ಎಲ್​ಪಿಜಿ ಗ್ಯಾಸ್​ ಸಿಲಿಂಡರ್‌ ದರ ಮತ್ತೆ ಏರಿಕೆ

ನವದೆಹಲಿಗೃಹ ಬಳಕೆಯ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​(LPG Price Hike) ಬೆಲೆ ಮತ್ತೆ ಹೆಚ್ಚಾಗಿದೆ. ಈ ತಿಂಗಳು 15 ರೂಪಾಯಿ ಹೆಚ್ಚಾಗಿದೆ.
ಬುಧವಾರ ಎಲ್​ಪಿಜಿ ಸಿಲಿಂಡರ್ ಬೆಲೆ 15 ರೂಪಾಯಿ ಹೆಚ್ಚಾಗಿದೆ. ಕಳೆದ 2 ತಿಂಗಳಲ್ಲಿ ಸತತ ನಾಲ್ಕನೇ ಬಾರಿಗೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಹೊಸ ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಯಾಗಲಿವೆ.
ಎಎನ್‌ಐ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ 14.2 ಕೆಜಿಯ ಸಬ್ಸಿಡಿ ರಹಿತ ಎಲ್​ಪಿಜಿ ಸಿಲಿಂಡರ್ ಬೆಲೆ​ 899.50 ರೂಪಾಯಿ ಆಗಿದೆ. ಈ ಮೊದಲು 884.50 ರೂ. ಇತ್ತು. 5 ಕೆಜಿಯ ಎಲ್​ಪಿಜಿ ಸಿಲಿಂಡರ್​​ ಬೆಲೆ 502 ರೂಪಾಯಿ ಆಗಿದೆ. ಕಳೆದ 2 ತಿಂಗಳಿಂದೀಚೆಗೆ 4ನೇ ಬಾರಿ ಸಿಲಿಂಡರ್ ಬೆಲೆ ಏರಿಕೆ ಕಂಡಿದೆ. ಇದೇ ಅಕ್ಟೋಬರ್ 1ರಂದು ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಎಲ್​ಪಿಜಿ ಸಿಲಿಂಡರ್​ಗೆ 25 ರೂಪಾಯಿ ಹೆಚ್ಚಾಗಿತ್ತು.
ಈ ವರ್ಷದ ಜನವರಿ ತಿಂಗಳಿನಿಂದ ಇಲ್ಲಿವರೆಗೆ ಎಲ್​ಪಿಜಿ ಗ್ಯಾಸ್​ ಸಿಲಿಂಡರ್ ಬೆಲೆ ಸುಮಾರು 205 ರೂಪಾಯಿ ಏರಿಕೆ ಕಂಡಿದೆ. ಸೆಪ್ಟೆಂಬರ್ 1ರಂದು ಎಲ್​ಪಿಜಿ ಗ್ಯಾಸ್​ ಸಿಲಿಂಡರ್ ಬೆಲೆಯನ್ನು 25 ರೂಪಾಯಿ ಹೆಚ್ಚಿಸಲಾಗಿತ್ತು. ಆಗಸ್ಟ್​ 17ರಂದು ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ಗೆ 25 ರೂಪಾಯಿ ಹೆಚ್ಚಿಸಲಾಗಿತ್ತು. 15 ದಿನಗಳ ಅಂತರದಲ್ಲಿ 2 ಬಾರಿ ಗ್ಯಾಸ್​ ಸಿಲಿಂಡರ್ ಬೆಲೆ ಏರಿಕೆಯಾಗಿತ್ತು.
ಈ ವರ್ಷ ಮೊದಲ ಬಾರಿಗೆ ಫೆಬ್ರವರಿ 4ರಂದು ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ಗೆ 25 ರೂಪಾಯಿ ಏರಿಸಲಾಗಿತ್ತು. ಬಳಿಕ ಫೆಬ್ರವರಿ 15ರಂದು 50 ರೂಪಾಯಿ ಏರಿಕೆ ಮಾಡಲಾಗಿತ್ತು. ಫೆಬ್ರವರಿ 25 ಮತ್ತು ಮಾರ್ಚ್​ 1ರಂದು ಮತ್ತೆ 25 ರೂ. ಹೆಚ್ಚಿಸಲಾಗಿತ್ತು. ಇದರೊಂದಿಗೆ ಫೆಬ್ರವರಿ ತಿಂಗಳೊಂದರಲ್ಲೇ 3 ಬಾರಿ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ ಬೆಲೆ ಏರಿಸಲಾಗಿತ್ತು.
ಪ್ರತಿ ಗ್ಯಾಸ್​ ಸಿಲಿಂಡರ್​ಗೆ 125 ರೂಪಾಯಿ ಏರಿಕೆಯಾದ ಬಳಿಕ, ಏಪ್ರಿಲ್​ 1ರಂದು ಪ್ರತೀ ಸಿಲಿಂಡರ್​​ಗೆ 10 ರೂಪಾಯಿ ಕಡಿತ ಮಾಡಲಾಗಿತ್ತು. ಜುಲೈ, ಆಗಸ್ಟ್​ ಮತ್ತು ಸೆಪ್ಟೆಂಬರ್ ಹೀಗೆ ಸತತ 3 ತಿಂಗಳೂ ಸಹ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ ಬೆಲೆಯನ್ನು ತಲಾ 25 ರೂಪಾಯಿ ಹೆಚ್ಚಿಸಲಾಗಿತ್ತು. ಒಟ್ಟು ತಿಂಗಳಲ್ಲಿ 75 ರೂಪಾಯಿ ಏರಿಕೆ ಕಂಡಿತ್ತು.

ಪ್ರಮುಖ ಸುದ್ದಿ :-   "ನನ್ನ 90 ಸೆಕೆಂಡುಗಳ ಭಾಷಣವು ಕಾಂಗ್ರೆಸ್, ಇಂಡಿಯಾ ಮೈತ್ರಿಕೂಟದಲ್ಲಿ ತಲ್ಲಣ ಮೂಡಿಸಿದೆ" : ಪ್ರಧಾನಿ ಮೋದಿ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement