ಬಡಾಲ ಅಂಕಲಗಿ: ಮನೆ ಕುಸಿದು ಒಂದೇ ಕುಟುಂಬದ ಏಳು ಜನರು ಸಾವು

ಬೆಳಗಾವಿ : ಧಾರಾಕಾರ ಮಳೆಗೆ ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಮನೆ ಕುಸಿದ ಪರಿಣಾಮ ಒಟ್ಟು ಏಳು ಜನ ಮೃತಪಟ್ಟ ಘಟನೆ ನಡೆದ ಬಗ್ಗೆ ಬುಧವಾರ ವರದಿಯಾಗಿದೆ,
ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಸ್ಥಳೀಯ ಖನಗಾವಿ ಕುಟುಂಬದ 7 ಜನರು  ಮೃತಪಟ್ಟಿದ್ದಾರೆ. ಮನೆಯೊಳಗೆ ಸಿಲುಕಿದ ಇನ್ನಿಬ್ಬರನ್ನು ಸುರಕ್ಷಿತವಾಗಿ ಹೊರ ತಂದು ಆಸ್ಪತ್ರೆಗೆ ರವಾನಿಸಲಾಗಿದೆ.
ಮೃತರನ್ನು ಅರ್ಜುನ ಖನಗಾವಿ, ಸಾತವ್ವ ಖನಗಾವಿ, ಗಂಗವ್ವ ಭೀಮಪ್ಪ ಖನಗಾವಿ, ಸವಿತಾ ಭೀಮಪ್ಪ ಖನಗಾವಿ, ಲಕ್ಷ್ಮೀ ಅರ್ಜುನ ಖನಗಾವಿ, ಪೂಜಾ ಅರ್ಜುನ ಖನಗಾವಿ (8 ವರ್ಷ) ಹಾಗೂ ಕಾಶವ್ವ ವಿಠ್ಠಲ ಕೊಲ್ಯಪ್ಪನವರ್ (8) ಎಂದು ಗುರುತಿಸಲಾಗಿದೆ.

ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮನೆ ಗೋಡೆಗಳು ಸಂಪೂರ್ಣವಾಗಿ ಶಿಥಿಲಗೊಂಡ ಪರಿಣಾಮ ಈ ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಸ್ಥಳದಲ್ಲೇ ಐವರು ಸಾವನ್ನಪ್ಪಿದ್ದರು. ಮತ್ತಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲಿ ಅಸುನೀಗಿದ್ದಾರೆ.

ಪರಿಹಾರ ಘೋಷಣೆ
ಸುದ್ದಿ ತಿಳಿಯುತ್ತಿದ್ದಂತೆ ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬಾಳ್ಕರ್​ ಮತ್ತು ತಹಶೀಲ್ದಾರು ಕೂಡ ಸ್ಥಳಕ್ಕೆ ದೌಡಾಯಿಸಿದ್ದಾರೆ
ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಿ ಸರ್ಕಾರ ಘೋಷಣೆ ಮಾಡಿದೆ. ಘಟನೆ ಕುರಿತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ತಕ್ಷಣ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಬಿಜೆಪಿ ಅಭ್ಯರ್ಥಿಗಳ 7ನೇ ಪಟ್ಟಿ ಪ್ರಕಟ : ಚಿತ್ರದುರ್ಗದಲ್ಲಿ ಹಾಲಿ ಸಂಸದರಿಗೆ ಕೊಕ್, ಯಡಿಯೂರಪ್ಪ ಆಪ್ತನಿಗೆ ಟಿಕೆಟ್‌

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement