ವಿಶ್ವ ಕುಸ್ತಿ ಚಾಂಪಿಯನ್ ಶಿಪ್; ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಅಂಶು ಮಲಿಕ್

ಓಸ್ಲೋ: ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆಯೆಂದು ಕುಸ್ತಿಪಟು ಅಂಶು ಮಲಿಕ್ ಭಾಜನರಾಗಿದ್ದಾರೆ.
ನಾರ್ವೆಯ ಓಸ್ಲೋದಲ್ಲಿ ಗುರುವಾರ ನಡೆದ 57 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ 2016ರ ಒಲಿಂಪಿಕ್ ಚಾಂಪಿಯನ್ ಹೆಲೆನ್ ಲೌಸಿ ಮಾರೌಲಿ ವಿರುದ್ಧ ಸೋಲುವ ಮೂಲಕ ಅಂಶು ಮಲಿಕ್ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು.
ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾರತದ ಮೊದಲ ಮಹಿಳಾ ಫೈನಲಿಸ್ಟ್ ಆದ ನಂತರ ಇಂದು ನಡೆದ ಪಂದ್ಯದಲ್ಲಿ 19ರ ಹರೆಯದ ಯುವತಿ ಮೊದಲಿಗೆ ಆಕ್ರಮಣಕಾರಿ ಶೈಲಿಯಲ್ಲಿ ಆಟವಾಡಿದರು. ಆರಂಭದಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದ್ದರು, ಆದರೆ, ಸೆಕೆಂಡಿನಲ್ಲಿಯೇ ಪಂದ್ಯವು ನಾಟಕೀಯ ಶೈಲಿಯಲ್ಲಿ ಬದಲಾಯಿತು.
ಮೌರೌಲಿ ತನ್ನ ತೋಳಿತ ಹಿಡಿತದಲ್ಲಿ ಅಂಶು ಮಲ್ಲಿಕ್ ಅವರನ್ನು ಪಡೆದು 2-1 ಅಂತರದಲ್ಲಿ ಮುನ್ನಡೆ ಸಾಧಿಸಿದರು. ತದನಂತರ ಅಂಶುವಿನ ಬಲಗೈಯನ್ನು ಬಿಗಿಯಾಗಿ ಹಿಡಿದುಕೊಂಡು 4-1 ಅಂಕ ಪಡೆದುಕೊಳ್ಳುವುದರೊಂದಿಗೆ ಗೆಲುವು ಸಾಧಿಸಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ