ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ರೈತರ ಮೇಲೆ ಕಾರು ಹಾಯಿಸಿದ ದೃಶ್ಯದ್ದು ಎನ್ನಲಾದ ವಿಡಿಯೋ ವೈರಲ್‌

ಲಕ್ನೋ: ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ರೈತರ ಮೇಲೆ ಕಾರು ಹರಿಸಿದ ವಿಡಿಯೋ ದೃಶಯವೊಂದು ವೈರಲ್‌ ಆಗಿದೆ.. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ರೈತರ ಮೇಲೆ ಜೀಪ್ ಹತ್ತಿಸಲಾಗಿದೆ. ಜೀಪ್ ರೈತರ ಮೇಲೆ ಹರಿದಾಗಲೇ ರೈತರು ರಸ್ತೆಯಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಬಳಿಕ ತಕ್ಷಣವೇ ಕಾರ್ ಕೂಡ ಹೋಗಿದೆ. ಕೆಲವರು ರಸ್ತೆ ಪಕ್ಕಕ್ಕೆ ಜಂಪ್ ಮಾಡಿ ಜೀವ ಉಳಿಸಿಕೊಂಡಿದ್ದಾರೆ. ರೈತರ ಹಿಂಭಾಗದಿಂದ ಜೀಪ್, ಕಾರು ಬಂದಿರುವುದರಿಂದ ರೈತರಿಗೆ ಇದು ಗೊತ್ತಾಗಲಿಲ್ಲ. ಕೆಲವೇ ಕ್ಷಣಗಳಲ್ಲಿ ಈ ಘಟನೆ ನಡೆದು ಹೋಗಿದೆ. ಉಪಮುಖ್ಯಮಂತ್ರಿ ಕೇಶವ ಮೌರ್ಯ ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಭೇಟಿಗಾಗಿ ರೈತರು ಬೆಳಿಗ್ಗೆಯಿಂದ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಇಬ್ಬರು ರೈತರ ಮೇಲೆ ಸಚಿವರ ಬೆಂಗಾವಲು ವಾಹನ ಹರಿದು ಸಾವಿಗೀಡಾಗಿದ್ದಾರೆ ಎಂದು ಆರೋಪಿಸಲಾಗಿತ್ತು.

 

ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಮತ್ತು ಇದನ್ನು ಆಡಳಿತಾರೂಢ ಬಿಜೆಪಿ ಸಂಸದ ವರುಣ್ ಗಾಂಧಿ ಕೂಡ ಹಂಚಿಕೊಂಡಿದ್ದಾರೆ. ಭಾನುವಾರ ನಡೆದ ಘಟನೆಯಲ್ಲಿ ನಾಲ್ಕು ರೈತರು ಸೇರಿದಂತೆ ಎಂಟು ಜನರು ಮೃತಪಟ್ಟಿದ್ದರು.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಇದರ ಅಧಿಕೃತತೆ ಬಗ್ಗೆ ಪೊಲೀಸರು ಇನ್ನೂ ಪರಿಶೀಲಿಸಬೇಕಿದೆ. ಡ್ರೈವಿಂಗ್ ಸೀಟಿನಲ್ಲಿ ಯಾರು ಇದ್ದಾರೆ ಎಂಬುದೂ ದೃಶ್ಯಗಳಿಂದ ಸ್ಪಷ್ಟವಾಗಿಲ್ಲ.
25 ಸೆಕೆಂಡುಗಳ ವಿಡಿಯೊ ತುಣುಕಿನಲ್ಲಿ, ಎಸ್ಯುವಿ ಪ್ರತಿಭಟನಾಕಾರರನ್ನು ಅಪ್ಪಳಿಸುತ್ತದೆ, ಅವರು ನೆಲಕ್ಕೆ ಬೀಳುತ್ತಾರೆ, ಇತರರು ತಪ್ಪಿಸಿಕೊಳ್ಳ;ಲು ಹರಸಾಹಸ ಪಡುತ್ತಾರೆ. ಸೈರನ್‌ಗಳು ಮೊಳಗುತ್ತಿರುವ ಇನ್ನೊಂದು ವಾಹನವು ರೈತರಿಗೆ ಹೊಡೆದ ಎಸ್‌ಯುವಿಯನ್ನು ಟೈಲ್ ಮಾಡುವಂತೆ ಕಾಣುತ್ತದೆ.
ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ನಡೆಸುತ್ತಿದ್ದ ಎಸ್‌ಯುವಿಯಿಂದ ಪ್ರತಿಭಟನಾಕಾರರ ಮೇಲೆ ಹಾಯಿಸಲಾಯಿತು ಎಂದು ರೈತರು ಆರೋಪಿಸಿದ್ದಾರೆ. ಸಚಿವರು ಮತ್ತು ಅವರ ಪುತ್ರ ಇಬ್ಬರೂ ಸ್ಥಳದಲ್ಲೇ ಇರಲಿಲ್ಲ ಎಂದು ಹೇಳಿದ್ದಾರೆ.
ಖೇರಿಯ ಟಿಕೊನಿಯಾ ಪ್ರದೇಶದಲ್ಲಿ ಪ್ರತಿಭಟನಾ ನಿರತ ರೈತರ ಗುಂಪು ಕೇಂದ್ರ ಸಚಿವ ಮಿಶ್ರ ಮತ್ತು ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರ ಭೇಟಿಗೆ ತಡೆಯೊಡ್ಡಲು ಪ್ರಯತ್ನಿಸಿದಾಗ ಈ ಘಟನೆ ನಡೆದಿದೆ.
ಸಚಿವರ ಬೆಂಗಾವಲಿನಲ್ಲಿದ್ದ ಕಾರು ಪ್ರತಿಭಟನಾಕಾರರ ಮೇಲೆ ಹರಿದ ನಂತರ ಹಿಂಸಾಚಾರ ಆರಂಭವಾಯಿತು ಎಂದು ರೈತರು ಹೇಳಿದ್ದಾರೆ. ನಂತರ ನಡೆದ ಹಿಂಸಾಚಾರದಲ್ಲಿ ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಕೇಂದ್ರ ಸಚಿವರ ಪುತ್ರನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಬೈಕ್​ಗೆ ಡಿಕ್ಕಿ ಹೊಡೆದ ನಂತ್ರ ದೂರ ಎಳೆದೊಯ್ದ ಲಾರಿ..: ಟ್ರಕ್‌ ಹಿಡಿದುಕೊಂಡು ನೇತಾಡುತ್ತಿದ್ದ ಸವಾರ

 

 

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement