ನವದೆಹಲಿ: 130 ಕಿಮೀ ದೂರದಲ್ಲಿರುವ ಉತ್ತರ ಪ್ರದೇಶದ ಲಖಿಂಪುರ್ ಜಿಲ್ಲೆಯಲ್ಲಿ ಭಾನುವಾರ ಎಂಟು ಸಾವುಗಳ ವಿರುದ್ಧ ವ್ಯಾಪಕ ಪ್ರತಿಭಟನೆಗಳ ನಡುವೆ ಅಲ್ಲಿಗೆ ಭೇಟಿ ನೀಡಲು ಆಗಮಿಸಿದ್ದ ಛತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಇಂದು (ಮಂಗಳವಾರ) ಮಧ್ಯಾಹ್ನ ಲಕ್ನೊ ವಿಮಾನ ನಿಲ್ದಾಣದದಲ್ಲಿ ಪೊಲೀಸರು ತಡೆದ ಹಿನ್ನಲೆಯಲ್ಲಿ ಅವರು ಸ್ಥಳದಲ್ಲಿಯೇ ಧರಣಿ ಸತ್ಯಾಗ್ರಹಕ್ಕೆ ಕುಳಿತ ಘಟನೆ ನಡೆದಿದೆ.
ಬಘೇಲ್ ಅವರು ನಿನ್ನೆ ಸೀತಾಪುರದಲ್ಲಿ ಪೊಲೀಸ್ ವಶದಲ್ಲಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ತಾವು ಭೇಟಿ ಮಾಡಲು ಬಯಸಿದ್ದಾಗಿ ಹೇಳಿದರು. ಭಾನುವಾರ ಹಿಂಸಾಚಾರದಿಂದ ತೊಂದರೆಗೀಡಾದವರನ್ನು ಭೇಟಿ ಮಾಡಲು ಲಖಿಂಪುರಕ್ಕೆ ಹೋಗುತ್ತಿದ್ದಾಗ ತಮ್ಮನ್ನು ಕಾನೂನುಬಾಹಿರವಾಗಿ ಬಂಧಿಸಲಾಯಿತು ಎಂದು ಭೂಪೇಶ್ ಬಘೇಲ್ (Bhupesh Baghel) ಹೇಳಿದ್ದಾರೆ.
ನಾನು ಸೀತಾಪುರದಲ್ಲಿ ಪ್ರಿಯಾಂಕಾ ಗಾಂಧಿಯವರನ್ನು ಭೇಟಿ ಮಾಡಲು ಲಕ್ನೋಗೆ ಬಂದಿದ್ದೇನೆ. ಆದರೆ ನನಗೆ ವಿಮಾನ ನಿಲ್ದಾಣದಿಂದ ಹೊರಹೋಗಲು ಅವಕಾಶವಿಲ್ಲ. ಯಾವುದೇ ಆದೇಶವಿಲ್ಲದೆ, ನನ್ನನ್ನು ಲಕ್ನೋ ವಿಮಾನ ನಿಲ್ದಾಣದ ಹೊರಗೆ ನಿಲ್ಲಿಸಲಾಗಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಅವರು ಶೇರ್ ಮಾಡಿರುವ ಫೋಟೋದಲ್ಲಿ ಬಿಳಿ ಕುರ್ತಾ-ಪೈಜಾಮಾದಲ್ಲಿ, ನೆಲದ ಮೇಲೆ ಕುಳಿತಿದ್ದಾರೆ.
ಲಖಿಂಪುರದಲ್ಲಿ, ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಮೌರ್ಯ ಅವರ ಭೇಟಿಯ ವಿರುದ್ಧ ರೈತರು ನಡೆಸಿದ ಪ್ರತಿಭಟನೆ ಭಾನುವಾರ ಹಿಂಸಾತ್ಮಕವಾಗಿ ಮಾರ್ಪಟ್ಟಿತು, ಅವರ ಮೇಲೆ ಕಾರು ಹರಿದು ನಾಲ್ವರು ರೈತರು ಸೇರಿದಂತೆ ಎಂಟು ಜನರು ಮೃತಪಟ್ಟಿದ್ದಾರೆ. .ಈಗ ಆಕ್ರೋಶದ ನಡುವೆ ಕೊಲೆ ಪ್ರಕರಣ ದಾಖಲಾಗಿದ್ದು, ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಾತ್ರ ಆರೋಪಿಯಾಗಿದ್ದಾರೆ.
“
ನಿಮ್ಮ ಕಾಮೆಂಟ್ ಬರೆಯಿರಿ