ್
ಮುಂಬೈನ ಹಡಗಿನ ಡ್ರಗ್ಸ್ ಪಾರ್ಟಿ ಪ್ರಕರಣ ಸಂಬಂಧ ಈಗಾಗಲೇ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಪುತ್ರ ಆರ್ಯನ್ ನನ್ನು ಎನ್‌ಸಿಬಿ ಬಂಧಿಸಿದ್ದು, ಈ ಹಡಗಿನಲ್ಲಿ ಬೆಂಗಳೂರು ಮೂಲದ ೨೦೦ ಜನರು ಇದ್ದರು ಎನ್ನಲಾಗುತ್ತಿದೆ.
ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದ ಆರೋಪದಡಿ ಎನ್‌ಸಿಬಿ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ೧೧ ಮಂದಿಯನ್ನು ಬಂಧಿಸಿದೆ. ಆದರೆ ಇದರಲ್ಲಿ ಬೆಂಗಳೂರಿಗರು ಇದ್ದು, ಇವರನ್ನು ಮುಂಬೈ ಎನ್‌ಸಿಬಿ ವಶಕ್ಕೆ ಪಡೆದಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿ ಎನ್‌ಸಿಬಿ ಅಧಿಕಾರಿಗಳು ನಿರತರಾಗಿದ್ದಾರೆ.

ಪ್ರಮುಖ ಸುದ್ದಿ :-   ಜೆಡಿಯು ಯುವ ಮುಖಂಡನ ಗುಂಡಿಕ್ಕಿ ಹತ್ಯೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement