ಶ್ರೀ ಕಾಂಚಿಕಾ ಪರಮೇಶ್ವರಿ ದೇವಾಲಯದಲ್ಲಿ ನವರಾತ್ರಿ ಉತ್ಸವ

ಕುಮಟಾ;ಬಾಡದ ಶ್ರೀಕಾಂಚಿಕಾ ಪರಮೇಶ್ವರಿ ದೇವಾಲಯದಲ್ಲಿ ಗುರುವಾರದಿಂದ ನವರಾತ್ರಿ ಉತ್ಸವ ಆರಂಭವಾಗಲಿದೆ.ಶ್ರೀದೇವಾಲಯದಲ್ಲಿ ಪ್ರತಿವರ್ಷದಂತೆ ನವರಾತ್ರಿ ಪೂಜಾ ಕಾರ್ಯಕ್ರಮ ಗುರುವಾರ ಮುಂಜಾನೆಯಿಂದ ಆರಂಭವಾಗಲಿದೆ.
ಶ್ರೀದುರ್ಗಾಪಾರಾಯಣ,ಸರ್ವಾಂಕಾರ ಪೂಜೆ,ಸರ್ವಾಪೂಜಾಸೇವೆ,ಫಲಪಂಚಾಮೃತ ಪೂಜೆ,ಪಂಚಾವಾದ್ಯ ಸೇವೆ ಮಹಾಮಂಗಳಾರತಿ ಪೂಜೆ ದಿನಾಂಕ ೧೫ ಶುಕ್ರವಾರದ ತನಕ ಪ್ರತಿನಿತ್ಯ ನಡೆಯಲಿದೆ.ದಿನಾಂಕ ೧೧ ರಂದು ಶಾರದಾಸ್ಥಾಪನೆ,೧೨ ತ್ರಿದಿನ ದೇವಿ ಪೂಜೆ,೧೩ ರಂದು ದುರ್ಗಾಷ್ಟಮಿ,೧೪ ರಂದು ಮಹಾನವಮಿ ಹಾಗೂ ೧೫ ಶುಕ್ರವಾರದಂದು ವಿಜಯದಶಮಿ ಪೂಜಾ ಕಾರ್ಯನಡೆಯಲಿದೆ.
ಭಕ್ತಾದಿಗಳು ಪ್ರತಿ ನಿತ್ಯವೂ ವಿವಿಧ ಪೂಜಾ ಸೇವೆ ನಡೆಸುವಂತವರು ಮುಂಚಿತವಾಗಿ ದೇವಾಲಯದ ಸೇವಾವಿಭಾಗದಲ್ಲಿ ನೊಂದಾಯಿಸಿಕೊಳ್ಳಬಹುದಾಗಿದೆ.
ಶ್ರೀಕಾಂಚಿಕಾ ಪರಮೇಶ್ವರಿ ದೇವಿಯು ಗುಡೆ ಅಂಗಡಿ, ಬಾಡ, ಕಾಗಾಲ ,ಅಘನಾಶನಿ, ಹೊಲನಗದ್ದೆ ಪಂಚಾಯತ್ ವ್ಯಾಪ್ತಿಯ ಜನರ ಗ್ರಾಮ ದೇವತೆಯಾಗಿದೆ. ಶ್ರೀದೇವಿಯ ಸನ್ನಿಧಿಯಲ್ಲಿ ಲಕ್ಷಾಂತರ ಭಕ್ತರು ತಮ್ಮ ಪೂಜಾ ಸೇವೆಯನ್ನು ನೇರವೆರಿಸುತ್ತಾರೆ. ಪ್ರತಿ ವರ್ಷ ಚೈತ್ರಶುದ್ಧ ಹುಣ್ಣಿಮೆಯಂದು ರಥೋತ್ಸವವು ನಡೆಯಲಿದೆ.ಅಂದು ದೇಶವಿದೇಶದಿಂದಲೂ ಲಕ್ಷಾಂತರ ಜನರು ಆಗಮಿಸುತ್ತಾರೆ. ಶ್ರೀದೇವಿಯ ಸ್ಥಳವು ಶಕ್ತಿ ಸ್ಥಳವಾಗಿದ್ದು ಭಕ್ತರ ಇಷ್ಟಾರ್ಥ ನೆರವೆರಿಸುತ್ತದೆ ಎನ್ನುವ ನಂಬಿಕೆಯನ್ನು ಜನರು ಹೊಂದಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ