ಸಿನಿಮಾ ಚಿತ್ರೀಕರಣಕ್ಕೆಂದು ಬಾಹ್ಯಾಕಾಶಕ್ಕೆ ಹಾರಿದ ರಷ್ಯಾ ಚಿತ್ರತಂಡ

ಮಾಸ್ಕೋ: ಮೊದಲ ಬಾರಿ ಬಾಹ್ಯಾಕಾಶದಲ್ಲಿ ಸಿನಿಮಾ ಚಿತ್ರೀಕರಣ ಮಾಡಲು ಅವಕಾಶ ನೀಡಲಾದ್ದು. ರಷ್ಯಾದ ಗಗನಯಾತ್ರಿ ಆಂಟನ್ ಶಕಾಪ್ಲೆರೋವ್, ಚಲನಚಿತ್ರ ನಿರ್ದೇಶಕ ಕ್ಲಿಮ್ ಶಿಪೆಂಕೊ ಮತ್ತು ನಟಿ ಯೂಲಿಯಾ ಪೆರೆಸಿಲ್ಡ್ ಜೊತೆಗಿನ ಸೊಯುಜ್ ಎಂಎಸ್-19 ಬಾಹ್ಯಾಕಾಶ ನೌಕೆಯನ್ನು ಅಕ್ಟೋಬರ್ 5 ರಂದು ಉಡಾವಣೆ ಮಾಡಲಾಗಿದೆ. ಶಿಪೆಂಕೊ ಮತ್ತು ಪೆರೆಸಿಲ್ಡ್ ಬಾಹ್ಯಾಕಾಶದಲ್ಲಿ “ಚಾಲೆಂಜ್” ಚಿತ್ರೀಕರಣ ನಡೆಸಲಿದ್ದಾರೆ. ಅಕ್ಟೋಬರ್ 17 ರಂದು ಅವರು ಭೂಮಿಗೆ ಹಿಂತಿರುಗಲಿದ್ದಾರೆ.
ನಟಿ ಯೂಲಿಯಾ ಪೆರೆಸಿಲ್ಡ್, ನಿರ್ದೇಶಕ ಕ್ಲಿಮ್ ಶಿಪೆಂಕೊ ಮತ್ತು ಗಗನಯಾತ್ರಿ ಆಂಟನ್ ಶಕಾಪ್ಲೆರೋವ್ ಮಂಗಳವಾರ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಲಿದ್ದಾರೆ ಎಂದು ರಷ್ಯಾದ ರಾಜ್ಯ ಬಾಹ್ಯಾಕಾಶ ನಿಗಮ ರೋಸ್ಕೋಸ್ಮೋಸ್ ತಿಳಿಸಿದೆ.
ಮುಖ್ಯ ಮತ್ತು ಬ್ಯಾಕಪ್ ಸಿಬ್ಬಂದಿಯನ್ನು ಅನುಮೋದಿಸಲಾಗಿದೆ. ರೋಸ್ಕೋಸ್ಮೋಸ್ ಮತ್ತು ರಷ್ಯಾದ ಚಾನೆಲ್ ಒನ್ ಕಳೆದ ನವೆಂಬರ್‌ನಲ್ಲಿ ಬಾಹ್ಯಾಕಾಶದಲ್ಲಿ ಚಲನಚಿತ್ರವನ್ನು ನಿರ್ಮಿಸುವ ಯೋಜನೆಯನ್ನು ಅನಾವರಣಗೊಳಿಸಿತು.
ನಟಿ ಯೂಲಿಯಾ ಪೆರೆಸಿಲ್ಡ್, ಚಲನಚಿತ್ರ ನಿರ್ದೇಶಕ ಕ್ಲಿಮ್ ಶಿಪೆಂಕೊ ಮತ್ತು ಗಗನಯಾತ್ರಿ ಆಂಟನ್ ಶಕಾಪ್ಲೆರೋವ್ ಇಂದು ಅ. 5 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿದ್ದಾರೆ.
ಈ ತಂಡ 12 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಚಾಲೆಂಜ್ ಸಿನಿಮಾಗಾಗಿ ಕೆಲಸ ಮಾಡಲಿದ್ದಾರೆ. ನನ್ನನ್ನು ಈ ಬಾಹ್ಯಾಕಾಶ ತುಂಬಾ ಆಕರ್ಷಕವಾಗಿ ಸ್ವಾಗತಿಸುತ್ತಿದೆ ಹಾಗೂ ಇಲ್ಲಿ ಯಾವುದೇ ಗಡಿಗಳಿಲ್ಲ ಎಂದು ನಟಿ ಪೆರೆಸಿಲ್ಡ್ ತಿಳಿಸಿದ್ದಾರೆ.
ಇದುವರೆಗೂ ಗೌಪ್ಯವಾಗಿಡಲಾಗಿದ್ದ ಚಲನಚಿತ್ರದ ಕಥಾವಸ್ತುವನ್ನು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೋಸ್ ಬಹಿರಂಗಪಡಿಸಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಗಗನಯಾನಿಯೊಬ್ಬರನ್ನು ರಕ್ಷಿಸುವ ಸಲುವಾಗಿ ಶಸ್ತ್ರಚಿಕಿತ್ಸಕಿಯೊಬ್ಬರನ್ನು ಅಂತರಿಕ್ಷಕ್ಕೆ ಕಳುಹಿಸುವ ರೋಚಕ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ.

ಪ್ರಮುಖ ಸುದ್ದಿ :-   ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿ ನೂತನ ದಾಖಲೆ ನಿರ್ಮಿಸಿದ ಭಾರತದ ಮೂಲದ ಈ ತಳಿಯ ಹಸು..! ಬೆಲೆ ಕೇಳಿದ್ರೆ ದಂಗಾಗ್ತೀರಾ...!!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement