5 ವರ್ಷದಲ್ಲಿ 75 ಯುವತಿಯರ ಜೊತೆ ಈತನ ಮದುವೆ..!..ಈತ ನೀಡಿದ ಇನ್ನಷ್ಟು ಮಾಹಿತಿಗೆ ಪೊಲೀಸರೇ ಶಾಕ್..!!

ನವದೆಹಲಿ: ಮಧ್ಯಪ್ರದೇಶದಲ್ಲಿ ಸಿಕ್ಕಿಬಿದ್ದ ಯುವಕ ಬಹಿರಂಗಪಡಿಸಿದ ಮಾಹಿತಿಗೆ ಪ್ರಕರಣದ ತನಿಖೆಯಲ್ಲಿ ತೊಡಗಿದ್ದ ಪೊಲೀಸ್ ತಂಡವೇ ಹೌಹಾರಿದೆ…!
ಕೆಲವು ತಿಂಗಳ ಹಿಂದೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಭೇದಿಸಲಾದ ವೇಶ್ಯಾವಾಟಿಕೆ ದಂಧೆಯ ಕುರಿತು ಶಾಕಿಂಗ್​ ಸಂಗತಿ ಬೆಳಕಿಗೆ ಬಂದಿದೆ. ಪ್ರಕರಣದ ಪ್ರಮುಖ ಆರೋಪಿ ಮುನೀರ್​ ಇಲ್ಲಿವರೆಗೂ 75 ಮದುವೆ ಆಗಿರುವ ವಿಚಾರ ಬಯಲಾಗಿದೆ.
ಈ ಆರೋಪಿ ಮುನೀರ್​ ಬಾಂಗ್ಲದೇಶ ಮೂಲದವನಂತೆ. ಈತ ಇಲ್ಲಿಯವರೆಗೂ ಭಾರತಕ್ಕೆ 200 ಮಹಿಳೆರನ್ನು ಕಳ್ಳಸಾಗಾಣೆ ಮಾಡಿರುವುದಾಗಿ ತಿಳಿಸಿದ್ದಾನೆ. ಬಡ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಅವರುಗೆ ಸಹಾಯ ಮಾಡುವ ನೆಪದಲ್ಲಿ ಅವರನ್ನು ವೇಶ್ಯಾವಾಟಿಕೆ ದಂಧೆಗೆ ದೂಡುತ್ತಿದ್ದ ಎಂಬ ಭಯಾನಕ ಸಂಗತಿ ವಿಚಾರಣೆ ಬೆಳಕಿಗೆ ಬಂದಿದೆ.
75 ಬಾರಿ ವಿವಾಹವಾದ..
ದೈನಿಕ್ ಭಾಸ್ಕರ್ ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಆರೋಪಿ ಮುನೀರ್ ಮೇಲೆ 10 ಸಾವಿರ ರೂಪಾಯಿಗಳ ಬಹುಮಾನವಿತ್ತು. ಆತ ಬಾಂಗ್ಲಾದೇಶದ ಜಸೋರ್‌ನವನು. ಅವರು ಹೆಚ್ಚಿನ ಹುಡುಗಿಯರನ್ನು ಮದುವೆಯಾದ ಮತ್ತು ನಂತರ ಅವರನ್ನು ಭಾರತದಲ್ಲಿ ಮಾರಾಟ ಮಾಡಿದ್ದಾನೆ. ಅದರ ಹಿಂದೆ ದೊಡ್ಡ ಜಾಲವಿದೆ. ಮಧ್ಯಪ್ರದೇಶ ಪೊಲೀಸರ ವಿಚಾರಣೆಯ ಸಮಯದಲ್ಲಿ, ತಾನು 75 ಹುಡುಗಿಯರನ್ನು ಮದುವೆಯಾಗಿದ್ದೇನೆ ಎಂದೂ ಆರೋಪಿಯು ಹೇಳಿದ್ದು ಕೇಳಿ ಪೊಲೀಸರೇ ದಂಗಾಗಿ ಹೋಗಿದ್ದಾರೆ..
ಬಾಂಗ್ಲಾದೇಶ ಮತ್ತು ಭಾರತದ ಪೋರಸ್ ಗಡಿ ಸಮೀಪದ ಸಣ್ಣ ಹಳ್ಳಿಯಲ್ಲಿರುವ ಏಜೆಂಟರ ಮೂಲಕ ಆರೋಪಿ ಹುಡುಗಿಯರನ್ನು ಭಾರತಕ್ಕೆ ಕರೆತರುತ್ತಿದ್ದ.
ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದ ಮುನೀರ್​, ಬಾಂಗ್ಲದೇಶ ಮತ್ತು ಭಾರತ ನಡುವೆ ಆರಾಮಾಗಿ ಓಡಾಡಿಕೊಂಡಿದ್ದ. ಸುಲಭವಾಗಿ ಹಣ ಮಾಡುವ ಗೀಳಿಗೆ ಬಿದ್ದಿದ್ದ ಆರೋಪಿಗೆ ಬಡ ಹೆಣ್ಣುಮಕ್ಕಳೇ ಪ್ರಮುಖ ಬಲಿಪಶುಗಳಾಗುತ್ತಿದ್ದರು. ಭಾರತದಂತಹ ಪ್ರಮುಖ ನಗರಗಳಲ್ಲಿ ಕೆಲಸ ಮತ್ತು ಕೈತುಂಬ ಹಣ ಕೊಡಿಸುವುದಾಗಿ ನಂಬಿಸಿ ಕರೆತಂದು ವೇಶ್ಯಾವಾಟಿಕೆ ದಂಧೆಗೆ ನೂಕುತ್ತಿದ್ದ. ಅಲ್ಲದೆ, ತಾನೂ ಕೂಡ ಸುಂದರ ಯುವತಿಯರನ್ನು ಮದುವೆ ಆಗಿ ಕೆಲ ದಿನಗಳ ನಂತರ ಅವರನ್ನು ಕೂಡ ಬಲವಂತವಾಗಿ ಅದೇ ದಂಧೆ ಇಳಿಸುತ್ತಿದ್ದ.
ಕಳೆದ ಐದು ವರ್ಷಗಳಲ್ಲಿ ಸುಮಾರು 75 ಮದುವೆ ಮಾಡಿಕೊಂಡಿರುವ ಈತ 200 ಮಹಿಳೆಯರನ್ನು ಬಾಂಗ್ಲದೇಶದಿಂದ ಪಶ್ಚಿಮ ಬಂಗಾಳ ಮಾರ್ಗವಾಗಿ ಭಾರತಕ್ಕೆ ಕಳ್ಳಸಾಗಾಣೆ ಮಾಡಿದ್ದಾನೆ. ಕೊಲ್ಕತ್ತದ ಬ್ಯುಟಿಷಿಯನ್​ ಮಹಿಳೆಯರಿಗೆ ವಿಶೇಷ ತರಬೇತಿ ನೀಡುತ್ತಿದ್ದಳು. ಹೇಗೆ ಮಾತನಾಡಬೇಕು? ಹೇಗೆ ನಡೆಯಬೇಕು? ಮತ್ತು ಹೇಗೆ ಡ್ರೆಸ್​ ಮಾಡಿಕೊಳ್ಳಬೇಕು ಎಂಬುದನ್ನು ತರಬೇತಿ ನೀಡಿದ ಬಳಿಕ ಬಲವಂತವಾಗಿ ಅವರನ್ನು ವೇಶ್ಯಾವಾಟಿಕೆಗೆ ದೂಡಲಾಗುತ್ತಿತ್ತು. ಶ್ರೀಮಂತರನ್ನು ಸಂಪರ್ಕಿಸಿ ಅವರಿಂದ ಹಣ ಪಡೆದು ಮಹಿಳೆಯರನ್ನು ಸಾಗಾಟ ಮಾಡಲಾಗುತ್ತಿತ್ತು.
11 ತಿಂಗಳ ಹಿಂದೆಯೇ ಇಂದೋರ್​ನ ವಿಜಯನಗರ ಏರಿಯಾ ಮೇಲೆ ದಾಳಿ ಮಾಡಿದಾಗ 21 ಬಾಂಗ್ಲಾ ಮಹಿಳೆಯರನ್ನು ಬಂಧಿಸಲಾಗಿತ್ತು. ಈ ವೇಳೆ ಪ್ರಮುಖ ಆರೋಪಿ ಮುನೀರ್​ ಪರಾರಿಯಾಗಿದ್ದ. ಬಳಿಕ ಮಹಿಳೆಯರನ್ನು ವಿಚಾರಣೆ ನಡೆಸಿದಾಗ ಬಂಧಿತ 21 ಮಹಿಳೆಯರಲ್ಲಿ 12 ಮಂದಿ ಮುನೀರ್​ನನ್ನು ಮದುವೆ ಆಗಿದ್ದರು ಎಂಬ ವಿಚಾರ ತಿಳಿದು ಪೊಲೀಸರಿಗೆ ಶಾಕ್​ ಆಗಿತ್ತು. ಈ ವೇಳೆ ಆತನ ಸುಳಿವು ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿ ಪೊಲೀಸ್​ ಇಲಾಖೆ ಘೋಷಿಸಿತ್ತು.
ಮತ್ತೊಂದು ಮದುವೆ ಆಗಿ ಆಕೆಯನ್ನು ಮಾರಾಟ ಮಾಡುವ ವೇಳೆ ಮುನೀರ್​ ಸೂರತ್​ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈವರೆಗೆ 75 ಮದುವೆ ಆಗಿರುವುದಾಗಿ ಮತ್ತು ಎಲ್ಲರನ್ನು ಮಾರಾಟ ಮಾಡಿರುವುದಾಗಿಯೂ ಮುನೀರ್​ ಪೊಲೀಸ್​ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.
ವಿಚಾರಣೆಯ ಸಮಯದಲ್ಲಿ, ಮುನೀರ್ ಮೊದಲು ಬಾಂಗ್ಲಾದೇಶದ ಹುಡುಗಿಯರು ಮತ್ತು ಮಹಿಳೆಯರು ತನ್ನ ಗುರಿಯೆಂದು ಒಪ್ಪಿಕೊಂಡಿದ್ದಾನೆ. ತಾನು ಪ್ರತಿ ತಿಂಗಳು ಸುಮಾರು 55 ಹುಡುಗಿಯರನ್ನು ತನ್ನ ಬಲೆಗೆ ಬೀಳಿಸುತ್ತಿದ್ದೆ ಎಂದು ಮುನೀರ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

advertisement
ಓದಿರಿ :-   ಸುಪ್ರೀಂಕೋರ್ಟ್‌ ಕುರಿತು ಕಪಿಲ್ ಸಿಬಲ್ ಹೇಳಿಕೆ : ಅವರ ವಿರುದ್ಧ ಕಂಟೆಂಪ್ಟ್‌ ಪ್ರಕ್ರಿಯೆಗೆ ಅಟಾರ್ನಿ ಜನರಲ್‌ ಒಪ್ಪಿಗೆ ಕೋರಿದ ಇಬ್ಬರು ವಕೀಲರು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

3.7 / 5. ಒಟ್ಟು ವೋಟುಗಳು 3

ನಿಮ್ಮ ಕಾಮೆಂಟ್ ಬರೆಯಿರಿ

advertisement